ಬದುಕು ಬಣ್ಣದ ಚಿತ್ತಾರ

ಅಷ್ಟು ಸುಲಭವಲ್ಲ ಬಣ್ಣಗಳ ಚೆಲ್ಲಾಟ 
ನುಣುಪಿನ ಬಣ್ಣಗಳ ಬೊಗಸೆಯಲ್ಲಿ ಬಾಚಿ ಕಣ್ಣು ಮುಚ್ಚಿದೆನಷ್ಟೆ  
ಅರೆ ನಡೆವ ನಡೆ ಎಡವಿದೆ ಮಾರುತನ ಬಲವಾದ ಬೀಸಿಗೆ
ಒಳ ಮನಸಿನಲ್ಲಿ ತಿರುವು ದೃಷ್ಟಿ ಇನ್ನೇತ್ತಲೋ ಪಯಣ     ಹಲವು ಬಣ್ಣಗಳು ಒಂದಾಗಿವೆ
ತನ್ನರಿವಿನ ಅಸ್ತಿತ್ವ ಕಾಣೆಯಾಗಿದೆ


ಬಣ್ಣಯಾರಿಗಿಹುದು ಮನಸಿಗೊ ಹೃದಯಕ್ಕೊ ಆತ್ಮಕ್ಕೊ ನಶ್ವರ ದೇಹಕ್ಕೊ
ಜೀವನವೆಂಬುದೆ ಒಂದು ಬಣ್ಣದಾಟ 
ಕೆಲಯೊಮ್ಮೆ ಬಿಳಿ ಹಸಿರು ಕೆಂಪು ಹಳದಿ  ಕಪ್ಪು
ಎಲ್ಲದಕ್ಕೂ ಒಂದೊಂದು ಅರ್ಥ ನೀಡಿದವರು ನಾವೆ ಅಲ್ಲವೆ


ನಮ್ಮೊಳಗೆ ಗೊಂದಲ ಸೃಷ್ಟಿ ಮಾಡಿ ಅವರಿವರ ಬಣ್ಣಕ್ಕೆ ಬೆಟ್ಟು ತೋರಿಸಿ
ಮಾತಿನಲಿ ಬಣ್ಣ ಮೌನದಲಿ ಬಣ್ಣ
ಜಾತಿಯಲಿ ಬಣ್ಣ ಧರ್ಮದಲಿ ಬಣ್ಣ
ಎಲ್ಲೆಲ್ಲೂ ಸಮಯದೊಂದಿಗೆ ಬಣ್ಣ ಬದಲಾಯಿಸುವವರು



ಕೂಡುವಿಕೆ ಅಗಲುವಿಕೆ
ಅರ್ಥ ವಾಗದ ನಿಗೂಢತೆ ಸಂಬಂಧದಲ್ಲಿ
ಹುಟ್ಟಿನಿಂದ ಸಾವಿನವರೆಗೆ ಸಹಸ್ರ ಬಣ್ಣಗಳಲ್ಲಿ ಸತ್ಯದ ಹುಡುಕಾಟ 
ಮತ್ತೆ ಬಣ್ಣವಿಲ್ಲದ ಲೋಕಕ್ಕೆ ಅರಿತು ಅರಿಯದೆ ಕೊನೆಯ ಪಯಣ

 ಬಣ್ಣವಿರದ ನೀರಿಗೂ ಕಲ ಬೆರೆಕೆಯ ಬಣ್ಣ
ತೇಲಿ ಬರುವ ಗಾಳಿಯಲಿ ಅದೆಷ್ಟು
 ಬಣ್ಣಗಳ ಕುಸುರಿ ಚೆಲ್ಲಿ
ಅವಳ ಕನಸಿನ ಸಂದೇಶ ಹೊತ್ತು ಸಾಗಿ        
ಮತ್ತೆ   ಮುಗಿಲಾಗುವ ಆ ಚೆಂದದ  ಬಣ್ಣ
 ಬಣ್ಣವಿಲ್ಲದ ಬದುಕು ಬಲು ನೀರಸ


ಮನುಷ್ಯ ಬಣ್ಣದಿಂದ ಮಿಳಿತವಾದಾಗ
ಮಾತ್ರ ನವರಸದ ಸಮ್ಮಿಲನ
ಯುಗ ಯುಗದಲ್ಲೂ ಬಣ್ಣಗಳ ಬಣ್ಣ ಬದಲಾಗಲಿಲ್ಲ
ಬದಲಾದುದು ಬದುಕಿನ   ಬಣ್ಣವಷ್ಟೇ 


  * ಲಕ್ಷ್ಮೀ ರಾಜೀವ ಹೇರೂರು   

     

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter