ನಯನದಲಿ ಮದಿರಾ ಹೂಜಿ ಇರಿಸಿಕೊಂಡವಳು ಎಲ್ಲಿ ಹೋದಳು

ನೋಟದಲಿ ಮಧು ಕುಡಿಸಿ ಅಮಲೇರಿಸಿದವಳು ಎಲ್ಲಿ ಹೋದಳು

ತಾಳೆಯ ಬನದಲಿ ಸುಳಿದಾಡಿ ಗಂಧವ ಪೂಸಿಕೊಂಡವಳು

ಹೊನ್ನಿನ ಬೆಡಗಿ ಕೇದಿಗೆ ಘಮ ಹರಡಿದವಳು ಎಲ್ಲಿ ಹೋದಳು

ಒಲವಿನ ವನದಲಿ ಅರಳಿ ಹೂನಗೆ ಚೆಲ್ಲುವ ಶೋಡಸಕುವರಿ

ಪ್ರೀತಿಯಲಿ ಮುತ್ತಿನ ಅಫೀಮ ತಿನಿಸಿದವಳು ಎಲ್ಲಿ ಹೋದಳು

ಹಗಲೆಲ್ಲಾ ಮಿನಿದು ಮೊಗ್ಗಾಗಿ ಬಿಂಕದಲಿ ಬಿಮ್ಮನೆ ಕುಳಿತವಳು

ಇರುಳು ನಿಶಿಗಂಧ ಪುಷ್ಪವಾಗಿ ಅರಳಿದವಳು ಎಲ್ಲಿ ಹೋದಳು

ಒಲಿದ ಹೃದಯ ಸರೋವರದಲಿ ಜಲಕ್ರೀಡೆ ಆಡಿಸಿದವಳು

ಬಿರಿದ ನೈದಿಲೆಗೆ ಚಂದ್ರ”ಪ್ರಭೆ” ಯ ಬೀರಿದವಳು ಎಲ್ಲಿ ಹೋದಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai