ಉತ್ಕೃಷ್ಟ ಸಾಧನೆ : ಪ್ರೊ. ಜಿ. ಎನ್. ಉಪಾಧ್ಯ ಅವರಿಗೆ ಗೌರವ 

ಮುಂಬೈ :ಆ 4,ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿ, ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಲೇ ಶೈಕ್ಷಣಿಕ ವಲಯದಲ್ಲಿ ಉತ್ಕೃಷ್ಟ ಸಾಧನೆಗೈದ ಪ್ರೊ. ಜಿ. ಎನ್. ಉಪಾಧ್ಯ ಅವರನ್ನು ಮುಂಬೈ ವಿವಿ ಪ್ರಾಧ್ಯಾಪಕರ ಅಸೋಸಿಯೇಷನ್ ವತಿಯಿಂದ  ವಿಶೇಷ ಮಾನಪತ್ರ ನೀಡಿ ಗೌರವಿಸಲಾಯಿತು.

ಮುಂಬೈ ವಿವಿ ಪ್ರಾಧ್ಯಾಪಕರ ಸಂಘ ಆಗಸ್ಟ್ 3 ರಂದು ಕಲಿನಾ ಕ್ಯಾಂಪಸ್ದಲ್ಲಿ ಆಯೋಜಿದ್ದ  ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಕ್ರಾಂತಿ  ಜಿಜೂರ್ಕರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವಿವಿಯ ಗುಣವಂತ ಪ್ರಾಧ್ಯಾಪಕರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಸರಿಯಾದ ಅನುದಾನ ಕೊಡುತ್ತಿಲ್ಲ. ಉನ್ನತ ಶಿಕ್ಷಣ ಬಡವರಿಗೆ, ಗ್ರಾಮೀಣ ಜನರಿಗೆ ಇಂದೂ ಮರೀಚಿಕೆಯೇ ಆಗಿದೆ. ಬುದ್ದಿಜೀವಿಗಳಾದ ಶಿಕ್ಷಕರು ಸಂಘಟಿರಾದರೆ ಈ ವಲಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.ಪ್ರಾಧ್ಯಾಪಕರು ಸಾಮಾಜಮುಖಿಯಾಗಿ ಹೆಚ್ಚು ಕೆಲಸ ಮಾಡಬೇಕು ಎಂದು ಸಲಹೆ ಸೂಚನೆಗಳನ್ನು ನೀಡಿದರು.

ಅಸೋಸಿಯೇಷನ್ ಅಧ್ಯಕ್ಷ ಪ್ರೊ. ಸುರೇಶ್ ಮೈಂದ್, ಕಾರ್ಯದರ್ಶಿ ಡಾ.ಅನಿಲ್ ಬಣಕರ್, ಡಾ ವಂದನಾ ಮಹಾಜನ್, ಡಾ. ಜಾಧವ್ ಅವರು ವೇದಿಕೆಯಲ್ಲಿ ಉಪ ಸ್ಥಿತರಿದ್ದರು. ಡಾ. ಭೂಪೇಂದ್ರ ಪುಷ್ಕರ್ ಅವರು ವಿಶೇಷ ಸಾಧನೆಗೈದ ಪ್ರಾಧ್ಯಾಪಕರ ಸಾಧನೆಯನ್ನುಕುರಿತು ಸಭೆಗೆ ಪರಿಚಯ ಮಾಡಿಕೊಟ್ಟರು.ಡಾ. ಬಣಕರ್ ಅವರು ವಂದಿಸಿದರು.

ಡಾ. ಜಿ. ಎನ್.ಉಪಾಧ್ಯ

ಡಾ ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 85ಕ್ಕೂ ಹೆಚ್ಚು  ಕೃತಿಗಳನ್ನು ರಚಿಸಿರುವ  ಅವರು ತಮ್ಮದೇ ಆದ ಅಭಿಜಿತ್ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ.ಅವರ  ಮಹಾರಾಷ್ಟ್ರದ ಕನ್ನಡ ಶಾಸನಗಳು, ಗೋದಾವರಿ ತೀರದಲ್ಲಿ ಕನ್ನಡದ ಕುರುಹು, ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು, ಸಿದ್ದರಾಮನ ಸೊನ್ನಲಿಗೆ, ಅನಿಕೇತನ ಪ್ರಜ್ಞೆ ಮತ್ತು ಕನ್ನಡ,ಮುಂಬೈ ಕನ್ನಡ ಪರಿಸರ, ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ.ಅವರ ಮಾರ್ಗದರ್ಶನದಲ್ಲಿ ಈವರೆಗೆ 82 ಮಂದಿ ಎಂ. ಫಿಲ್ ಹಾಗೂ ಪಿಎಚ್. ಡಿ ಪದವಿಯನ್ನು ಪಡೆದಿದ್ದಾರೆ.  ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ಎ ಗ್ರೇಡ್ ತಂದುಕೊಡುವಲ್ಲಿ ಪ್ರೊ. ಉಪಾಧ್ಯ ಅವರು ಸಫಲರಾಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಉತ್ಕೃಷ್ಟ ಸಾಧನೆ : ಪ್ರೊ. ಜಿ. ಎನ್. ಉಪಾಧ್ಯ ಅವರಿಗೆ ಗೌರವ ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter