ನದಿ ಮತ್ತು ದಡ

ಉಕ್ಕಿ ಹರಿಯ ಬೇಕು ಎನುವಂತಿದೆ ಆ ನದಿ

ತನ್ನ ಮನಸನ್ನೆ ನದಿಯಾಗಿ ಮಾಡಿ

ಹರಿಯ ಬೇಡ ಮೈ ಮೇಲೆ, ಒಳಗೆ ಇರೆ ಸುಮ್ಮನೆ

ಎನುವಂತಿದೆ ದಡ, ಅದರ ಗಂಡನಂತಾಗಿ !

ಗಂಡ ಹೆಂಡಿರ ಜಗಳ ಬಿಗಡಾಯಿಸಿದಾಗ

ನದಿ ಎತ್ತುವಂತಿದೆ ಕೈ, ದಡಮೀರಿ ಹರಿದು

ಇಳಿದ ಕ್ಷಣ ಕೋಪ, ಮೊದಲಿನಂತೆಯೇ ಹರಿದು

ಇರುವುದು ತಾಯ ತೊಡೆಯಲ್ಲಿರುವಂತೆ ಮಗು

ಭಾವಿಸುವಂತಿದೆ ಮಳೆ ಸುರಿದರೆ ಹೇಗೆ ಇವರ ಮೇಲೆಪ

ಆದರೂ ಬಂದಿರುತ್ತದೆ ಅನೇಕ ವೇಳೆ

ನದಿ ಮತ್ತು ದಡಕ್ಕೆ ಇಷ್ಟ, ಬಂದರೇನಾದರೂ ಮಳೆ

ಅಪ್ಪಿ ಒಪ್ಪಿ ಕೊಳ್ಳಬಹುದಲ್ಲ ನಾವು ಮತ್ತೆ ಮತ್ತೆ !

ನಡೆದು ಹೋಗುತ್ತೇನೆ  ದಡದ ಮೇಲೆ ಒಮ್ಮೊಮ್ಮೆ

ನದಿಯ ಜುಳು ಜುಳು ಜುಳುವು ಕಿವಿ ತೆರೆಯಲಿಕ್ಕೆ

ಆಗ ಅದು ತಾಯಿಯಂತೆಯೆ ಕಂಡು, ನನ್ನೊಳಗೆ

ಹುಟ್ಟುವುದು ಇನ್ನೊಂದು ನದಿ, ದಡವೆ ಇರದೇ !

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ನದಿ ಮತ್ತು ದಡ”

  1. ಚಿಂತಾಮಣಿ ಕೊಡ್ಲೆಕೆರೆ

    ಮೊಗಸಾಲೆಯವರ ಕಾವ್ಯದೊಂದು ಹೊಸ ಮಜಲು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter