ದೀಪ

ಉರಿದರೂ ತಿಳಿಯದ ಹಾಗಿದೆ ಉರಿವ ಆ ದೀಪ
ಉರಿಯ ಪರಿಯನ್ನು ತಿಳಿಸದೆ !
ಅದರೊಳಗೆ ಬತ್ತಿ ಎಣ್ಣೆ ಬೆಂಕಿ ಇದ್ದರೂ
ಅವು ಉರಿಯದೇ, ಅದೇ ಉರಿದಂತೆ

ಯಾರು ಹಚ್ಚುವಿರಿ ? ಏಕೆ ಹಚ್ಚುವಿರಿ ?
ಕೇಳಲಿಲ್ಲ ಅದು ಒಮ್ಮೆ
ಓಡೀತೇ ನಿಶೆ ? ಮೂಡಿದನೆ ಸೂರ್ಯ ?
ಇಲ್ಲ ಅವುಗಳ ಗೋಡವೆ ಅದಕ್ಕೆ

ಉರಿವುದೆನ್ನುವುದು ಇದೆಯೆ ? ಲೋಕದ ಕಣ್ಣು
ತರ್ಕಿಸುತ್ತಿದೆಯೆ ಉರಿವುದನ್ನು ?
ಬೆಂಕಿ ನೀರೊಳಗಿದ್ದ ಹಾಗೆ
ಕಾಣುವುದೆ ಕಣ್ಣು ಎಲ್ಲವನ್ನು ?

| ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ದೀಪ”

  1. ಉರಿಯ ಪರಿ
    ಬೆಂಕಿ ನೀರೊಳಗಿದ್ದ ಹಾಗೆ.

    ಇಷ್ಟವಾಯ್ತು ಕವಿತೆ

    1. ಉರಿವ ಪರಿ ಅರ್ಥಗರ್ಭಿತವಾಗಿದೆ.
      ಚಿಂತನೆಗೆ ಹಚ್ಚಿತು. ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter