“ಸೈಡ್ ವಿಂಗ್ ನಲ್ಲಿದ್ದಾರೆ ರಕ್ಕಸರು”

ಸೈಡ್ ವಿಂಗ್ ನಲ್ಲಿದ್ದಾರೆ ರಕ್ಕಸರು
ಝಳಪಿಸುತ್ತ ಕತ್ತಿ ಗುರಾಣಿ
ಯಾವಾಗ ಧುಮುಕುತ್ತಾರೆ ರಂಗಸ್ಥಳಕ್ಕೆ ಗೊತ್ತಿಲ್ಲ

ಈಗ ದೇವತೆಗಳ ಸರದಿ
ತಕ್ಕ ಸಮಯಕ್ಕೆ ಕಾಯುತ್ತಿದ್ದಾರೆ
ಎಡವಿ ಬೀಳುವುದನ್ನು

ನಿರಂತರ ಎಚ್ಚರಿರಬೇಕು
ಕೆಲಸವಿಲ್ಲದಿದ್ದರೂ
ಶಸ್ತ್ರ ಸಿದ್ಧವಾಗಿರಬೇಕು

ಯುದ್ಧವೆಂದರೆ ಹಾಗೆಯೇ ಅಲ್ಲವೇ
ಶತ್ರುಗಳ ದೌರ್ಬಲ್ಯವನ್ನು ಹಿಡಿಯುವುದು
ತನ್ನ ಸಾಮರ್ಥ್ಯಕ್ಕಿಂತಲೂ

ವಿಷಕ್ಕೂ ಅಮೃತಕ್ಕೂ ಯುದ್ಧ
ಯಾವಾಗಲೂ ಅಮೃತ ಮೇಲೆದ್ದು ಬರುವುದಿಲ್ಲ
ಮಥನದ ಫಲಿತ ಅನುಭವಿಸಬೇಕಾದವರು ಪ್ರೇಕ್ಷಕರು

ಹಾಗೆ ನೋಡಿದರೆ ವಿಷವೂ ಅಮೃತವೂ ಒಂದೇ
ನಾಣ್ಯದ ಎರಡು ಮುಖಗಳು
ಒಂದಿಲ್ಲದಿದ್ದರೆ ಇನ್ನೊಂದಕ್ಕೆ ಅರ್ಥವಿಲ್ಲ.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on ““ಸೈಡ್ ವಿಂಗ್ ನಲ್ಲಿದ್ದಾರೆ ರಕ್ಕಸರು””

  1. Dr Madhavi S Bhandary

    ಇದು ಬದುಕಿನ ಸಾರ್ವಕಾಲಿಕ ಸತ್ಯವನ್ನು ಸಾರುವ ಅಮೃತ ಮಥನ. ಇಲ್ಲಿ ಯುದ್ಧವಿಲ್ಲದಿದ್ದರೂ ನಿರಂತರವಾಗಿ ಶಸ್ತ್ರ ಸನ್ನದ್ಧರಾಗಿರಬೇಕು.

  2. ನಾ.ದಾಮೋದರ ಶೆಟ್ಟಿ

    ಯಕ್ಷರಕ್ಕಸರ ರೂಪಕ ಸೊಗಸಾಗಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai