ಎನಿತು ಪುಣ್ಯಭೂಮಿ
ನಿನದು ಭಾರತ ಮಾತೆ/
ಕನಕದಕ್ಷರಗಳ ಚರಿತೆ//
ತುಹಿನಾದ್ರಿಯ ಶಿಖರದಲ್ಲೂ
ಸಾಧು, ಸಂತರ ಜ್ಞಾನ ಹೊಂಗಿರಣ/
ಪರಮ ಪಾವನೆ ಗಂಗೆ ನಿನ್ನ ಆಭರಣ//
ಮಹಾಕಾವ್ಯಗಳು ನಿನ್ನ
ನಗೆಯೊಳಡಗಿದೆ/
ನಿನ್ನ ಉಸಿರಿನಲ್ಲೇ
ಮಂತ್ರಘೋಷ ಮೊಳಗಿದೆ//
ನಿನ್ನ ಕಿರು ನಿದಿರೆಯ ಮಧುರ ಸ್ವಪ್ನ
ಇಲ್ಲಿಯ ಕಲೆಗಳು/
ನಿನ್ನ ಕಣ್ಣ ಸಹನೆಯೇ ಬೆಳದಿಂಗಳು//
*ಹರ್ಷವರ್ಧನ ಹೆಗಡೆ ನಿಟ್ಟೂರು







