ಒಡನಿದ್ದವರು
ಒಡಹುಟ್ಟಿದವರು
ಯಾರೂ ಲೆಕ್ಕಕ್ಕಿಲ್ಲ
ಒಂಟಿಯುದ್ಧ
ಒಳಗೂ…. ಹೊರಗೂ….
ನನ್ನ ಓರೆ ಕೋರೆಗಳ ಮುಚ್ಚಲು
ಸಾಹೇಬನ ಸತ್ವ ಪರೀಕ್ಷೆಗಳು
ಬದುಕಿಗೆ ಬಿದ್ದ ಬರೆಗಳು !
ಮುಳ್ಳ ಹಾದಿಯಲಿ ಹೊರಟವಳಿಗೆ
ಗಾಯ ಗೀರು ರಕ್ತಸಿಕ್ತ
ನಿಟ್ಟುಸಿರು ಏದುಸಿರು
ಅನೂಚಾನ ಕುದಿಯೆಸರು ಒಡಲು !
ಬೆಂಕಿಯ ಬಲೆಯಲ್ಲಿದ್ದವಳಿಗೆ
ಬರೆಯ ಬಿಸಿಯೂ… ಬಿಸಿಯೇ
ಎದೆಯೊಳಗೊಂದು ಹೊಗೆ
ಬಯಲೊಳಗೆಲ್ಲ ಹಗೆ
ಹಾಗೆಯೇ ಹಾಯಾಗಿದ್ದೇನೆ !
ಹಗೆ ಹೊಗೆಗಳ ಮೀರಿನಿಂತಿದ್ದೇನೆ
ದಿನನಿತ್ಯದ ಪ್ರಶ್ನೆಗೆ
ಬಾತುಕೋಳಿಯಾಗಲಾರದೇ
ಹೊಂಡದಲಿ ಬಾತುಬಿದ್ದ
ಜೀವಚ್ಛವವಾಗದೇ
ಉಸಿರಹನಿಗೊಂದೊಂದು
ವಜ್ರದುಂಡೆಗಳ ತುತ್ತನುಣಿಸುತ್ತೇನೆ !
ಹೂದೋಟವಾಗಿದ್ದ ಆ ಕಾಲದಲ್ಲಿ
ಸಹಿಸಲಾಗಲಿಲ್ಲ ಅವನಿಗೆ !
ಬಾಳತಿರುವುಗಳಲ್ಲಿ ತಾಳಲಾರದಂತೆ
ಬಂಧಿಸಿದ ನನಗಿಷ್ಟವಾಗಿದ್ದನ್ನೆಲ್ಲ ಕಸಿದು
ಹಗ್ಗಜಗ್ಗಾಟ ಬಗ್ಗಲಿಲ್ಲ ನಾ…..
ಹೂಳಿದ್ದ ಎದೆಗಾರಿಕೆ ಬಗೆದುನಿಂತೆ
ಹಣೆಬರಹಗಳಿಗೆ ಬರೆಯೆಳೆದು
ಸಾಕಷ್ಟು ಸುಟ್ಟುಕೊಂಡಿದ್ದೇನೆ
ಜೋಲಿ ಹೊಡೆಯುತ್ತಾ
ಸಾಗಿದ್ದ ನನ್ನಬಂಡಿಗೆ
ನನಗೇ ಗೊತ್ತಿಲ್ಲದಂತೆ
ಅಮೂರ್ತಕೈಗಳು ಹಿಡಿದಿದ್ದಿದೆ !
ಸಾಹೇಬನ ಕಡುಪ್ರೀತಿ
ಅಗ್ನಿದಿವ್ಯದ ದವತಿಯಲ್ಲಿ
ಅದ್ದಿ ಅಭಿವ್ಯಕ್ತಿ ಅರಳಿಸುತ್ತೇನೆ
ಅಂತ್ಯಗಾಣುವವರೆಗೂ…..
——-0——–
16 thoughts on “ಸಾಹೇಬನ ಕಡುಪ್ರೀತಿ”
ನಿಜ. ಇದು ಒಂಟಿ ಯುದ್ಧ
.
ನಿಜ. ಇದು ಒಂಟಿ ಯುದ್ಧ.ಚೆನ್ನಾಗಿದೆ ಕವನ.
.
Thanks sir
ಅತ್ಯಂತ ಬಿಗು ಶಬ್ದಬಂಧಗಳ ಸುಂದರ ಕವಿತೆ
ಧನ್ಯವಾದ ಮೇಡಂ
ಚೆನ್ನಾಗಿದೆ
ಉತ್ತಮ ಕಾವ್ಯಾಭಿವ್ಯಕ್ತಿ, ಧ್ವನಿಪೂರ್ಣ.
Thanks
ಉತ್ತಮ ಭಾವನೆಗಳ ಕವಿತೆ.
ಧನ್ಯವಾದ
ಗಟ್ಟಿಬಂಧದ ಕವಿತೆ.
ಎದೆಯೊಳಗೂ ಕೂಡ ಹಾಗೇ
Thank you Nagarekha
ಮತ್ತೆ ಮತ್ತೆ ಓದಲು ತಳ್ಳಿತು ,ಧನ್ಯವಾದ
Thanks
ಅಭಿನಂದನೆಗಳು ವಿಭಾ . ತುಂಬಾ ಚಂದದ ಕವನ ಸೂಪರ್ ಎಷ್ಟು ಅರ್ಥ ಗರ್ಭಿತ
ಚಂದದ ಕವಿತೆ ವಿಭಾರವರೆ.ಉತ್ತಮ ಪದ ಬಂಧ