ಬಾಲ್ಯದಲ್ಲಿ ಮನೆಯಲ್ಲಿ ತಂದೆತಾಯಿಗಂಜಿ ಶಾಲೆಯಲ್ಲಿ ಶಿಕ್ಷಕರ ಬೆತ್ತಕ್ಕೆ ಅಂಜಿ ಕಾಲೇಜಿನಲ್ಲಿ ಪಾಠ ಪರೀಕ್ಷೆಗಳಿಗಂಜಿ ಕಚೇರಿಯಲ್ಲಿ ಬಾಸ್ ಬೈಗುಳಕ್ಕಂಜಿ ಸಪ್ತಪದಿಯ ನಂತರ ಹೆಜ್ಜೆ ಹೆಜ್ಜೆಗೂ ಜೀವನ ಸಂಗಾತಿಗಂಜಿ ವಯಸ್ಸಾದಮೇಲೆ ಮಕ್ಕಳು ಕಾಯಿಲೆ ನೋವು ಸಾವಿಗಂಜಿ ಹುಟ್ಟಿನಿಂದ ಚಟ್ಟದ ತನಕ ಬರೀ ಗಂಜಿ ವೈಕುಂಠ ಸಮಾರಾಧನೆಯ ದಿನ ಮೃಷ್ಟಾನ್ನ ಭೋಜನ ***

3 thoughts on “ಯಾವಾಗ?”
ಚೆನ್ನಾಗಿ ದೆ.
ವಾವ್! ಲೌಕಿಕ ಜೀವನದ ಮಾರ್ಮಿಕ ಸತ್ಯ ಸರ್. ಅದಕ್ಕೊಂದು ಸೂಕ್ತ ಪರಿಹಾರ, ಪಾರಮಾರ್ಥಿಕ ಸತ್ಯವನ್ನು ಪ್ರೀತಿಸುತ್ತ ಆ ಅಮೃತಗಂಜಿಯನ್ನು ಸದಾ ಸೇವಿಸುವುದು.
ಜೀವನದ ಕಹಿ ಸತ್ಯ. ಅರಿತು ನಡೆದರೆ ಬದುಕು ಸುಮಧುರ ನಿತ್ಯ….