ಮಲಯಾಳ: ಅಕ್ಕಿತ್ತಮ್ ಅಚ್ಯುತನ್ ನಂಬೂದಿರಿ ಅನು: ನಾ.ದಾಮೋದರ ಶೆಟ್ಟಿ
ಮರದ ದಿಮ್ಮಿಯಲಿ ಕುಳಿತು ಇನಿತು ತಪವನು ಗೈಯುವ ಮೀಂಚುಳ್ಳಿ ನೀರದು ಉಬ್ಬಿದ ಸಂತೋಷದಲಿ ಕುಣಿಕುಣಿದಾಡಿದ ಮೀನುಗಳು ಬಾನಿನ ಕಡೆಗೆ ಅರಳಿದ ಬಾಯಲಿ ತುಂಬಿ ತುಳುಕುತಿದೆ ಓಂಕಾರ ಕಷ್ಟ, ನಿನ್ನಯ ತಪದಲ್ಲಿರುವ ಮೋಸವನವರು ಅರಿತಿಲ್ಲ! ಮರದ ದಿಮ್ಮಿಯಲಿ ಕುಳಿತು ಇನಿತು ತಪವನು ಗೈಯುವ ಮೀಂಚುಳ್ಳಿ ಧ್ಯಾನವು ಬಿಗಿವಾ ಹೊತ್ತಲಿ ಎದುರಿನ ಮೀನಲಿ ಪ್ರಣವವು ಅರಳುತಿರೆ ಬಾಯನು ತೆರೆದು ಹಾರುತ ಕಚ್ಚಿ ಹೊಟ್ಟೆ ತುಂಬಿಸುವ ಮೀಂಚುಳ್ಳಿ ^^^^