ರಾತ್ರಿ ನಿದ್ದೆ ಬಾರದೆಂದು 

ಹೂವಿಗೇಕೆ ಗಂಧವೆಂದು 
ಕೇಳಬೇಡಿರಿ 
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ  

ಮಳೆ ಏತಕೆ ನಿಲ್ಲದೆಂದು 
ಕೇಳಬೇಡಿರಿ 
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ  

ಮಗು ನಕ್ಕಿತು ಏಕೆ ಎಂದು 
ಕೇಳಬೇಡಿರಿ 
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ  

ಒಲಿದು ಹಕ್ಕಿ ಹಾಡಿತೇಕೆ 
ಕೇಳಬೇಡಿರಿ 
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ  

ಮುನಿದು ಬಿರುಸು ಮಾತುಗಳನು
ಆಡಬೇಡಿರಿ 
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ  

ಎಲ್ಲ ನನ್ನದೆಂದು ಛಲ 
ಮಾಡಬೇಡಿರಿ 
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ  

  • ಚಿಂತಾಮಣಿ ಕೊಡ್ಲೆಕೆರೆ 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

15 thoughts on “ರಾತ್ರಿ ನಿದ್ದೆ ಬಾರದೆಂದು ”

  1. Chintamani Sabhahit

    ಸ್ಪಂದನೆಗೆ ಒಸರುವ ಕವಿ ಹೃದಯದ ಮಾರ್ದವತೆಯಸ್ವಾದವಿದು!

    1. ಸೃಷ್ಟಿ ಸಹಜ ಕ್ರಿಯೆಗಳು ಪ್ರಶ್ನಾತೀತ .
      ನಕಾರಾತ್ಮಕ ಯೋಚನೆಯಿಂದ ಮುಕ್ತ
      ಸ್ವಾರ್ಥದಿಂದ ದೂರ ಎಂಬ ಸಂದೇಶ ಇದೆಯೆಂದು ನನಗ ಅನ್ನಿಸ್ತು ಗುರುವೇ….

    2. ಚಿಂತಾಮಣಿ ಕೊಡ್ಲೆಕೆರೆ

      ಧನ್ಯವಾದಗಳು ಪ್ರಿಯ ಕಾವ್ಯ ಬಂಧು

    1. ಚಿಂತಾಮಣಿ ಕೊಡ್ಲೆಕೆರೆ

      ಧನ್ಯವಾದಗಳು ಪ್ರಿಯ ಕಾವ್ಯ ಬಂಧು

    1. ಎಚ್. ಎನ್. ಮುರಳೀಧರ

      ಇಂಥ ಕವಿತೆ ಬಂದು ನಿಂತು ಮಾತನಾಡಲು
      ರಾತ್ರಿ ನಿದ್ದೆ ಬಾರದೆಂದು ಹೇಗೆ ಹೇಳಲಿ?

    2. ಚಿಂತಾಮಣಿ ಕೊಡ್ಲೆಕೆರೆ

      ಧನ್ಯವಾದಗಳು ಪ್ರಿಯ ಕಾವ್ಯ ಬಂಧು

    3. ಚಿಂತಾಮಣಿ ಕೊಡ್ಲೆಕೆರೆ

      ಧನ್ಯವಾದಗಳು, ಪ್ರಿಯ ಕಾವ್ಯ ಬಂಧು

    1. ಚಿಂತಾಮಣಿ ಕೊಡ್ಲೆಕೆರೆ

      ಧನ್ಯವಾದಗಳು ಪ್ರಿಯ ಕಾವ್ಯ ಬಂಧು

    1. ಚಿಂತಾಮಣಿ ಕೊಡ್ಲೆಕೆರೆ

      ಧನ್ಯವಾದಗಳು ಪ್ರಿಯ ಹಿರಿಯ ಕಾವ್ಯ ಬಂಧು

  2. ವ್ಯಕ್ತಿ ತಾ ಮಣಿಯಾಗಿರಲ್ ಮಣಿದು ಒದಗುವವು ಪದಗಳು ಕವಿತೆಯಂದದಿ. ನಿಮ್ಮದು ಸೊಗಸಾಲೆ.

  3. ಚಿಂತಾಮಣಿ ಕೊಡ್ಲೆಕೆರೆ

    ಧನ್ಯವಾದಗಳು ಪ್ರಿಯ ಕಾವ್ಯ ಬಂಧು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai