ಅವನ ನಗು



ಅಡುಗೆ ಮನೆಯ
ದಿನಸಿ ಡಬ್ಬಗಳ ಸಾಲಿನ ನಡುವೆ
ಬುದ್ಧನಿದ್ದಾನೆ
ಹಸಿದಾಗ ಅವನ ಮೊಗ ನೋಡುತ್ತೇನೆ
ಅವಧೂತ ಬುದ್ಧ ನಗುತ್ತಾನೆ

ಒಲೆ ಹೊತ್ತಿಸಿದಾಗ
ಕಾವು ಪಾತ್ರೆಗೆ ತಾಗುತ್ತದೆ
ಅಕ್ಕಿ ಅನ್ನವಾಗುವಾಗ
ಕಪಾಟಿನಲ್ಲಿದ್ದ ಬುದ್ಧ
ತಟ್ಟೆಗೆ ಬರುತ್ತಾನೆ
ಅವಧೂತ ಬುದ್ಧ ಆಹಾರವಾಗುತ್ತಾನೆ
ದೇಹಕ್ಕೆ ಶಕ್ತಿ ತುಂಬುತ್ತಾನೆ

ಉಳಿದ ಅಡುಗೆ
ಮುಸುರೆ ಸೇರುವಾಗ
ಆಕಳು ಕೂಗುತ್ತಿರುತ್ತದೆ
ಬುದ್ಧ ಕರೆದನೆಂದು
ಓಡಿ ಹೋಗುತ್ತೇನೆ
ಮುಸುರೆ ಕುಡಿದ ಆಕಳು
ಕರುವಿಗೆ ಹಾಲುಣಿಸುತ್ತದೆ
ಹಾಲಿನಲ್ಲಿ ಕಾಣುವ ಬುದ್ಧ
ಮಂದಹಾಸ ಬೀರುತ್ತಾನೆ

ಮೆದೆ ಮುಸುರೆ ಸಗಣಿಯಾಗುತ್ತದೆ
ದೇವರೆಂದು ಸಗಣಿಯನ್ನು ಪೂಜಿಸುತ್ತೇವೆ
ಅಡುಗೆ ಮನೆಯ ಕಪಾಟಿನಲ್ಲಿದ್ದ ಬುದ್ಧ
ದೇವರ ಮನೆಯ ಇಣುಕಿ ನೋಡಿ ನಗುತ್ತಾನೆ
ನಾನು ಅವನ ನಗುವಲ್ಲಿ ನಗುವಾಗುತ್ತೇನೆ



                        *****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಅವನ ನಗು”

  1. ನಾ.ದಾಮೋದರ ಶೆಟ್ಟಿ

    ಹೊಸ ಹೊಳಹುಗಳಿವೆ. ಹೊಸತನವೂ ಸೇರಿದೆ. ಬುದ್ಧನ ಕವನಗಳ ಸಾಲಿಗೆ ಒಂದೊಳ್ಳೆಯ ಸೇರ್ಪಡೆ.

  2. ಎಷ್ಟು ಸುಲಭ ಅಲ್ಲವೇ ಬುದ್ಧನನ್ನು ಒಳಗೊಳ್ಳುವುದು.
    ಅರ್ಥಪೂರ್ಣ ಕವಿತೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter