ಕಾಡುತ್ತವೆ ನೆನಪು

ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು
ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ
ತನ್ನ ಕಾಡಿದ ಅದೇ ಬಾಲ್ಯದ ನೋವು
ಇವರ ಕಾಡದಿರಲಿ ಎಂದು.
ಕಾಡುತ್ತವೆ ನೆನಪು 

'ನಿನ್ನೆ ನೆನೆಯಿಟ್ಟ ಕಾಳುಗಳು ಇಂದು 
ಮೊಳಕೆಯೊಡೆದಿವೆ 
ಜೋಪಾನವಾಗಿ ತೆಗೆದಿಡುವ ಕೆಲಸವಾಗಬೇಕು.
ಮೊಳಕೆ ಮುರಿಯದಂತೆ ಜಾಗೃತಿಯಲ್ಲಿ, 
ದಷ್ಟಪುಷ್ಟ ಸಸಿಗಳು ದೃಢಮೊಳಕೆಯಿಂದ
ಮಾತ್ರ ಸಾಧ್ಯ' –ಎನ್ನುತ್ತಿರುತ್ತಾಳೆ.

ನೂಲಿನಂತೆ ಸೀರೆ ಆಗಬೇಕೆಂದು
ಚೆಂದದ ಗಟ್ಟಿನೂಲಲ್ಲೇ ನೇಯ್ದರೂ ಈಗೀಗ
ಸೀರೆಗಿಲ್ಲ ಅದೇ ಆಕಾರ ಬಣ್ಣ ಧಾಡಸಿತನ
ಎತ್ತೆತ್ತಿ ಒಗೆದರೂ ಹರಿಯದ
 ಆ ಕಾಲದ ಸೀರೆ
 ಇವಲ್ಲ ಕಸಿವಿಸಿಯಾಗುತ್ತಾಳೆ ಆಕೆ 
'ಬರಿ ಚೆಂದ ಅಲ್ಲ ಬದುಕು 
ಆತ್ಮಬಲ ಬೇಕು 'ಎನ್ನುತ್ತಿರುತ್ತಾಳೆ.

ಎಂದೋ ಎಡವಿಕೊಂಡ ಕಾಲು
ನೋವು ಮರುಕಳಿಸಿ ಘಾಸಿ ಮಾಡುತ್ತವೆ.
'ತಣ್ಣೀರನ್ನಾದರೂ ತಣಿಸಿ ಕುಡಿಯಲು ಹೇಳು'
ಹೇಳುತ್ತಾನೆ ಆಕೆಗೆ
ಕೇಳಲೆಂದೆ- ಎತ್ತರಿಸಿದ ದನಿಯಲ್ಲಿ
'ಬೇಡಿದ್ದನ್ನು ಕೊಡಿಸಬೇಡ '
ತಾಕತ್ತು ಮಾಡುತ್ತಾನೆ ಆಗಾಗ
ಚಟವಾದೀತು, ಹಟವಾದೀತು ಬಯಕೆಗಳು
ಬೆಳೆದಂತೆ- ಎನ್ನುತ್ತಾನೆ
ರಾಗಕ್ಕೆ ತೆರನಾದ ತಾಳ ಆಕೆಯದು.
                               
ಬಿರುಸಾದ ಗಾಳಿಗೂ ಬಗ್ಗಿಲ್ಲ ಗಿಡಗಳು
ಸ್ವಲ್ಪ ಸೊಟ್ಟಗಾದರೂ ಈ ಅರೆಗಳಿಗೆ 
ನೆಟ್ಟಗೆ ನಿಲ್ಲುತ್ತವೆ ಮರುಗಳಿಗೆ
ಗಾಳಿ ಎದುರಿಸಿ ಗೊತ್ತು ಬಯಲ ಗಿಡಗಳಿಗೆ 
ಬೆಳೆಯಬೇಕು, ಕಲಿಯಲಿ ಇವರೂ ಅವರಂತೆ 
ಎನ್ನುತ್ತಾನೆ ಆತ

ತೊಗಲ ಹೊದಿಕೆಯ ಹೊದಿಸಿ
ರಕ್ತಕ್ಕೆ ಕೆಂಪು ಸುರಿದವರು ಅವರು
ಕಾಡುತ್ತದೆ ನೆನಪು
ಕಾಡುತ್ತಲೇ ಇರುತ್ತವೆ ನೆನಪು.

                                 *ನಾಗರೇಖಾ ಗಾಂವಕರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai