ಬೆಣ್ಣೆಯಂಥ ಸಂಬಂಧಗಳು ಕಾದ ಹಂಚಿನ ಮೇಲೂ ತಂಪಾದ ನೀರಿನಲ್ಲೂ ಸ್ಥಿರ ಸುಂಟರಗಾಳಿಯೂ ಬಾಧಿಸದ ಅನನ್ಯ ಬಂದ ಆ ದಿನಗಳಲ್ಲಿ ಕಾಯುವ ಕಾಯಿಸುವ ಪ್ರೀತಿಸುವ ಪ್ರೀತಿಸಲ್ಪಡುವ ನೋಯಿಸುವ ನೋಯಿಸಲ್ಪಡುವ ಚೆಂದದ ಮಹಾಸಾಗರ ವಿವೇಚನೆಗೆ ನಿಲುಕದ ಕಾಲ ಬಂಡಿ ಉರುಳಿ ಹೊಸ ಸಂಬಂಧಗಳು ಸೇರ್ಪಡೆಯಾಗಿ ನದಿಗಳಂತೆ ವಿಚಲಿಸಿ ಹಳೆಯದ ಸೊರಗಿ ಹಳೆ ನೆನಪುಗಳಲ್ಲಿ ಕಾಲನ ಪವಾಡವೇ ಸರಿ ಅಣ್ಣ ಅಣ್ಣನಲ್ಲ ತಮ್ಮ ತಮ್ಮನಲ್ಲ ಅಕ್ಕ ಅಕ್ಕಳಲ್ಲ ತಂಗಿ ತಂಗಿಯಲ್ಲ....ಹೀಗೆ ಬದಲಾವಣೆ ದೂರ ಸರಿದಷ್ಟು... ದೂರನೇ ಜಗ್ಗಿದಷ್ಟು ಹರಿಯುವ ದಾರ ಜೋಡಿಸಲಾಗದ ಒಡೆದ ಕನ್ನಡಿ ಕೆಟ್ಟು ಹೋದ ಮುಂಜಾನೆ ಸಾರು ಎಲ್ಲವೂ ಹಳಸಿದಂತೆ ಕಿರಿದಾಗುವ ಸಂಬಂಧಗಳಿಗೆ ಪಶ್ಚಾತಾಪದ ಕಿರು ದಾರಿಯಿಲ್ಲ ಹಳಹಳಿಕೆಯೂ ಇಲ್ಲ ಬಂದಂತೆ ಹೋಗುವುದೆಂಬ ಸಬೂಬ ಬೇರೆ. *ಮಾಲಾ.ಮ.ಅಕ್ಕಿಶೆಟ್ಟಿ. ಬೆಳಗಾವಿ.
ಹಳಿಸುವಿಕೆ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಮಾಲಾ ಮ.ಅಕ್ಕಿಶೆಟ್ಟಿ, ಬೆಳಗಾವಿ
ಮಾಲಾ ಮ.ಅಕ್ಕಿಶೆಟ್ಟಿ, ಬೆಳಗಾವಿ, : ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.ಲೇಖನ,ಕವಿತೆ,ಕಥೆ,ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. (ಇವರ ಬರಹಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ)
All Posts