ಕಾಮನ ಹುಣ್ಣಿಮೆ

ಹೋಳಿ ಎರಚುತ್ತಾರೆ ಅವರು
ಕಾಮನ ಹುಣ್ಣಿಮೆಯಲ್ಲಿ
ಹಾಲು ಉಕ್ಕಿದ ಹಾಗೆ ಚಂದ್ರ
ಚೆಲ್ಲುವರಿದಿದ್ದಾನೆ ಬೀದಿಯಲ್ಲಿ.

ಎತ್ತರ ಹದಿನಾರು ಬಿಲ್ಲು
ತಿದ್ದಿ ತೀಡಿದ ಹುಬ್ಬು
ಕಣ್ಣು ಕುದಿಯುವ ಕುಲುಮೆ
ಗುಂಪು ಕೂಗುತ್ತಿದೆ ಉಘೇ ಉಘೇ
ಬಣ್ಣ ಬೀರುತ್ತಿದ್ದಾರೆ ಹೃದಯದಲ್ಲಿ
ಉರಿಯುತ್ತಿದೆ ಹರೆಯ ರಸ್ತೆಯಲ್ಲಿ

ಕಿಟಿಕಿ ಕಣ್ಣುಗಳಲ್ಲಿ ಸ್ಫುರಿಸುತ್ತಿರುವ ಕನಸುಗಳು
ಧುಮುಗುಡುವ ರಾಗಗಳು
ಎದೆಯ ಓಕುಳಿಯಲ್ಲಿ
ಮೌನದಾರ್ಭಟಗಳು

ಕಡುಕೆಂಪು ಬೆಂಕಿ
ನುಗ್ಗುತ್ತದೆ ಪ್ರತಿಮನೆಗೆ
ಪಿಸುಗುಡುತ್ತದೆ ರಾತ್ರಿ
ಮಾತು ಹೂತಂತೆ ಹೊಕ್ಕುಳಲ್ಲಿ

ಮೆರೆಯುತ್ತಾಳೆ ರತಿ
ಏಳುತ್ತಾನೆ ಶಿವ
ಹೇಳುತ್ತಾನೆ ಚಂದ್ರ
ಪ್ರಿಯೆ ಬಾರೇ

ಹಾಲು ಬೆಳದಿಂಗಳಲ್ಲಿ
ರಂಗುರಂಗಿನ ಹೋಳಿ
ಎದೆ ಬಗೆದು
ಚಂದ್ರ ಕರೆಯುತ್ತಾನೆ
ಪ್ರಿಯೆ ಬಾರೇ..

  *-ಡಾ. ವಸಂತಕುಮಾರ ಪೆರ್ಲ*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಕಾಮನ ಹುಣ್ಣಿಮೆ”

  1. ಧರ್ಮಾನಂದ ಶಿರ್ವ

    ಹೋಳಿಹುಣ್ಣಿಮೆಯ ಅಂತರಾಳವನ್ನು ಅರ್ಥೈಸಿದ ಕವನ ಸೊಗಸಾಗಿದೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai