ಜೀರಿಗೆ ಯಂತಿರುವ ತತಾಪೆಕಾಳು
ಬೆರೆತು ಬಿಟ್ಟಿದೆ ಜೀರಿಗೆ ಕಾಳಿನ ಜೊತೆ
ಅಥವಾ ಯಾರು ಬೆರೆಸಿದ್ದರೋ
ಹೌದು. ಬೆರೆತಿಲ್ಲ, ಬೆರೆತು ಬಿಟ್ಟಿದೆ.
ನಿಮಗೆ ಜೀರಿಗೆ ಕಾಳು ಬೇಕೇ
ತೆಗೆಯಿರಿ ತತಾಪೆಯನ್ನು
ನಿಮಗೆ ತತಾಪೆ ಬೇಕೇ
ತೆಗೆಯಿರಿ ಜೀರಿಗೆ ಯನ್ನು
ಬೆರೆತು ಬಿಟ್ಟಿದೆ ನಿಜ
ತೆಗೆಯಲಿ ಹೇಗೆ ಅಸಲಿ ಜೀರಿಗೆ ಯನ್ನು
ಅದರಂತೆ ಇದು
ಇದರಂತೆ ಅದು
ಹಾಂ. ಹಾಂ ಗೊತ್ತಾಯ್ತು,ಗೊತ್ತಾಯ್ತು
ಇದು ಅಸಲಿ ಅದು ನಕಲಿ
ಅಲ್ಲಲ್ಲ, ಅದು ಅಸಲಿ ಇದು ನಕಲಿ
ಪ್ರಾರಬ್ಧಕಮ೯!
ಓ. ದೇವರೇ, ದಾರಿ ತೋರಪ್ಪ ಒಮ್ಮೆ
ಅಸಲಿ ನಕಲಿಗಳ ನಿಜವರಸೆಯನ್ನು
- ಮಹೇಶ್ವರಿ. ಯು
5 thoughts on “ತತಾಪೆಯೆಂಬ ಸೋಂಪುಕಾಳೂ ಜೀರಿಗೆ ಕಾಳೂ”
ಜೀವನದ ಬಹಳಷ್ಟು ಹಂತಗಳಲ್ಲಿ ದ್ವಂದ್ವ ಇದ್ದೇ ಇರುತ್ತದೆ. ಸೂಕ್ತ ನಿರ್ಧಾರ ಬೇಕು ಅಷ್ಟೇ.
ಅಸಲಿ ಹುಡುಕುವುದು ಕಷ್ಟ. ಚೆನ್ನಾಗಿದೆ.
ಪ್ರತಿಕ್ರಿಯೆಗೆ ದನ್ಯವಾದಗಳು
Some – ವೇದನೆ,- ಸಂವೇದನೆ – ಬದುಕಿನ ಜೀವಂತಿಕೆಗೆ ಅತ್ಯಗತ್ಯವಾಗಿ ಇರಲೇಬೇಕಾದ ಪರಮೋಚ್ಚಸ್ಥಿತಿ. ನೋವಿಲ್ಲದಿರುವದು ಸ್ವರ್ಗದಲ್ಲಿ ಮಾತ್ರ. ಇದನ್ನು ಬರೆಯುತ್ತಿದ್ದಂತೆ, ಕಾಕತಾಳೀಯವಾಗಿ ಯಾರದ್ದೋ ಮೆಸೇಜು ಬಂತು : “ ‘ಕಷ್ಟವೇ ಬರದಿರಲಿ’ ಎಂಬ ಪ್ರಾಯೋಗಿಕವಲ್ಲದ ಬೇಡಿಕೆಗಿಂತ, ‘ಕಷ್ಟ ಸಹಿಸುವ ಶಕ್ತಿ ಕೊಡು’ ಎಂಬ ಬೇಡಿಕೆ ಬಲು ಸೂಕ್ತ. ಈ ಲೋಕದಲ್ಲಿ ಬಾಳಲು ಬೇಕಾದ ಬಹು ಮುಖ್ಯ ಗುಣವದು!”
ಕವನದಲ್ಲಿ ಈ ಅಭಿವ್ಯಕ್ತಿ ಚೆನ್ನಾಗಿ ಮೂಡಿದೆ.
ತತಾಪೆ ಕಾಳು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಜೀ (ವನದಲ್ಲಿ ಅಚಲ ಶ್ರದ್ಧೆ ಮತ್ತು ಸಬೂರಿ ಇರುವವ) ರಿಗೆ, ಸಿಕ್ಕೇ ಸಿಗುತ್ತದೆ!