ಗಜಲ್

ಕೋಮಲ ಹೃದಯ ಹುಡುಕುತಿರುವೆ ಜೊತೆಯಲಿ ಬಾಳಲು
ಅಂದದ ಮಹಲ ನಿಮಿ೯ಸುತಿರುವೆ ಜೊತೆಯಲಿ ಬಾಳಲು

ಸುಗಂಧ ವಿರದ ಸುಮದ ರಂಗಿಗೆ ಮೋಸ ಹೋಯಿತು ಮನ
ಕಂಪಿನ ಮಲ್ಲಿಗೆ ಹೂ ಬಯಸುತಿರುವೆ ಜೊತೆಯಲಿ ಬಾಳಲು

ತುಸು ಮಾತಿಗೆ ಕೋಪದಿ ಸಿಡಿದು ಮೂಲೆ ಸೇರಿದಳು ಮೌನದಿ
ಒಲವ ಮುತ್ತು ನೀಡಿ ಕರೆಯುತಿರುವೆ ಜೊತೆಯಲಿ ಬಾಳಲು

ಮುನಿದ ಮೋಡಗಳು ಕರುಣೆಯ ಮಳೆ ಸುರಿಸಿವೆ ಇಳೆಗೆ
ಧಾರಿಣಿಯ ಚೆಲುವು ನೋಡುತಿರುವೆ ಜೊತೆಯಲಿ ಬಾಳಲು

ನೊಂದ ಮನ ಬೇಸರದಿ ವಿರಹ ಗೀತೆಗಳ ಕೇಳುತಿದೆ
ಯುಗಳ ಗೀತೆಯ ಹಾಡುತಿರುವೆ ಜೊತೆಯಲಿ ಬಾಳಲು

ಹಳೆಯ ಕಹಿ ನೆನಪುಗಳು ಕಾಡುತಿವೆ ಎವೆ ಮುಚ್ಚಿದರೆ
ಸುಂದರ ಕನಸುಗಳ ಕರೆಯುತಿರುವೆ ಜೊತೆಯಲಿ ಬಾಳಲು

ಜಗದ ಕರಾಳತೆಯಲಿ ನರಳುತಿರುವೆ ಒಂಟಿಯಾಗಿ
ಮೋಹದ " ಪ್ರಭೆ"ಅರಸುತಿರುವೆ ಜೊತೆಯಲಿ ಬಾಳಲು

*   ಪ್ರಭಾವತಿ ಎಸ್ ದೇಸಾಯಿ
    ವಿಜಯಪುರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಗಜಲ್”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter