ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’

“ಯಾವುದೇ ಕೃತಿಗಳಲ್ಲಿ ಮೌಲ್ಯ ಮತ್ತು ಗುಣಮಟ್ಟ ಮುಖ್ಯ”

– ಪೇಜಾವರ ಹರಿಯಪ್ಪ

ಮಂಗಳೂರು :   ಕೃತಿಗಳು ಎಷ್ಟೇ ಬಂದರೂ ಕೂಡಾ ಅದರಲ್ಲಿ ಮೌಲ್ಯ ಮುಖ್ಯವಾಗುತ್ತದೆ.ಅದೇ ರೀತಿ ಕತೆಗಳಲ್ಲಿಯೂ ಗುಣಮಟ್ಟವನ್ನು ಗಮನಿಸಬೇಕು.ಶ್ರೀನಿವಾಸ ಜೋಕಟ್ಟೆ ಅವರನ್ನು ನಾನು ಪ್ರಾಥಮಿಕ ಶಾಲಾ ದಿನಗಳಿಂದಲೂ ಬಲ್ಲೆ.ಮುಂಬಯಿಯಲ್ಲಿದ್ದರೂ ಅವರಲ್ಲಿನ ಸಾಹಿತ್ಯದ ಉತ್ಸಾಹಕ್ಕೆ ಖುಷಿಗೊಂಡಿದ್ದೇನೆ ಎಂದು ಪ್ರಶಸ್ತಿವಿಜೇತ ಕವಿ,ಕತೆಗಾರ ,ಗೋಕರ್ಣನಾಥ ಕಾಲೇಜ್ ನ ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಪೇಜಾವರ ಹರಿಯಪ್ಪ ಹೇಳಿದರು.

ನಗರದ ಶ್ರೀನಿವಾಸ ಹೊಟೇಲ್ ಸಭಾಗೃಹದಲ್ಲಿ ಜು.28 ರಂದು ಸಂಜೆಗೆ ಜರಗಿದ  ಮುಂಬೈ ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ಮುಂಬಯಿ ಬಗ್ಗೆ ಬರೆದ ‘ಮುಂಬಯಿ ಮಿಂಚು'( ನನಗೆ ದಕ್ಕಿದಷ್ಟು ಮಹಾನಗರ)ಲೇಖನಗಳ ಕೃತಿ ಮತ್ತು 39 ನೆಯ ಕೃತಿ ‘ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು’ ಕಥಾಸಂಕಲನ‌ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತಾಡಿದರು.

‘ಮುಂಬಯಿ ಮಿಂಚು’ ಕೃತಿಯನ್ನು ಬಿಡುಗಡೆಗೊಳಿಸಿದ ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ರೆಸಿಡೆಂಟ್ ಎಡಿಟರ್ ಯು.ಕೆ. ಕುಮಾರನಾಥ್ ಮಾತನಾಡಿ ಶ್ರೀನಿವಾಸ ಜೋಕಟ್ಟೆ ಅವರು ಮುಂಬೈಯಲ್ಲಿದ್ದು ಅಲ್ಲಿನ ವಿಚಾರಗಳನ್ನು ವಿಭಿನ್ನ ದೃಷ್ಟಿಯಿಂದ ಗ್ರಹಿಸಿ ಬರೆಯುವ ಅವರ ಬರಹಗಳು ಓದುಗರಿಗೆ ಆಪ್ತವಾಗುತ್ತವೆ ಎನ್ನುತ್ತಾ, ಜೋಕಟ್ಟೆಯವರು ಮುಂಬೈಯ ಕೊರೊನಾ ಕಾಲದ ದಿನಗಳ ಕುರಿತಂತೆ ಅಲ್ಲಿನ ದೃಶ್ಯಗಳನ್ನು ಬಿಚ್ಚಿಡುವ ಒಂದು ಕೃತಿಯನ್ನು ಆದಷ್ಟು ಶೀಘ್ರ ತರುವಂತಾಗಲಿ ಎಂದು ಆಶಿಸಿದರು.

‘ಶ್ರೀನಿವಾಸ ಜೋಕಟ್ಟೆ ಸಮಗ್ರ ಕಥೆಗಳು’ ಕಥಾ ಸಂಕಲನವನ್ನು ಬಿಡುಗಡೆ ಮಾಡಿದ ಮಂಗಳ ವಾರಪತ್ರಿಕೆಯ  ಮಂಗಳೂರು ವಿಭಾಗದ ಟಿ.ಕೆ. ಸುನಿಲ್ ಕುಮಾರ್ ಮಾತನಾಡಿ ಜೋಕಟ್ಟೆ ಅವರ ಬರಹಗಳು ಬರೇ ಮುಂಬೈಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಕರಾವಳಿಯ ಚಿತ್ರಣಗಳನ್ನೂ ಜೊತೆಯಾಗಿ ಇಟ್ಟುಕೊಂಡು ಸಾಗಿಸುವ ಅವರ ಬರವಣಿಗೆಯು ಮುದ ನೀಡುತ್ತವೆ ಎಂದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಲೇಖಕಿ ಉಪನ್ಯಾಸಕಿ ನಾಗವೇಣಿ ಮಂಚಿ ಮತ್ತು ಸಂಯುಕ್ತ ಕರ್ನಾಟಕದ ಮಂಗಳೂರು ಬ್ಯೂರೋ ಚೀಫ್ ರಾಮಕೃಷ್ಣ ಆರ್ ಮಾತನಾಡಿ ಶ್ರೀನಿವಾಸ ಜೋಕಟ್ಟೆ ಅವರ ಮುಂಬೈ ಮತ್ತು ಮಂಗಳೂರು ನಂಟನ್ನು ನೆನಪಿಸಿಕೊಳ್ಳುತ್ತಾ  39ನೇ ಕೃತಿ ಮಂಗಳೂರಲ್ಲಿ ಬಿಡುಗಡೆ ಗೊಂಡಿರುವುದು ನಮಗೂ ಅಭಿಮಾನದ ಸಂಗತಿ ಎಂದರು.

ಕೃತಿಕಾರರ ಶ್ರೀನಿವಾಸ ಜೋಕಟ್ಟೆ ಮಾತನಾಡಿ ನನಗೆ ಮುಂಬೈಯಷ್ಟೇ ಮಂಗಳೂರಿನ ಸೆಳೆತವನ್ನೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.ಈ ಹಿಂದೆ ಮತ್ತೆ ಮಂಗಳೂರಿಗೆ ಮರಳಿದ್ದ ದಿನಗಳಲ್ಲಿ ಇಲ್ಲಿನ ಪತ್ರಕರ್ತ ಗೆಳೆಯರು ನೀಡಿದ  ಪ್ರೀತಿ ವಿಶ್ವಾಸದಿಂದಾಗಿ ಮುಂಬೈ ಜೊತೆಗೆ ಕೆಲವೊಮ್ಮೆ ನಾನು ಮಂಗಳೂರಲ್ಲಿಯೂ ಕೃತಿಗಳ ಬಿಡುಗಡೆ ಮಾಡಿರುವುದು ನನಗೆ ಖುಷಿಯ ಸಂಗತಿಯಾಗಿದೆ. ಆ ಮೂಲಕ ನನಗೆ ಮುಂಬೈಯ ಕನ್ನಡ ಕಾರ್ಯಕ್ರಮಗಳನ್ನೂ ನಿಮ್ಮೆಲ್ಲರ ಮುಂದಿಡುವ ಒಂದು ಅವಕಾಶವೂ ಲಭಿಸಿದಂತಾಗುತ್ತದೆ ಎಂದರು.

ಪತ್ರಕರ್ತರಾದ ಎಸ್ ಜಯರಾಮ್ ಮತ್ತು ರಾಮಕೃಷ್ಣ ಆರ್, ರೇಷ್ಮಾ ಉಳ್ಳಾಲ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿಶ್ವವಾಣಿ ದೈನಿಕದ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಶುಭಹಾರೈಸಿದರು.

———————

ಪೋಟೋ:

‘ಮುಂಬಯಿ ಮಿಂಚು’ ಮತ್ತು ‘ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು’ ಎರಡು ಕೃತಿಗಳ ಬಿಡುಗಡೆ ಮಾಡಿದ ಗಣ್ಯರು. ಪತ್ರಕರ್ತ ಜಿತೇಂದ್ರ ಕುಂದೇಶ್ವರ, ನಾಗವೇಣಿ ಮಂಚಿ, ರಾಮಕೃಷ್ಣ ಆರ್, ಟಿ ಕೆ ಸುನಿಲ್ ಕುಮಾರ್, ಶ್ರೀನಿವಾಸ ಜೋಕಟ್ಟೆ, ಪೇಜಾವರ ಹರಿಯಪ್ಪ,ಮತ್ತು ಯು ಕೆ ಕುಮಾರನಾಥ್ ಉಪಸ್ಥಿತರಿದ್ದರು.

——–

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter