ಕವಿತೆ ಮತ್ತು ಋತು

ಋತು ಹೊರಳಬೇಕು
ಬದುಕು ಕವಿತೆಯಾಗುವುದಕ್ಕೆ

ಹದವಾಗಿ ಬಿದ್ದ ಮಳೆಗೆ
ಮಣ್ಣು ಮೊಳೆತು
ಚಿಗುರು ಮೊಗ್ಗು ಹೂ ಹಣ್ಣು
ಸೊಗಯಿಸಲು
ಋತು ಹೊರಳಬೇಕು

ಕೊರೆವ ಚಳಿಯಲಿ
ಗೂಡು ಸುತ್ತಿಕೊಂಡು
ಮೆಲುಕಾಡಿ
ಬೆತ್ತಲಾಗಿ
ಪೊರೆಕಿತ್ತೆಸೆದು
ಸುಂದರಚಿಟ್ಟೆಯಾಗಿ ಹಾರಲು
ಋತು ಹೊರಳಬೇಕು

ಮಣ್ಣು ನೀರು ಕಲೆತು
ತಿಗರಿಯಲಿ ಸುತ್ತಿ
ಬಿರುಬಿಸಿಲಿಗೆ ಬೆಂದು
ಗಡಿಗೆಯಾಗಿಖಣಖಣಿಸಲು
ಋತು ಹೊರಳ ಬೇಕು

ಬದುಕು ಸುರಿದ
ಎಣ್ಣೆಯಲಿ
ನೀರಿನಲಿ 
ಎದೆಯ ಪಂಜು ಏರಿಳಿದು 
ಕಿರುದೀಪ ಸ್ಥಿರವಾಗಲು 
ಋತು ಹೊರಳಬೇಕು

ಬಿದಿರಲಿ ಹೊಕ್ಕ ಗಾಳಿ
ಕವಿತೆಯಾಗಲು
ನಾನು ಉಸಿರಾಗಬೇಕು
*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಕವಿತೆ ಮತ್ತು ಋತು”

    1. dr k govinda bhat bhat

      ಕವಿತೆ ಯೋಚನೆಗೆ ಹೆಚ್ಚಿತು.

      ತುಂಬಾ ಗಂಭೀರವಾದ ಕಾವ್ಯ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai