ಶ್ರೀ ಗಣೇಶ ಚತುರ್ಥಿಯ ಸಿದ್ಧತೆಯಲ್ಲಿದ್ದೀರಾ? ಪರಿಸರ ಸ್ನೇಹಿ ಗಣೇಶ ವಿಗ್ರಹಗಳಿಗೆ ತಪ್ಪದೆ ಸಂಪರ್ಕಸಿ ಶ್ರೀಮತಿ ಮಂಗಳಾ ಶೆಟ್ಟಿಯವರನ್ನು.
ಮಂಗಳಾ ಪ್ರಕಾಶ್ ಶೆಟ್ಟಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ಸುಮಾರು 12 ವರುಷ ಅಬುಧಾಬಿ ಇಂಡಿಯನ್ ಸ್ಕೂಲ್ನಲ್ಲಿ ಕಲಾ ಶಿಕ್ಷಕಿಯಾಗಿದ್ದು ಸೇವೆ ಸಲ್ಲಿಸಿದ್ದರು. ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಪ್ರೇಮ, ಗೌರವವನ್ನು ಬೆಳೆಸಿಕೊಂಡಿರುವ ಮಂಗಳಾ, ಸುಮಾರು 15 ವರುಷ ಅಬುಧಾಬಿ ಕನ್ನಡ ಸಂಘದ ಕಾರ್ಯಚಟುವಟಿಕೆಯಲ್ಲಿ ಸಕ್ರೀಯವಾಗಿದ್ದು ಕಾರ್ಯಕ್ರಮಗಳ ನಿರ್ವಹಣೆಯನ್ನು ಮಾಡುತ್ತಿದ್ದರು. ಮೂರು ವರುಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಕಥೆ, ಕವನ ಬರೆಯುತ್ತಾ, ಆಗಾಗ ಕನ್ನಡದ ಬಗ್ಗೆ ಸಣ್ಣ ಪುಟ್ಟ ಭಾಷಣವನ್ನು ಕೊಡುತ್ತಾ, ಚಟುವಟಿಕೆಯಿಂದ ಇರುತ್ತಾರೆ. ಅನಿವಾಸಿ ಕನ್ನಡಿಗರ ಇ- ಪತ್ರಿಕೆ ‘ವಿಶ್ವಧ್ವನಿ’ಯ ಬರಹಗಳಿಗೆ ಅರ್ಥಪೂರ್ಣ ಚಿತ್ರಗಳನ್ನು ಬಿಡಿಸಿ ಕಲಾವಿದೆಯಾಗಿ ಸಹಕರಿಸುತ್ತಿದ್ದಾರೆ. ಅಲ್ಲದೇ ‘ಮಡಿಲು ಹ್ಯಾಂಡಿಕ್ರಾಫ್ಟ್’ ಅಡಿಯಲ್ಲಿ ಪರಿಸರಗಣೇಶದ ಬಗ್ಗೆ ಜನರಲ್ಲಿ ತಿಳುವಳಿಕೆಯನ್ನು ಬೆಳೆಸಲು ಸ್ವತಃ ಮಣ್ಣಿನ ಗಣೇಶವನ್ನು ಮಾಡುತ್ತಿದ್ದಾರೆ.
ಸಂಪರ್ಕ:
Smt.Mangala
Madilu handicrafts
3rd A cross , BEL layout,Bharath Nagar,Magadi Road, Bangaluru-91
Tel. +91 9591215206
2 thoughts on “ಪರಿಸರ ಸ್ನೇಹಿ ‘ಗಣೇಶ’”
ತುಂಬಾ ಸಂತೋಷ ವಾಯ್ತು ಮೇಡಂ ನಿಮ್ಮ ಪರಿಸರ ಕಾಳಜಿ ಬಗ್ಗೆ.
ಅನಿವಾಸಿ ಭಾರತಿ ಅನಿಸಿ ಕೊಳ್ಳದೇ ಮರಳಿ ಭಾರತಕ್ಕೆ ಬಂದು ತಮ್ಮ ಕಲೆಯನ್ನು ನಮ್ಮ ಭಾರತೀಯರಿಗೆ ಕಲಿಸಿಕೊಡುತ್ತಿರುವುದು ಇನ್ನೂ ಹೆಮ್ಮೆಯ ವಿಷಯ. ಹಾಗೇ ಗಣಪತಿಗೆ ಹಚ್ಚುವ ಬಣ್ಣ ನೈಸರ್ಗಿಕವೋ ಅಥವಾ ಕೆಮಿಕಲ್ ಯುಕ್ತವೋ ತಿಳಿಸಿದ್ದರೆ ಸ್ಪಷ್ಟತೆ ಇರುತಿತ್ತು. ನಿಮ್ಮ ಪ್ರಯತ್ನ ಶ್ಲಾಘ ನೀಯ ಮತ್ತು ಅಭಿನಂದನಾರ್ಯ.
All the best madam 🌷💐
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು, ವಾಟರ್ ಕಲರ್ ಬಳಸುತ್ತೇನೆ ಅದೂ ಕೂಡ ಅಪೇಕ್ಷೆ ಮೇರೆಗೆ