ಅಂತರಾಳದ ತಾಕಲಾಟ ಸುಡುತ್ತಿದೆ ಒಳಗೊಳಗೆ ಬೆಂದ ಮನವು ಚಡಪಡಿಸುತ್ತಿದೆ ಹೊರ ಹಾಕಲು ತನ್ನ ಬೇಗುದಿಯನ್ನು ಬಯಸುತ್ತಿದೆ ಕೇಳುವ ಕರ್ಣಗಳ ಅರಸುತ್ತಿದೆ ಹೊರ ಹಾಕಲಾಗದ ಸತ್ಯದ ಕೋಟೆಯದು ಕಾವಲು ಕಾಯುತ್ತಿದೆ ಸುತ್ತುವರಿದು ಚಡಪಡಿಸುತ್ತಿದೆ ಉಸಿರು ಬಿಡಲು ನಿಡಿದಾದ ನಿಟ್ಟುಸಿರು ಹೃದಯವದು ನಲುಗುತಿದೆ ಭಾವನೆಗಳನು ಹೊತ್ತು ಮುಲುಗುತಿದೆ ಆಪ್ತಸಖಿಗಾಗಿ ಮನವದು ಕಾಯ್ದಿದೆ ಕಾಣದೆ ಕಂಗಾಲಾಗಿ ಮನ ಸೋತಿದೆ ಕಾಯ್ದು ಕುಳಿತಿರುವಳು ಅವಳಲ್ಲಿ ಅಂತರಂಗದ ಪಡಸಾಲೆಯಲ್ಲಿ ಪಗಡೆ ಹಾಸು ಹಾಸಿ ಭಾವನೆಗಳ ಲೋಕದಲ್ಲಿ ದಾಳ ಉರುಳಿಸುತ್ತ ಭಾವ ಹೆಕ್ಕುವ ಸಖಿಯ ಪ್ರತೀಕ್ಷೆಯಲ್ಲಿ *****
ಅಂತರಾಳ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಪುಷ್ಪಾ ಹಾಲಭಾವಿ
ಪುಷ್ಪಾ ಹಾಲಭಾವಿ ಧಾರವಾಡ ನಿವಾಸಿ.ಕಥೆ ,ಕವನ ಬರೆಯುವುದರಲ್ಲಿ,ಓದುವುದರಲ್ಲಿ ಆಸಕ್ತಿ.
ಬರೆದ ಕಥೆ,ಕವನಗಳು ಸ್ತ್ರೀ ಜಾಗೃತಿ ಮಾಸ ಪತ್ರಿಕೆ, ಮಂಗಳ ವಾರ ಪತ್ರಿಕೆ, ವಿಜಯವಾಣಿ ದೀಪಾವಳಿ ವಿಶೇಷಾಂಕ, ಬಣಜಿಗ ಬಂಧು, ಪ್ರಜಾಪರ್ವ,ಸಾಹಿತ್ಯ ಸಖಿ ತ್ರೈಮಾಸಿಕ ಪತ್ರಿಕೆ, ವಿಶ್ವಧ್ವನಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಬರೆದ ಕಥೆಗಳಿಗೆ ಪುಸ್ತಕ ಬಹುಮಾನ ,ನಗದು ಬಹುಮಾನ ದೊರಕಿದೆ.ಸಾಹಿತ್ಯಕ ಗುಂಪುಗಳಿಗೆ ಬರೆದ ಕಥೆಗಳಿಗೆ ಪ್ರಶಂಸಾ ಪತ್ರದ ಜೊತೆಗೆ ನಗದು ಬಹುಮಾನವೂ ದೊರಕಿದೆ. ಅಡುಗೆ, ಕೈ ತೋಟ ಮಾಡುವುದು ಇತರ ಹವ್ಯಾಸಗಳು.
All Posts
1 thought on “ಅಂತರಾಳ”
Nice poem