ಗಾಳಿ ಗೋಪುರ

ಕಡಲಿನಿಂದ ಎದ್ದು
ಬೀಸುವ ಗಾಳಿಗೆ ಎಲ್ಲೆಲ್ಲೂ ತಂಪು
ಮಡುಗಟ್ಟಿದ ಮೋಡಕ್ಕೆ ಸೋಕಿ
ಅಲ್ಲೊಮ್ಮೆ ಇಲ್ಲೊಮ್ಮೆ ಹನಿಸಿ
ತನ್ನಷ್ಟಕ್ಕೆ ತಾನು ಹಾಯುತ್ತಲೇ ಇದೆ

ಆ ಪರ್ವತ ಈ ಗುಡ್ಡ ಮರ ಮಟ್ಟು
ಎಲ್ಲವನೂ ಮುಟ್ಟುತ್ತ
ನಿಲ್ಲದೆಯೆ ಕ್ರಮಿಸುವುದೇ ಕ್ರಮ
ಬಾನೆತ್ತರಕೆ ಬೆಳೆದು ನಿಂತು
ತಡೆಯಾದರೂ  ಗೊಡವೆಯಿಲ್ಲದ ದಾರಿ

ಹಣ್ಣೆಲೆ ಕಾಯೆಲೆ
ಚಿಗುರೆಲೆಗಳ ಪಟ ಪಟ
ಬಿದ್ದ ಎಲೆಗಳು ಎದ್ದು ನಿಂತಿವೆ
ರೆಕ್ಕೆ ಬೀಸಿದಷ್ಟೂ ಸಂಭ್ರಮ ಆ ಹಕ್ಕಿಗೆ
ಜಡವಾದ ಗೂಡಿನಲಿ ಜೋಕಾಲಿ
ಆ ಕ್ಷಣ ಅಲ್ಲೊಂದು ನೀರವ ಏಕಾಂತದ
ಕಿವಿಯಲೂದಿ ಎಚ್ಚರಿಸುವ ಕಲೆ

ಹೆಚ್ಚು ಕಡಿಮೆ ತೂಕ ಲೆಕ್ಕ
ಎಲ್ಲವೂ ಲೋಕದ ವ್ಯವಹಾರಗಳು
ಬಿಟ್ಟು ಬಿಡಿ ಗಾಳಿ ಬಂದಾಗ
ತೂರಿಕೊಂಡು ಜೊತೆ ಜೊತೆಗೇ ಸಾಗಲಿ
ಗುಟ್ಟಿಲ್ಲದ ಗುರಿಯೊಂದಿಗೆ

ಅಲ್ಲೊಂದು
ಗುಡಿಯ ಹಂಗಿಲ್ಲದ
ಗಾಳಿ ಗೋಪುರ
ಆಗ ಕವಿತೆಯ ಕಿಟಕಿ ತೆರೆದಂತೇ


                

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

7 thoughts on “ಗಾಳಿ ಗೋಪುರ”

  1. Savitha Arun Shetty

    ತಡೆಯೇನು, ಅಳುಕಿಲ್ಲದ ನಡೆಗೆ? ಸಾಗಲಿ.

    ಸುಂದರ ಭಾವಲಹರಿ.

  2. dr k govinda bhat bhat

    ಭಾವಪೂರ್ಣವಾದ ಕವಿತೆ. ರೆಕ್ಕೆ ಬಿಚ್ಚಿ ಹಾರಲು ಬಯಸುವ ಮನಗಳಿಗೆ ಶುಭಹಾರೈಕೆಗಳು ಬಗ್ಗೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter