ಬಿದಿಗೆ ಚಂದಿರ

ಬಾನ  ಬಯಲಿನಲ್ಲಿ  ಬಿದಿಗೆ ಚಂದ್ರ ಬಂದನು 

ನಿನ್ನ ಮೊಗವು ತೋರುವಷ್ಟೆ ಬೆಳಕು ತಂದನು 

ಅಲ್ಲಿ ಇಲ್ಲಿ ತಾರಗೆ ನಕ್ಕ ಹಾಗಿದೆ 

ಗೂಡ ಹಕ್ಕಿ ಹೊಸದೇ ಹಾಡ ಹಾಡಿದೆ 

ಬಾನಂಗಳದಲ್ಲಿ ಹಚ್ಚಿ ಹಣತೆ ದೀಪ 

ನಾನು ನೋಡುತಿರುವೆ ನಿನ್ನ ಮುದ್ದು ರೂಪ 

ನಿನ್ನ ಹುಬ್ಬು ಬಿದಿಗೆ ಚಂದ್ರನಂತೆ ಬಾಗಿ 

ಕಂಗಳಲ್ಲಿ ನನ್ನ ಬಿಂಬ ಕಂಡಿತಾಗಿ

ಓಡಿ ಆಡಿ ನಗುತಲಿದ್ದ ಬಿದಿಗೆ ಚಂದಿರ  

ಬಾನ  ಬಯಲಿನಲ್ಲಿ ತೆರೆದ ಪ್ರೇಮ ಮಂದಿರ 

 ********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

13 thoughts on “ಬಿದಿಗೆ ಚಂದಿರ”

  1. “Banana bayalinalli tereda Prema mandira “ bahu sogasaada saalu .Sahaja Saarla sundara padagalalli ,ika raatame do chanda khile ! Odi tumba khushiyayitu.

    1. K Janardhana Thunga

      ಪ್ರೇಮದಲ್ಲಿರುವಾಗ ಕಾಣಿಸುವುದು ಪ್ರೇಮಿಯ ಮುಖ‌ ಮಾತ್ರ; ಅವಳನ್ನು‌ ನೋಡಲು ಎಷ್ಟು ಬೆಳಕು ಬೇಕೋ ಅಷ್ಟೇ ಬಳಕೆ. ಅವಳಲ್ಲಿ ಮೆಚ್ಚಿಗೆಯಾಗುವ ಯಾವುದೋ ಒಂದಂಶವಿದೆ. ಬಿದಿಗೆ ಚಂದ್ರ ಎಂದರೆ‌ ಅರೆನಿಮೀಲಿತ ನೇತ್ರ. ಬಿದಿಗೆ ಚಂದ್ರ ಎಂದರೆ ಬಾಗಿದ ಹುಬ್ಬು. ಇಷ್ಟಿದ್ದರೆ ಸಾಕು, ಅಲ್ಲೇ ಪ್ರೇಮಂಮದಿರ

  2. ಚಿಕ್ಕ ಚೊಕ್ಕ ಕವನ
    ಹೋಲಿಕೆ,ಪದ ಲಾಲಿತ್ಯ ಅತಿ ಸುಂದರ
    ಪ್ರೇಮ ಮಂದಿರ ಹೃದಯ
    ಮಂದಿರವಾಗಳಿ.

  3. ಚಿಕ್ಕ ಚೊಕ್ಕ ಸುಂದರ ಕವನ
    ಹೋಲಿಕೆ, ಚಂದ ಪದ ಲಾಲಿತ್ಯ
    ಪ್ರೇಮ ಮಂದಿರದ ಉಗಮ
    ಎಲ್ಲವೂ ಅಮೋಘ,ಅತ್ಯುತ್ತಮ.

  4. ವಿಶ್ವೇಶ್ವರ ಗಾಯತ್ರಿ ಬೆಂಗಳೂರು

    ತುಂಬಾ ಸೊಗಸಾದ ಕವನ.
    ಕೆಲವೇ ಸಾಲುಗಳಲ್ಲಿ ಎಷ್ಟು ವಿವರ!!!
    ಅಭಿನಂದನೆಗಳು 👌👍🙏

  5. Raghavendra Mangalore

    ಕವನ ತುಂಬಾ ಸೊಗಸಾಗಿದೆ. ಕಂಗಳಲ್ಲಿ ನನ್ನ ಬಿಂಬ ಕಂಡಂತೆ ಸಾಲು ಅರ್ಥಗರ್ಭಿತವಾಗಿದೆ.

  6. ಕ ರಾ ಇದ್ದಲಿ,

    ಬಿದಿಗೆ ಚಂದಿರ ಸೊಗಸಾಗಿ ಮೂಡಿ ಬಂದಿದೆ,
    ನಿಮ್ಮ ಸಾಹಿತ್ಯಕೃಷಿ ನಿರಂತರವಾಗಿ ಸಾಗಲಿ.

  7. ಡಿ.ಸಿದ್ದಪ್ಪ

    ಚೆನ್ನಾಗಿದೆ ಕವನ,ಬಿದಿಗೆ ಚಂದ್ರ ದರ್ಶನ ಕಣ್ಣಿಗೆ ಕಟ್ಟುವಂತಿದೆ.ಗೂಡ ಹಕ್ಕಿ ಹೊಸ ಹಾಡು……..ಬಹಳ ಸುಂದರವಾಗಿದೆ ಏಕೆಂದರೆ,ಹಕ್ಕಿಯ ಹೊಸ ಹಾಡು ಹಾಡಿದೆ,ಅದಕ್ಕ ಎಷ್ಟು ಸಂತೊಷವಾಯಿತು ನೋಡಿ?

  8. ಪ್ರಾಸ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ
    ಸರಳ ಸುಂದರ ಕಾವ್ಯ ನೆಟ್ಟಿತು ಮನದಲ್ಲಿ….
    ಅಭಿನಂದನೆಗಳು..

  9. ದ್ವಾರಕಾನಾಥ್

    ಬಿದಿಗೆ ಚಂದಿರ ಇಂದು ಮನೆಗೆ ಬಂದ ಹಾಗಿದೆ
    ಮನದ ದುಗುಡ ದೂರ ಮಾಡಿ ಹೋಗಿದೆ
    ಬೇಸಿಗೆಯಲ್ಲಿ ತಂಗಾಳಿ ತಂದ ಹಾಗಿದೆ
    ಮತ್ತೆ ಮತ್ತೆ ಕವನ ಓದುವ ಆಸೆಯಾಗಿದೆ🙏🎊🙏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter