ಸಾಹಿತ್ಯ ಹಬ್ಬ ೨೦೨೪

ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಮತ್ತು ಬೆಂಗಳೂರಿನ ಶಂಪಾ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಕಟ್ಟೆ ಮತ್ತು ಕಾಸರಗೋಡಿನ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಕಾರದೊಂದಿಗೆ ಮಾರ್ಚ್ ೧೬ ಮತ್ತು ೧೭ರಂದು ಕಾಸರಗೋಡಿನಲ್ಲಿ ಎರಡು ದಿನಗಳ ಸಾಹಿತ್ಯ ಹಬ್ಬವನ್ನು ಆಯೋಜಿಸಲಾಗಿದೆ. ಇದರಲ್ಲಿ ನಾಡಿನ ಖ್ಯಾತ ಸಾಹಿತಿಗಳು ಮತ್ತು ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸ, ವಿಚಾರ ಗೋಷ್ಠಿ ಮತ್ತು ಸಂವಾದಗಳು ನಡೆಯಲಿವೆ. ಈ ಸಾಹಿತ್ಯ ಹಬ್ಬದಲ್ಲಿ ನೋಂದಾಯಿತ ಪ್ರತಿನಿಧಿಗಳು ಮಾತ್ರ ಭಾಗವಹಿಸಬಹುದು.

  • ಸಾಮಾನ್ಯ ಪ್ರತಿನಿಧಿ ಪ್ರವೇಶ ಶುಲ್ಕ 1000=00 ರೂ.
  • ವಿದ್ಯಾರ್ಥಿ ಪ್ರತಿನಿಧಿ ಪ್ರವೇಶ ಶುಲ್ಕ 500=00 ರೂ.
  • ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರು ಮತ್ತು ವಿಭಾಗ ಮುಖ್ಯಸ್ಥರಿಂದ ಪಡೆದ ದೃಢೀಕರಣ ಪತ್ರ ನೀಡಿದಲ್ಲಿ ಮಾತ್ರ 500=00 ರೂ. ಶುಲ್ಕ ಪಾವತಿಸಬಹುದು. ಇಲ್ಲದಿದ್ದರೆ 1000=00 ರೂ. ಶುಲ್ಕ ಪಾವತಿಸಬೇಕಾಗುವುದು.
  • ನೋಂದಾಯಿತ ಪ್ರತಿನಿಧಿಗಳಿಗೆ ಮಾತ್ರ ಎರಡು ದಿನಗಳ ಕಾಲ ಉಪಹಾರ, ಊಟ ಮತ್ತು ವಸತಿಯ ವ್ಯವಸ್ಥೆ ಕಲ್ಪಿಸಲಾಗುವುದು.
  • ಎಲ್ಲ ನೋಂದಾಯಿತ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
  • ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಮಾರ್ಚ್ ೦೫ ಕೊನೆಯ ದಿನಾಂಕ.
  • ಸೀಮಿತ ಸಂಖ್ಯೆಯ ಪ್ರತಿನಿಧಿಗಳಿಗೆ ಅವಕಾಶವಿರುವುದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
  • ಅರ್ಜಿ ಮತ್ತು ದೃಢೀಕರಣ ಪತ್ರಗಳ ಮುದ್ರಿತ ಪ್ರತಿಗಳಲ್ಲಿ ಮಾಹಿತಿ ತುಂಬಿ ಅದರ ಫೋಟೋ ಮತ್ತು ಆನ್ ಲೈನ್ ಮೂಲಕ ನೋಂದಣಿ ಶುಲ್ಕವನ್ನು 9110687473 ಎಂಬ ಮೊಬೈಲ್ ನಂಬರಿಗೆ ಫೋನ್ ಪೇ ಮೂಲಕ ಪಾವತಿಸಿದ ಬಳಿಕ ರಶೀದಿಯ ಫೋಟೋವನ್ನು ಅದೇ ವಾಟ್ಸಪ್ ಸಂಖ್ಯೆಗೆ ಕಳುಹಿಸುವುದರ ಮೂಲಕ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಚಾಲಕರನ್ನು ಸಂಪರ್ಕಿಸಿ :
ವಿಕಾಸ ಹೊಸಮನಿ – 9110687473
ಡಾ. ಸುಭಾಷ ಪಟ್ಟಾಜೆ – 9645081966

ಸ್ಥಳ ಮತ್ತು ದಿನಾಂಕ

ನಿಸರ್ಗ ಧಾಮ
618/ಬಿ, ಕುಡ್ತಡ್ಕ, ಕುಡಾಲ್ ಮೇರ್ಕಳ ಪೋಸ್ಟ್, ಚೇವಾರ್, ವಯ ಉಪ್ಪಳ, ಕಾಸರಗೋಡು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter