ನಾಳೆಗೂ ಇರಲಿ ಕವಿತೆಗಳು

(82ಕ್ಕೆ ಕಾಲಿಡುವ ದಿನದ ಕವಿತೆ )

ನಾಳೆಗೂ ಇರಲಿ ಕವಿತೆಗಳು
ಹಗುರವಾಗಿ ಎತ್ತಿದ ಹಾಗೆ ಭೂಮಿಯ
ಪ್ರೀತಿಯಲಿ ಸ್ಪರ್ಶಿಸಿದ ಹಾಗೆ ಪ್ರತಿಯೊಬ್ಬರ

ಮಗು ಹುಟ್ಟುವ ಹಾಗೆ ಹುಟ್ಟಲಿ
ಆ ಮೇಲೆ ಮಗುವೇ ಆಗಲಿ
ಪುಟುಪುಟು ನಡೆಯುತ್ತಲೇ ಬೆಳೆ ಬೆಳೆದು
ಎದೆ ಸೆಟೆಸಿ ನಡೆದು
ನಾವಾಗಲಿ

ಸುಮ್ಮನೆ ಒಂದು ಗುಲಾಬಿ ಗಿಡವನ್ನು ನೆಟ್ಟು ನೋಡಿ
ದಿಟ್ಟಿಸಿ ನೋಡುತ್ತಾ ದಿನ ದಿನವೂ ಇರಿ
ಮುಳ್ಳುಗಳ ನಡುವಿನಲ್ಲಿ ಹೂವೆನ್ನುವ ಹೂವು
ಇದ್ದ ಹಾಗಲ್ಲವೇ ಕವಿತೆಗಳೂ?
ನಾಳೆಗೂ ಇರಲಿ ಇವು
ನಮ್ಮ ವಂಶದ್ದೇ ಆದ ಕೂಸು!

                       ನಾ. ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ನಾಳೆಗೂ ಇರಲಿ ಕವಿತೆಗಳು”

  1. Chintamani Sabhahit

    ಒಬ್ಬ ಕವಿ,
    ಯಾವಾಗಲೂ ಕವಿ!
    ದೇಹದ ವಯಸ್ಸಿನಿಂದ
    ಆತನ ಕವಿ ಭಾವ
    ಮಾಯವಾಗುವುದಿಲ್ಲ;
    ಕವಿ ಹೃದಯದ ಬಡಿತ
    ನಿಲ್ಲುವದಿಲ್ಲ!
    ಮತ್ತೊಮ್ಮೆ ಓದಿ ನೋಡಿ:
    “ಮುಳ್ಳುಗಳ ನಡುವೆ ಹೂವೆನ್ನುವ ಹೂವು
    ಇದ್ದ ಹಾಗಲ್ಲವೇ ಕವಿತೆಗಳೂ?

    ಈ ಪ್ರಕೃತಿಯಲ್ಲಿ
    ಆಶ್ರಯ ಪಡೆಯುತ್ತದೆ,
    ಕವಿಯ ಆಶಯ!
    ಅದು ಮಧುರ, ಹಾಗೂ ಹಗೂರ!

  2. Chintamani Sabhahit

    ಮತ್ತೊಮ್ಮೆಓದಿದಾಗ………
    ————————————–

    ಒಬ್ಬ ಕವಿ,
    ಸದಾ ಕವಿ.

    ದೇಹದ ವಯಸ್ಸಿನಿಂದ
    ಆತನ ಕವಿ ಪ್ರಜ್ಞೆ
    ಮಾಯವಾಗುವುದಿಲ್ಲ;
    ದಣಿಯುವದಿಲ್ಲ;
    ಮಾಸುವುದು ಕೊಡ ಇಲ್ಲ.

    ಕವಿ ಹೃದಯದ ಮಿಡಿತ
    ಸೋಲುವುದಿಲ್ಲ!

    ಮತ್ತೊಮ್ಮೆ ಓದಿ ನೋಡಿ:
    “ಮುಳ್ಳುಗಳ ನಡುವೆ ಹೂವೆನ್ನುವ ಹೂವು
    ಇದ್ದ ಹಾಗಲ್ಲವೇ ಕವಿತೆಗಳೂ?

    ಈ ಪ್ರಕೃತಿಯಲ್ಲಿ
    ಆಶ್ರಯ ಪಡೆಯುತ್ತದೆ,
    ಕವಿಯ ಆಶಯ!
    ಸಮಯದ ಮೂಸೆಯಲ್ಲಿ
    ಶಬ್ದಗಳು ಬಾಗುತ್ತ
    ಆಗುತ್ತೆ ಹಗುರ, ಮತ್ತಿಷ್ಟು ಮಧುರ!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai