ಸುರಿವ ಜಡಿಮಳೆಯ ಒಂದು ದಿನ
ನಾ ಕೂಡುತ್ತೇನೆ ಕೈಯ್ಯಲ್ಲಿ ಹಿಡಿದು
ಹಬೆಯಾಡುವ ಕಾಫಿ ಲೋಟ
ಛಾವಣಿಯಂಚಿಂದುರುಳುವ ಹನಿಗಳ ನೋಡುತ್ತ.
ಹೊರಗೆ ಆಕಾಶ ಮೋಡದಿಂದಾವೃತವಾಗಿ
ಜಗತ್ತು ಉದಾಸೀನ ಬೇಸರದಲ್ಲಿದೆ,
ಆದರೆ ಒಳಗೆ, ಲೋಟದ ಹಿತವಾದ ಬಿಸಿ
ನನ್ನ ನರನಾಡಿಗಳಲ್ಲಿ ಉಲ್ಲಾಸ ತುಂಬುತ್ತದೆ.
ಕಾಫಿ ಬೀಜಗಳ ಘಮ ಮೂಗಿಗಡರುತ್ತದೆ,
ಅದರಲ್ಲದೆಂಥ ಸಮಾಧಾನ ಯಾರಿಗೂ ಗೊತ್ತಿಲ್ಲ!
ಹಬೆಯಾಡುವ ಕಾಫಿ ಇಳಿದು ನಾಲಿಗೆ ಗಂಟಲುಗಳಿಗೆ
ಅದೆಂಥ ಚೈತನ್ಯ ತುಂಬುವುದೊ ಗೊತ್ತಿಲ್ಲ!
ಸುರಿವ ಮಳೆ ನೋಡುತ ವಿರಾಮದಲಿ
ಅರೆಕ್ಷಣ ಜಂಜಡವ ಮರೆವುದು ಎಂಥ ಸುಖ!
ಧನ್ಯವಾದಗಳು ಸಂತಸದ ಈ ಗಳಿಗೆಗಾಗಿ
ಈ ಜಡಿಮಳೆ, ಈ ಬಿಸಿಬಿಸಿ ಕಾಫಿಗಾಗಿ!
2 thoughts on “ಮಳೆಗಾಲದ ಒಂದು ದಿನ ಹಬೆಯಾಡುವ ಕಾಫಿಯೊಡನೆ”
Beautifully said Shashi
ಸೂಪರ್