ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ : ಹಸ್ತಪ್ರತಿಗಳ ಆಹ್ವಾನ

ಧಾರವಾಡ: ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ವತಿಯಿಂದ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು 20,000/- ರೂ. ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ.
ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಕನ್ನಡದ ಹಿರಿಯ-ಕಿರಿಯ ಲೇಖಕರೆಲ್ಲ ಭಾಗವಹಿಸಬಹುದು. ಅಪ್ರಕಟಿತ ಕಥೆಗಳು ಮತ್ತು ನಿಯತಕಾಲಿಕಗಳು, ವಿಶೇಷಾಂಕಗಳಲ್ಲಿ ಪ್ರಕಟವಾದ ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾಗದಿರುವ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಸ್ಪರ್ಧಿಗಳು ಕಡ್ಡಾಯವಾಗಿ 12 ಫಾಂಟು ಸೈಜಿನಲ್ಲಿ, A-4 ಅಳತೆಯ ಕಾಗದದಲ್ಲಿ, 80-120 ಪುಟಗಳಿಗೆ ಮೀರದಂತೆ ಟೈಪು ಮಾಡಿ, ಬೈಂಡು ಮಾಡಲಾದ ಕಥೆಗಳ ಮೂರು ಪ್ರತಿಗಳನ್ನು ನವೆಂಬರ್ 12, 2023ರೊಳಗೆ ನಮ್ಮ ವಿಳಾಸಕ್ಕೆ ಕಳಿಸಬೇಕು. ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ವೇದಿಕೆಯ ಸಂಚಾಲಕರನ್ನು ಸಂಪರ್ಕಿಸಿ.

ವಿಳಾಸ :
ವಿಕಾಸ ಹೊಸಮನಿ (ಸಂಚಾಲಕರು)
ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ
2ನೆಯ ಕ್ರಾಸ್, 2ನೆಯ ಮೇನ್,
ದಾನೇಶ್ವರಿ ನಗರ, ಹಾವೇರಿ – 581110
ಮೊ/ವಾ – 9110687473

ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಸ್ಪರ್ಧೆಯ ನಿಯಮಗಳು:

1) ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ 20,000/- ರೂಪಾಯಿ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ.
2) ಕನ್ನಡದ ಹಿರಿಯ-ಕಿರಿಯ ಲೇಖಕರೆಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.
3) ಈ ಕಥಾ ಪ್ರಶಸ್ತಿ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
4) ಈ ಕಥಾ ಪ್ರಶಸ್ತಿ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಎಷ್ಟು ಸಲವೂ ಭಾಗವಹಿಸಬಹುದು, ಆದರೆ ಒಮ್ಮೆ ಪ್ರಶಸ್ತಿ ಪಡೆದವರು ನಂತರ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
5) ಕಥಾ ಪ್ರಶಸ್ತಿಯನ್ನು ನಿರ್ಧರಿಸುವಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ. ತೀರ್ಪುಗಾರರ ಆಯ್ಕೆಯನ್ನು ಸಾಹಿತ್ಯ ವೇದಿಕೆಯಾಗಲೀ, ಸ್ಪರ್ಧಿಗಳಾಗಲೀ ಪ್ರಶ್ನಿಸುವಂತಿಲ್ಲ.
6) ಸ್ಪರ್ಧಿಗಳು ಒಮ್ಮೆ ಸ್ಪರ್ಧೆಗೆ ಹಸ್ತಪ್ರತಿ ಕಳಿಸಿದ ನಂತರ ಅದರ ಕುರಿತು ಸಾಹಿತ್ಯ ವೇದಿಕೆಯ ಪದಾಧಿಕಾರಿಗಳ ಜೊತೆ ಯಾವುದೇ ಕಾರಣಕ್ಕೂ ಫೋನ್, ವಾಟ್ಸಪ್, ಈಮೇಲ್ ಮತ್ತು ಪತ್ರಗಳ ಮೂಲಕ ಚರ್ಚಿಸುವಂತಿಲ್ಲ.
7) ಪ್ರಕಾಶನಕ್ಕೆ ಸಿದ್ಧವಾಗಿರುವ ಮತ್ತು ಇನ್ನೂ ಪುಸ್ತಕ ರೂಪದಲ್ಲಿ ಪ್ರಕಟವಾಗದಿರುವ ಅಪ್ರಕಟಿತ ಕಥಾಸಂಕಲನದ ಹಸ್ತಪ್ರತಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.
8) ವಿವಿಧ ಪತ್ರಿಕೆಗಳು ಮತ್ತು ವಿಶೇಷಾಂಕಗಳಲ್ಲಿ ಪ್ರಕಟವಾದ ಅಥವಾ ಪ್ರಕಟವಾಗದೇ ಇರುವ ಮತ್ತು ಪುಸ್ತಕ ರೂಪದಲ್ಲಿ ಇನ್ನೂ ಪ್ರಕಟವಾಗದಿರುವ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಕಳಿಸಬಹುದು.
9) ಅನುವಾದ, ಅನುಕರಣೆ ಮತ್ತು ರೂಪಾಂತರ ಮಾಡಿದ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
10) ಸ್ಪರ್ಧೆಗೆ ಕಳಿಸುವ ಕಥಾಸಂಕಲನ A-4 ಅಳತೆಯ ಕಾಗದದಲ್ಲಿ ಟೈಪು ಮಾಡಿದ್ದು (ಫಾಂಟ್ ಸೈಜ್ 12), ಕನಿಷ್ಠ 80 ಪುಟ ಮತ್ತು ಗರಿಷ್ಠ 120 ಪುಟಗಳಿಗೆ ಮೀರದಂತಿರಬೇಕು.
11) ಟೈಪು ಮಾಡಲಾದ ಕಥೆಗಳ ಪ್ರತಿಯಲ್ಲಿ ಸ್ಪರ್ಧಿಗಳು ಹೆಸರು, ಮೊಬೈಲ್ ನಂ. ಮತ್ತು ಈಮೇಲ್ ಸೇರಿದಂತೆ ಯಾವುದೇ ವೈಯಕ್ತಿಕ ವಿವರಗಳನ್ನು ನಮೂದಿಸುವಂತಿಲ್ಲ.
12) ಸ್ಪರ್ಧಿಗಳು ತಮ್ಮ ವೈಯಕ್ತಿಕ ಪರಿಚಯ, ಸಂಪರ್ಕ ವಿವರಗಳು, ಗುರುತಿನ ಚೀಟಿ ಮತ್ತು ಭಾವಚಿತ್ರವನ್ನು ಪ್ರತ್ಯೇಕವಾಗಿ ಕಥೆಗಳ ಹಸ್ತಪ್ರತಿಯೊಂದಿಗೆ ಲಗತ್ತಿಸಿ ಕಳಿಸಬೇಕು.
13) ಅಪ್ರಕಟಿತ ಕಥಾಸಂಕಲನದ ಮೂರು ಪ್ರತಿಗಳನ್ನು ಸಾಹಿತ್ಯ ವೇದಿಕೆಯ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ದಿನಾಂಕ 12-11-2023ರ ಒಳಗೆ ತಲುಪುವಂತೆ ಕಳಿಸಬೇಕು.
14) ಸ್ಪರ್ಧೆಗೆ ಹಸ್ತಪ್ರತಿ ಕಳಿಸಿದ ನಂತರ ಹಸ್ತಪ್ರತಿಯನ್ನು ಸ್ಪರ್ಧೆಗೆ ಸ್ವೀಕರಿಸಿದ ಕುರಿತ ಮಾಹಿತಿಯನ್ನು ಸ್ಪರ್ಧಿಗಳಿಗೆ ವಾಟ್ಸಪ್ ಮೂಲಕ ತಿಳಿಸಲಾಗುವುದು.
15) ಸ್ಪರ್ಧಿಗಳು ಒಮ್ಮೆ ಹಸ್ತಪ್ರತಿ ಕಳಿಸಿದ ನಂತರ ಅವುಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter