ಸುನೀತಾ ಪ್ರಕಾಶ್
ಗೀತಾ ಕುಂದಾಪುರ
ಸುವ್ರತಾ ಅಡಿಗ
ಮುಂಬಯಿ:- ವ್ಯಾಸರಾಯ ಬಲ್ಲಾಳ ಶತಮಾನೋತ್ಸವದ ಅಂಗವಾಗಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಆಯೋಜಿಸಿದ್ದ ಜಾಗತಿಕ ಮಟ್ಟದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ಸುನೀತಾ ಪ್ರಕಾಶ್ , ದಾವಣಗೆರೆ ಅವರ ‘ಪದ್ದವ್ವ ಮತ್ತು ಕೌದಿ’ ಕತೆ ಪ್ರಥಮ ಬಹುಮಾನವನ್ನು ಪಡೆದಿದೆ. ಗೀತಾ ಕುಂದಾಪುರ ಅವರ ‘ಬಾಬಕ್ಕ’ ಕತೆ ಎರಡನೆಯ ಬಹುಮಾನವನ್ನು ಹಾಗೂ ಸುವ್ರತಾ ಅಡಿಗ, ಬೆಂಗಳೂರು ಅವರ ‘ಕನಸುಗಳಿಗೆ ಅರ್ಥ ಹುಡುಕುತ್ತಾ…’ ಕತೆ ಮೂರನೆಯ ಬಹುಮಾನವನ್ನು ಪಡೆದುಕೊಂಡಿದೆ.
ಡಾ.ಗುರುರಾಜ.ಎಸ್,ಬೆಂಗಳೂರು ಅವರ ‘ಗೊತ್ತಿಲ್ಲದ ನೆಂಟ’ ಹಾಗೂ ಸುಮಾ ಸುರೇಶ್, ಹಾಸನ ಅವರ ‘ಹಸಿವೆಗೊಂದಿಷ್ಟು ಮುಖಗಳು’ ಬಹುಮಾನ ರಹಿತ ಮೆಚ್ಚುಗೆ ಪಡೆದ ಕತೆಗಳು ಎಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಹಾಗೂ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದ ಅರವಿಂದ ಬಲ್ಲಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಥಾ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ಕತೆಗಾರರು, ಕಾದಂಬರಿಕಾರರಾದ ಮಿತ್ರಾ ವೆಂಕಟ್ರಾಜ್ ಅವರು ಸಹಕರಿಸಿದರು.