ಕುಳಿರು ಕಾಲ

ಚಳಿಯ ಕಾಲ ಬಂದಿದೆ

ಒಳಗೆ ಬಯಕೆ ತುಂಬಿದೆ

ಬಳಿಗೆ  ನೀನು ಬರದೆ ವಿರಹ ಕಾಡಿದೆ|

ತಳೆದ ಗಾಢ ಮೋಹ

ಕುಲುಮೆಯಲ್ಲಿ ತನು_ಮನ 

ಬಳಲಿ ನೋವಿನಿಂದ ತಾನು ಬೆಂದಿದೆ||

ಬರದೆ ಓ ಸಖ ನೀನು

ಮರುಳು ವಿರಹಿಣಿ ನಾನು

ಅರಿಯದುಳಿದೆ ಏಕೆ ದೂರದಿ ಇನ್ನೂ|

ಸುರಿಸಿ ಪ್ರೇಮ ಧಾರೆಯ

ಸುರತಕೊದಗಿ ಬಾರೆಯ

ಎರೆಯನೆ ಕೇಳು ಶೀತ ಸುಡುತಲಿಹುದು||

ತನುವ ಸೀಳಿ ಬರುತಿದೆ

ಮನುಮಥನ ಸುಮಶರವು

ಅನುಕರಿಸಿ ಮೋದದಿ ಕುಳಿರು ಪವನನು|

ಅನುಕೂಲ ನೀನಿರಲು

ಮನದಿನಿಯ ಬಾ ಬೇಗ

ಅನುಪಮ ಸೊಗದಲಿ ಮೀಯುವ ತೋಷದಿ||

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai