(ಮೇಲೆ ನೀಡಲಾದ ರೇಡಿಯೋ ಬಟನ್ ಕ್ಲಿಕ್ ಮಾಡುವ ಮೂಲಕ ಕವಯತ್ರಿ ಅಂಜನಾ ಹೆಗಡೆಯವರ ಧ್ವನಿಯಲ್ಲಿಯೇ ಕವಿತೆ ಆಸ್ವಾದಿಸಿ)
ಸೀರೆಯಂಚಿನ ಕುಚ್ಚಿನಂತೆ
ಗಾರ್ಡನ್ನು ಕಿಚನ್ನು ಸೋಫಾ ಕಪಾಟು
ಎಲ್ಲೆಂದರಲ್ಲಿ
ಸೊಂಟ ಬಳುಕಿಸುತ್ತದೆ
ಒಮ್ಮೆ ನೆಲದ ಮೈಸವರುತ್ತ
ಮತ್ತೊಮ್ಮೆ ಮಡಿಕೆಯೊಳಗೆ ಅಡಗುತ್ತ
ಆಗಾಗ ನಾಚುತ್ತ ನಸುನಗುತ್ತ
ಮೆತ್ತಗೆ ಅತ್ತಿಂದಿತ್ತ ಕದಲುತ್ತದೆ
ಹೊಳೆವ ಬಣ್ಣಗಳಲ್ಲೊಂದು
ಉರಿವ ಹೃದಯ
ಥಟ್ಟನೆ
ಕರಿಮೀಸೆಯಾಗಿಬಿಡುವ ಕಂಬಳಿಹುಳು
ತುಟಿಯಂಚಿನ ಮಾತ ಮುಚ್ಚಿಟ್ಟು
ಇದ್ದೂ ಇಲ್ಲದಂತಾಗಿಬಿಡುತ್ತದೆ
ಸಮಯ ಸಿಕ್ಕಾಗಲೊಮ್ಮೆ ನೇವರಿಸಿ
ಅತ್ತಿತ್ತ ಸರಿಸಿದರೆ ಎಲ್ಲ ಸರಾಗ
ದಿಕ್ಕುತಪ್ಪದ ಚಲನೆ!
ಕಲಿಸಬೇಕಿಲ್ಲ
ಜಾಡು ಮುಚ್ಚಿಡುವ ಜಾಣ್ಮೆಯ
ಬೆರಳಿಗೆ ತಾಕಿದ ಉರಿ
ಹೃದಯಕ್ಕಿಳಿಯುವುದಿಲ್ಲ
ಹಕ್ಕಿಯಂತೆ ಮನಬಿಚ್ಚಿ ಹಾಡುವುದಿಲ್ಲ
ಕಂಬಳಿಹುಳು!
ಮೀನಿನಂತೆ ಮನಬಂದಂತೆ
ಈಜುವುದೂ ಇಲ್ಲ
ರೆಕ್ಕೆಮೂಡುವವರೆಗೂ ಪಟ್ಟುಹಿಡಿದು ಕಾಯುತ್ತ
ಗುಟ್ಟಾಗಿ ಹಾರಿ ಮಾಯವಾಗುತ್ತದೆ
ಎತ್ತ ಹಾರಿತೆಂದು
ದೃಷ್ಟಿಹಾಯಿಸುವ ಮುನ್ನವೇ
ಬೆಳಕಿನ ಮಾಯೆಯಲ್ಲಿ
ಮುಳುಗೇಳಿಸುತ್ತದೆ
ಬಯಕೆಯ ಬಣ್ಣಗಳೆಲ್ಲ ಮತ್ತೆ
ಕಂಬಳಿಹುಳುವಾಗಿ
ನಡುಕ ಹುಟ್ಟಿಸುತ್ತವೆ
13 thoughts on “ಕಂಬಳಿಹುಳು”
Kavanada padagalu kavayatriya daniyondige hrudhayakkiliyuthade.
ಧನ್ಯವಾದಗಳು ಮಂಗಲಾ !!
ಅಹಾ…ಸೊಗಸಾದ ಕವಿತೆ
ಫೈಜ್ನಟ್ರಾಜ್
ಥ್ಯಾಂಕ್ಯೂ ಫೈಜ್ ಭಾಯ್ !!
Good one. Kambali hula symbolises woman in our Culture
ಓಹೋ! ಇದು ಹೊಸ ವಿಷಯ. ಧನ್ಯವಾದಗಳು
ಚೆಂದದ ಕವಿತೆ ಅಂಜನಾ. – ಸ್ಮಿತಾ ಅಮೃತರಾಜ್
ಥ್ಯಾಂಕ್ಯೂ ಸ್ಮಿತಾ !!
ಕವಿತೆ ತುಂಬಾ ಚೆನ್ನಾಗಿದೆ ಮೇಡಮ್
-ವಿಶ್ವನಾಥ ಎನ್. ನೇರಳಕಟ್ಟೆ
ಧನ್ಯವಾದಗಳು ವಿಶ್ವನಾಥ್ ಅವರೇ !!
ಉತ್ತಮ ಕವಿತೆ. ‘ಹೊಳೆವ ಬಣ್ಣಗಳೊಂದು ಉರಿವ ಹೃದಯ’, ಬೆಳಕಿನ ಮಾಯೆಯಲ್ಲಿ
ಮುಳುಗೇಳು’, ಬೆರಳಿಗೆ ತಾಗಿದ ಉರಿ,
‘ಬಯಕೆ ಬಳ್ಳಿಗಳೆಲ್ಲ ಕಂಬಳಿ ಹುಳುವಾಗಿ’
ಈ ಕೆಲವು ಪದಪುಂಜಗಳಿಂದ ಕಾವ್ಯ ಪ್ರತಿಮೆ ಜೊತೆಗೆ ಕವಿಯ ಪ್ರತಿಭೆಯೂ ಪಳಪಳಿಸುವಂತಿದೆ.
ಕೆಲವೊಂದು ಕಡೇ , ಉದಾ. ‘ಮೀನಿನಂತೆ ಈಜವುದಿಲ್ಲ, ಹಕ್ಕಿಯಂತೆ ಹಾರಾಡುವುದಿಲ್ಲ’ ಈ ಕವಿತೆಯ ಒಟ್ಟಂದದ ಸಂದರ್ಭದಲಿ ವಾಚಾಳಿ ಅನ್ನಿಸುವುದೇನೋ…..
ಅಭಿನಂದನೆಗಳು.
ಗೋಪಾಲ ತ್ರಾಸಿ.
ಧನ್ಯವಾದಗಳು ಗೋಪಾಲ್ ಅವರಿಗೆ..
Hello
Kavithe chennagide .nanu aduve moodalli idene.malle barallee enne baralle superb kavithe.
Dannyavadagallu govindanna
Bareetaerre Annandale free aagee enjoy madutteve nimma kavithegallana
Thanks