ಒಲವು ಮೂಡಿತು ನಿನ್ನ ಕೇಳದೆ
ದಿನವು ಕಳೆಯಿತು ನಿನಗೆ ಹೇಳದೆ
ಇರುಳಿಡೀ ಮಳೆಯಲ್ಲಿ ನೆನೆದ ಹೂಗಿಡವು
ಬೆಳಗಿನಲು ಒದ್ದೆ ಇರುವಂತೆ
ನೀರಹನಿಗಳ ಮೇಲೆ ಎಳೆಬಿಸಿಲ ಕಿರಣ
ಬಣ್ಣಗಳ ಕನಸು ತೆರೆವಂತೆ
ನಕ್ಕಿದ್ದೆ ಮಲ್ಲಿಗೆಯ ಹಾಗೆ
ಹೊಂಬೆಳಕು ಮರೆಯುವುದು ಹೇಗೆ!
ಕನಸಿನಂತೇ ಬಂದು ಎದ್ದು ಹೋಗಿರುವೆ
ನೀ ಬರುವೆ ಎಂದು ಕಾದಿರುವೆ
ಈ ರಾತ್ರಿ ಮಳೆಯಲಿ ಬನ ಮುಳುಗಿ ಏಳಲಿ
ಬೆಳಗಾಗ ಎಳೆಬಿಸಿಲು ಬರದೆ?
ಮಧು ಅರಸಿ ಹಾರುವವು ಜೇನು
ನಾಳೆ ನೀ ಬರದಿರುವೆಯೇನು!








15 thoughts on “ಒಲವು ಮೂಡಿತು ನಿನ್ನ ಕೇಳದೆ …”
ಚಂದದ ಕವಿತೆ.
ಅಭಿನಂದನೆಗಳು.
Short and sweet
Very nice 👌
ಪ್ರೇಮ ಮತ್ತು ಪ್ರಕೃತಿ ಒಂದಾಗಿದೆ
ಸೊಗಸಾಗಿದೆ ಕವಿತೆ. ಅಭಿನಂದನೆಗಳು ಸರ್ 👌🏼👌🏼💐💐
ಚಂದ
ಕನಸುಗಳನ್ನು ತೆರೆಯುವ ಕವಿತೆ.
‘ಮಧು ಅರಸಿ’ ಬದಲಾಗಿ ‘ಮಧುವರಸಿ’ ಅಂದಿದ್ದರೆ ತಡೆ ಇಲ್ಲದೆ ಓಘ ಸಿಗುತ್ತಿತ್ತೋ ಏನೋ… ಈ ಕ್ಷಣದಲ್ಲಿ ಅನ್ನಿಸಿದ್ದು! ಏನೇ ಇರಲಿ ಪದ್ಯ ಸುರಮ್ಯವಾಗಿದೆ!
ತಕ್ಷಣಕ್ಕೆ ನನಗೂ ಹಾಗೇ ಅನ್ನಿಸಿತ್ತು. ಆದರೆ ಮಧುವರಸ – ಮಾದಲಾಂಬಿಕೆ ನೆನಪಾಗಿ ಬಿಡಿಸಿ ಬರೆದ ‘ಮಧು ಅರಸಿ ‘ ಸೂಕ್ತ.
ನವಿರು ಭಾವನೆಗಳನ್ನು ಹಸನಾಗಿ ಹೊಸೆದ ಪದ್ಯ.ಇಷ್ಟವಾಯಿತು.
ಚೆನ್ನಾಗಿದೆ
ಮೃದುವಾದ ಮಧುರವಾದ ಒಲವಿನ ಕವಿತೆ ನೆನಪಿಗೆ ತಂದಿತ್ತು ಕೆ ಎಸ್ ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆಯ ಕಂಪು
ಹಿರಿಯ ನಾಗರಿಕರಿಗೆ ನವೀರಾದ ರೋಮ್ಯಾಂಟಿಕ್ ಕವಿತೆ.
ಕವಿ ಮನವೇ ಹಾಗೆ!
ಸ್ವಗತದಲ್ಲಿ….
ಯಾರ ಅಂಕುಶವೇಕೆ
ಆಶಾವಾದದಲ್ಲಿ?
ಸುಂದರ
ಕವಿತೆಯ ಪ್ರಾರಂಭದ ಮೊದಲೆರಡು ಸಾಲುಗಳು ತುಂಬಾ ಚೆನ್ನಾಗಿದೆ.
ಇಲ್ಲಿ ಕವಿ, ಪ್ರಣಯವನ್ನು ನಿಸರ್ಗಕ್ಕೆ ಹೋಲಿಸಿ ಬರೆದಿರುವುದು ತುಂಬಾ ಸೊಗಸಾಗಿದೆ.