ಕಾದಿಹೆನು ನಿನಗಾಗಿ

ಒಂದು ದಿನ ನನ್ನ ಜವ
ಬೆಟ್ಟದೆತ್ತರದಲಿ,
ಸುಂದರ ರಾವಣನಂತೆ ಕಾಣಿಸಿಕೊಂಡು
ನನ್ನೆದುರು ಬಂದು ನಿಂತ
ಏನಯ್ಯ, ಮಹಾರಾಯ ಮರೆತೆಯಾ ಬರುವುದಿತ್ತಲ್ಲ ನನ್ನ ದರಬಾರಿಗೆ ಅದ್ಯಾಕೆ ಬರಲಿಲ್ಲ.. ನಾನೇ ಬರಬೇಕೆಂದು ನಿನ್ನ ಭ್ರಮೆಯೋ ಜವ ಸತ್ಯವಂತನೆಂಬ ಮನದನಿಯ ಉತ್ಕಟವೊ' ಅದೇನೂ ಅಲ್ಲ..
ನೀನು ಜವರಾಯ, ಮಹಾರಾಯ
ಹಿರಿಯ ಅನಂತ
ನಿನ್ನ ಕರೆಯ ಮನ್ನಿಸದಿರಲು
ನಾನು ಎಷ್ಟರ ಘನವಂತ
ನನಗೆ ಇರವಿಲ್ಲ, ಸ್ಥಿರವಿಲ್ಲ
ನೆಲೆಯಿಲ್ಲ, ಬೆಲೆಯಿಲ್ಲ
ಇರಲು ಸೂರಿಲ್ಲದೆ ಹಣ್ಣಾಗಿ
ಸ್ವಂತದ ಒಂದಿನಿತು ಮಣ್ಣಿಲ್ಲದೆ
ಕಾತರಿಸಿ, ಕಂಪಿಸಿ ಕುಳಿತವನು
ನಿನ್ನ ಬರವನ್ನು ಕರೆಯನ್ನು
ಮಾಣದಿರಲು ನನಗೇನು ಸೊಕ್ಕೆ?
ಒಂದೆರಡು ಧರ್ಮವಿದೆ, ಕರ್ಮವಿದೆ ಮುಗಿಸಲು
ಬರಲಿಲ್ಲ ಅದಕ್ಕೆ…
ನಿನ್ನೆ ರಾತ್ರಿಯ ನಿದ್ರೆಯಲಿ ಬಂದಾಗ
ನಿನಗೆ ಹೇಳಿದ್ದೆ ನನ್ನ ಅಳಲ
`ಮೊದಲು ನಾನು ಹೋಗಿ
ಅಲ್ಲಿಯ ಅವಸ್ಥಾಂತರಗಳನ್ನು
ಎಸೆಸ್ ಮಾಡಿ ನಿಮಗೆ
ತಿಳಿಸುವೆನೆಂದು ಹೇಳಿದ
ಅವಳ ಕರೆಗಾಗಿ ಕಾಯುತಿಹೆನು
ಒಬ್ಬ ಗ್ಯಾಡೊನ್ನ ಕಾಯುವ ಹಾಗೆ
ಅವನು ನೀನೆಯೇ ಎನ್ನುವ
ಅನುಮಾನದಲ್ಲಿ…
ನಿನ್ನೂರಿನಿಂದ ನನ್ನವಳ
ಕರೆಯೂ ಬರುವುದು
ಆಮೇಲೆ ಪಾರ್ಕಲಾಂ ಜವರಾಯ
ನೀನೆ ಬರಬೇಕಾಗಿಲ್ಲ
ನಿನ್ನೊಬ್ಬ ಸೇವಕನ ಕಳುಹಿಸಿದರೆ ಸಾಕು
ನನಗೇ ನನ್ನ ಮೇಲೆ ಮುನಿಸಾದಾಗ
ನಾನು ಹೊರಡುವೆ ಮಾತ್ರ
ನಿನ್ನದೊಂದಿನಿತು ಟ್ರಿಂಕ
ಬಂದರೆ ಸಾಕು
ನನ್ನನೆಚ್ಚರಿಸಲು…!

  • ಕಾವಿಕೊ’ (ವಿಶ್ವನಾಥ ಕಾರ್ನಾಡ್) ಮುಂಬಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಕಾದಿಹೆನು ನಿನಗಾಗಿ”

  1. Chintamani Sabhahit

    ಇಂಗಿತದ ಅಳಲನ್ನು
    ಮನದಾಳದಿಂದ
    ಹಿಡಿದಿಡುವ ತವಕಕ್ಕೆ
    ಅಂತಕನ ದಫ್ತರವ
    ಬದಲಿಸುವ
    ‘ಆತ್ಮ ಶಕ್ತಿ’ಯ ಛಕ್ಕೆ!

    ಆ ‘ಕವಿ ಸಮಯ’ಕ್ಕೆ ಅಭಿನಂದನೆಗಳು!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter