ಆಷಾಢದ ಒಂದು ದಿನ

ಒದ್ದೆ ಮನಸು,
ಹಸಿ, ಹಸಿ ಕನಸು,
ಮಂಜು ಮುಸುಕಿದ ಮುಂಜಾವು,
ತುಂಟ ಎಳೆ ಬಿಸಿಲು
ಕಲೆತು ನಕ್ಕರೆ ಬಾಳು;

ಹನಿ ಹನಿಸುವ ಸೊಗಸೆಲ್ಲ
ತುಂಬಲಿ ಬೊಗಸೆ ಬಟ್ಟಲು
ನಂಬಿಸಿದ ಬಾಳಿಗೆ
ತುಂಬಲಿ ಹಸಿರು.

ಹನಿ ಹನಿಸಿದ್ದು

ಆಕಾಶದಿಂದುದುರಿದ್ದು ಮಳೆಹನಿ,
ಕಣ್ಣಿಂದುರುಳಿದ್ದು ಕಂಬನಿ;
ಹನಿಗೆ ಹನಿ ಕೂಡಿದರೆ ಹಳ್ಳ,
ಕಂಬನಿಗೆ ಕಂಬನಿ ಬೆರೆತರೆ
ಸಾಂತ್ವನ ಸಾಗರ;

ಕಾರಣವಿಲ್ಲದೆ ಮಳೆ ಸುರಿಯುವುದಿಲ್ಲ
ವಿನಾಕಾರಣ ಕಂಬನಿಯೂ ಹರಿಯುವುದಿಲ್ಲ;
ಯಾರ ಸುಖ, ಯಾರ ದುಃಖ
ತೋಡಿಕೊಳ್ಳಲು ಸುರಿಯುವುದೀಗ ಮಳೆ
ಮುಗಿಲೆದೆಗೆ ಹೊರಳಿ!

ಕಂಬನಿಗುಂಟ ಹರಿಯುವುದು ದುಃಖ,
ಆ ಹನಿಯೊಡನೆ ಬೆರೆವ ಈ ಹನಿಯು
ದುಃಖದ ಭಾರವನಿಳಿಸುತ್ತ,
ನೋಡು ನೋಡುತ್ತ , ಹಳ್ಳವಾಗಿ
ಹರಿದು ಬಯಲಾಗುವದು.

-ಸೀಮಾ ಕುಲಕರ್ಣಿ, ಕೌಲಾಲಂಪುರ, ಮಲೇಶಿಯ

,

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಆಷಾಢದ ಒಂದು ದಿನ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai