ಕಾಲವೊಂದಿತ್ತು…
ಇಪ್ಪತ್ತರ ರಾಮುವಿಗೆ
ಹದಿನಾರರ ಪದುಮಳೊಂದಿಗೆ
ಮದುವೆ… ಒಗಟಿನೊಂದಿಗೆ ಮಾತ್ರ ಪತಿಯ ಹೆಸರು!
ಗಂಡನ ಹೆಸರ ಕೂಗಿ ಕರೆದರೆ
ಅರ್ಧಾಯುಷ್ಯ, ಹುಷ್! ಬೆದರಿದಳು ಚದುರೆ..
ಇಲ್ಕೇಳಿ, ಹೋಯ್…ರಾಗ
ಬರು ಬರುತ್ತಾ ಅಪ್ಪನ
ಕರಿಯೋ…ಆಯ್ತು.
ಕೂಡು ಕುಟುಂಬದ ಅವನಿಗೂ ನಾಚಿಕೆಯೇ! ಕೂಗಲಿಲ್ಲ ಹೆಂಡತಿಯ
ಹೆಸರು, ಕೇಳ್ಚನೇ? ಎಲ್ಲಿದ್ಯೇ?.
ಹೆಸರೇ ಕೂಗದೇ ಸಾಗಿತು
ಸಂಸಾರ ಸಲೀಸು!
ಇಬ್ಬರ ಕೂದಲೂ ಬಣ್ಣ ಬದಲಿಸುವಷ್ಟರಲ್ಲಿ
ಇಪ್ಪತ್ತೆಂಟರ ಮಗನಿಗೆ
ಇಪ್ಪತ್ತೆರಡರ ಹುಡುಗಿಯೊಂದಿಗೆ ವಿವಾಹ!
ಮತ್ತೆ ಗಂಡನ ಹೆಸರು ಕೂಗಬಾರದು ಹುಷ್!
ಸರಿ ಸರಿ, ‘ರ್ರೀ ಬನ್ನಿ ಇಲ್ಲಿ’
ರಾಗ ಲೋಕಾಂತದೊಳಗೆ
ಪ್ರಿಯ ‘ರವಿ’ಯ ನಾಮ
ಏಕಾಂತದೊಳಗೆ
ಅವನ ಬಾಯೊಳು ಹೆಂಡತಿಯ
ಹೆಸರು ಸಲೀಸು ಸುಮಿತ್ರಾ ಸುಮ್ಮಿಯಾದಳಷ್ಟೇ…
ನಿನ್ನಪ್ಪ ಒಮ್ಮೆಯೂ ಕರೆಯಲಿಲ್ಲ ನನ್ನನ್ನು ಹೀಗೆ.. ನಿಟ್ಟುಸಿರಿಟ್ಟ ಪದುಮ ಮೊಮ್ಮಗನ ಮದುವೆಗೆ
ತಯಾರಿ ನಡೆಸಿದಳು ಹೀಗೆ..
ಗಂಡನ ಹೆಸರು ಕರೆಯಬಾರದು ಹುಷ್!
ಇಪ್ಪತ್ತೈದರ ನವವಧು
ಕಿಲ ಕಿಲನೆ ನಕ್ಕು ಕೇಳಿದಳು
‘ನೀವಿಟ್ಟ ಹೆಸರು ಕರೆಯದೇ
ಹೊಸ ಹೆಸರಿಟ್ಟು ಕೂಗಿದರೆ’?
ಉತ್ತರಿಸಲಾಗದ ಪದುಮ ಸುಮ್ಮಿ ನೋಡಿಕೊಂಡರಷ್ಟೇ ಪರಸ್ಪರ….
ಕಾಲಗತಿಸುವುದೆಂದರೆ ..
*****
4 thoughts on “ಹೆಸರು”
ಕಿರು ಹಾಸ್ಯದೊಂದಿಗಿನ ನವಿರಾದ ಬರಹ.
ಚೆನ್ನಾಗಿದೆ.
ಧನ್ಯವಾದಗಳು ಗೆಳತಿ
ಕವಿತೆ ಚೆನ್ನಾಗಿದೆ
ಧನ್ಯವಾದಗಳು ಸರ್