ಪ್ರಯಾಣದ ಪ್ರಾರಂಭ
ಕನಸುಗಳ ಕೇಂದ್ರ
ವಿಮಾನ ನಿಲ್ದಾಣದ ನಾಡಿ
ಮಿಡಿಯುವುದು
ಪ್ರಯಾಣಿಕರ ಹೃದಯದಿ
ಕಥೆಗಳು ವಿಲೀನಗೊಳ್ಳುತ್ತದೆ
ನೆನಪುಗಳ ಮೀರುತ್ತದೆ
ರನ್ ವೇಗಳು ಚಾಚಿಕೊಂಡಿದೆ
ಕೊನೆ ಕಾಣದ ಹಾದಿಗಳಂತೆ
ಅಪರಿಚಿತರ ಭೇಟಿ
ಹಂಚಿಕೊಂಡ ಅನುಭವ
ದಣಿದ ಕಣ್ಣುಗಳು
ಕ್ಷಣಿಕ ಶುಭಾಶಯಗಳು
ಸೆಕ್ಯೂರಿಟಿ ಚೆಕಿಂಗ್
ಎಳೆದ ಸುಟ್ ಕೆಸ್
ಬೋರ್ಡಿಂಗ್ ಘೋಷಣೆ
ನಮ್ಮಯ ವಿಧಿಯ ಕರೆ….
ಜೀವನವು ಹಾಗೆ
ಅಪರಿಚಿತರ ಭೇಟಿ
ಕ್ಷಣಿಕ, ಮುಂದೆ ವಿಮಾನ
( ದೇಹ ) ಇಳಿದು ನಿರ್ಗಮಿಸುವೆವು
ದೂರ….. ದೂರ……
ಅಶ್ವಿತಾ ಶೆಟ್ಟಿ ಇನೋಳಿ







