ಪುರಸೊತ್ತೆಲ್ಲಿದೆ?

ಪುರಸೊತ್ತೆಲ್ಲಿದೆ ನಮಗೆ ?

ಪುರಸೊತ್ತೆಲ್ಲಿದೆ ನಮಗೆ? ಭವಿಷ್ಯದತ್ತ ಚಿಂತಿಸಲು?

ಯಂತ್ರಗಳ ಗಡಗಡಾಟ 

ಸ್ವಿಚ್ಚುಗಳ ಪಟಪಟಾಟ

ವಾಹನಗಳ ಗುಡುಗಾಟಗಳಲಿ

ಗೇಣುದ್ದ ಹೊಟ್ಟೆಯ ತಳವಿಲ್ಲದ ಚೀಲವ

ತುಂಬುವ ಹಪಹಪದಲಿ

ಬೆಳಕಿನಿಂದಿರುಳನಕ

ದುಡಿಯುವ ನಮಗೆ ಪುರಸೊತ್ತೆಲ್ಲಿದೆ?

ಬಸ್ಸು ರೇಶನ್  ಸೀಮೆಯೆಣ್ಣೆ ಸಿನೆಮಾಗಳ ಕ್ಯೂನಲ್ಲಿ

ಜಾಗ ಗಿಟ್ಟಿಸಲು

ಪ್ರತಿದಿನವೂ ಪ್ರತಿ ಕ್ಷಣವೂ

ಹೊಡೆದಾಡುವ ನಮಗೆ  ಪುರಸೊತ್ತೆಲ್ಲಿದೆ

ಪರರ ಹುಳುಕನಾರಿಸಿ ಶುದ್ಧ ಗೈಯುವ

ನಿರಂತರ ಕಾಯಕವ ಕೈಕೊಂಡ 

ನಮಗೆ, ಶ್ರಮಜೀವಿಗೆ 

ನಮ್ಮ ಭವಿಷ್ಯವ ಕುರಿತು ಚಿಂತಿಸಲು  ಪುರುಸೊತ್ತೆಲ್ಲಿದೆ?

ಇಂದಿನ ಈ ಹೊತ್ತಿನ ಚಿಂತೆಯಲೇ 

ತಲೆ ತುರಿಸಿಕೊಳ್ಳಲೂ ಆಗದೆ 

ತಲೆ ನರೆಸಿಕೊಳ್ಳುವ ನಮಗೆ 

ನಾಳಿನ ಚಿಂತೆಗೆ ಪುರಸೊತ್ತೆಲ್ಲಿ?

ಡಾ ಸತ್ಯವತಿ ಮೂರ್ತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai