ಬಿನ್ನಹ

ಯಾವುದಕ್ಕೆಲ್ಲ ರೂಪಕವಾಗುವೆ ಹೇಳು
ಮರವೇ
ನನ್ನ ಮನಸಿಗೆ, ಮನೆಗೆ, ಸಂಸಾರಕ್ಕೆ
ಮತ್ತು ಕವಿತೆಗೆ?

ಸಣ್ಣಗೆ ಚಿಗುರಿ, ಇಂಚಿಂಚು ಬೆಳೆದು
ಅಲ್ಲಿ ಇಲ್ಲಿ ಟಿಸಿಲೊಡೆದು
ಕೊಂಬೆರೆಂಬೆಗಳ ಹೊಂದಿ
ಆಕಾಶಮುಖಿಯಾಗಿ ಬೆಳೆದು
ಕೊಟ್ಟು ನೆರಳು
ನೀಡಿ ಕಾಯಿ ಹಣ್ಣು
ಇನ್ನೇನಿಲ್ಲ ಇಹದಲ್ಲಿ ಎನುವಷ್ಟು
ಪರವ ಧ್ಯಾನಿಸಿ
ಮಳೆಗೆ ತೋಯಿಸಿಕೊಂಡು
ಬಿಸಿಲಿಗೆ ಒಡ್ಡಿ
ಇರುವೆ!

ನಾನು ಆಗುವುದಿರಲಿ ನಿನ್ನಂತೆ
ತರ್ಕಿಸಲಾರೆ ಸುಮ್ಮನೆಯೂ ಒಮ್ಮೆ
ಆದರೆ ನೀನು ಕೊಡುವ ಉಸಿರಲ್ಲೆ
ಉಸಿರಾಡುತ್ತಿರುವೆ

ಮರವೆ
ನಿನ್ನ ಈ ಆಗುವ
ಮತ್ತು ಮಾಗುವ
ಗುಣವ ಕೊಡು ನನಗೆ
ನಾನು ಅಪ್ಪಿಕೋ ಎನ್ನುವ ಮೊದಲೆ
ನೀನೆ ಅಪ್ಪಿಕೋ ತಾಯಿಯಾಗಿ
             - ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ಬಿನ್ನಹ”

  1. Dr Madhavi S Bhandary

    ಅದ್ಭುತವಾದ ರೂಪಕ. ಮತ್ತೆ ಮತ್ತೆ ಓದಬೇಕು, ಎನ್ನುವ ಕವಿತೆ.

  2. Raghavendra Mangalore

    ಮರ – ಪ್ರಕೃತಿ ಬಗ್ಗೆ ಡಾ. ಮೊಗಸಾಲೆ ಬರೆದ ಕವನ ತುಂಬಾ ಚೆನ್ನಾಗಿದೆ.

  3. ಧರ್ಮಾನಂದ ಶಿರ್ವ

    ಮರದ ಉದಾತ್ತ ಗುಣಗಳನ್ನು ತನ್ನೊಡನೆ ಹೋಲಿಸಿ ಕುಬ್ಜನಾಗುವ ಸ್ಥಿತಿಯನ್ನು ಕವನ ಸಮರ್ಥವಾಗಿ ನಿರೂಪಿಸಿದೆ.
    ಕವನದ ಕೊನೆಯ ಎರಡು ಸಾಲುಗಳು ಸತ್ವಯುತವಾಗಿವೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai