ತಾಯಿತ

ಸಿದ್ದಾಪುರ ಒಂದು ಸಣ್ಣ ಹಳ್ಳಿ ಪಟ್ಟಣದಿಂದ ದೂರ ಇದ್ದರು ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಪ್ರಸಿದ್ಧಿಯಾಗಿದ್ದು ಗುಡ್ಡದ ಮೇಲಿನ ಸಿದ್ದರ ಸಮಾಧಿಯಿಂದ .ಸುಮಾರು ಎರಡು ನೂರು ವರ್ಷಗಳ ಇತಿಹಾಸ ಇರುವ ಈ ಸಮಾಧಿಯ ಜಾತ್ರೆ ಯುಗಾದಿಯಾದ ಐದನೇ ದಿನಕ್ಕೆ ನಡೆಯುತ್ತದೆ. ಸುತ್ತಲಿನ ಹಳ್ಳಿಯ ಎಲ್ಲಾ ಜನ ಬಂದು ತಾವು ಬೆಳೆದ ಕಾಳು ಕಡ್ಡಿಗಳನ್ನು ಗುಡ್ಡದ ಕೆಳಗಿನ ಸಿದ್ದರ ಮಠದಲ್ಲಿ ಸಲ್ಲಿಸಿ ಗುಡ್ಡದ ಮೇಲೆ ಹೋಗಿ ಸಮಾಧಿಗೆ ನಮಸ್ಕರಿಸಿ ಕರ್ಪೂರ ಕಾಯಿ ಹಣ್ಣುಗಳಲ್ಲಿ ತಮ್ಮ ಹರಿಕೆಯನ್ನು ತೀರಿಸಿಕೊಂಡು ಹೋಗುವುದು ಆ ಪ್ರಾಂತದ ಜನರ ಪದ್ಧತಿಯಾಗಿತ್ತು .

ಅವ್ವ ಅವ್ವಾ ಎಂದು ಎಂಟು ವರ್ಷದ ಶಂಕರ ಮನೆ ಒಳಗೆ ಬಂದು ತಾಯಿಯ ಪಕ್ಕದಲ್ಲಿ ನಿಂತುಕೊಂಡ .ಶಿವಮ್ಮ ” ಏನು ಬೇಕಾಗಿತ್ತು ಮಗನೇ “ಎಂದು ಪ್ರೀತಿಯಿಂದ ಕೇಳಿದಳು. ಏನು ಇಲ್ಲ ಗುಡ್ಡದ ಸಿದ್ದರ ಸಮಾಧಿ ಮಂಟಪಕ್ಕ ಬಣ್ಣ ಹಚ್ಚಾಕ ಹತ್ಯಾರವ್ವಾ “ಎಂದು ಕೇಳಿದೆ . ಶಿವಮ್ಮ “ಯುಗಾದಿ ಬಂತಲ್ಲ ಜಾತ್ರೆ ಮಾಡ್ತಾರೆ ಅದಕ್ಕ ಬಣ್ಣ ಹಚ್ಚಲಿಕ ಹತ್ಯಾರ” “ಅವ್ವ ಜಾತ್ರಾಗ ನನಗ ಬಣ್ಣದ ಬುಗುರಿ ಊದು ಪಿಪಿ ಕೊಡಿಸ್ತೀಯಾ”. ” ಆಗಲಿ ಬಾಳ ನಿಮ್ಮಪ್ಪ ಮಠದ ಹೊಲದಾಗ ಗಳೇ ಹೊಡೆದಾನ ಅದರ ಕೂಲಿ ಸ್ವಾಮಿಗಳು ಕೊಡುತ್ತಾರ ಜಾತ್ರಿ ಮಾಡೋಣ ” “ಅವ್ವ ನಮ್ಮನೆ ಸುಣ್ಮ ಯಾವಾಗ ಹಚ್ಚುತ್ತೀ” . ” ಜಾತ್ರೆ ಎರಡು ದಿನ ಇರುವಾಗ ಹಚ್ಚೋಣ ನಮ್ದೇನು ಒಂದು ಸಣ್ಣ ಖೋಲಿಯದ ಈಗ ಹೋಗಿ ನಿಮ್ಮಪ್ಪ ಎಲ್ಲಿ ಅದಾನ ನೋಡ್ಕೊಂಡು ಕರ್ಕೊಂಡ್ ಬಾ” ಎಂದು ಮಗನನ್ನು ಕಳಿಸಿದಳು ಶಿವಮ್ಮ .

ಹೊಲಗಳಲ್ಲಿ ಎಲ್ಲಾ ರಾಶಿ ಕೆಲಸ ಮುಗಿದು ಹಳ್ಳಿ ಗಂಡಸರಿಗೆ ಕೆಲಸ ಇಲ್ಲದೆ ಅರಳಿ ಕಟ್ಟಿ ಮ್ಯಾಗ ಜನ ಸೇರಿ ಗುಂಪಾಗಿ ಕೂತಿದ್ದರು. ಕೆಲವರು ಇಸ್ಪೇಟ್ ಆಡುತ್ತಾ ಕುಳಿತಿದ್ದರು. ಅಲ್ಲಿಗೆ ಬಂದ ಶಂಕರ ಅವರ ಅಪ್ಪನ ಹತ್ತಿರ ಹೋಗಿ ಅಪ್ಪ “ಅವ್ವ ಕರಿಲಿಕ್ ಹತ್ಯಾಳ ಬಾ” ಎಂದ . “ಏ ಬಸಪ್ಪ ನಿನ್ನ ಮಗ ಕರಿಲಿಕ್ಕ ಬಂದಾನ ನೋಡು ಎಂದು” ಹನುಮ ಎಚ್ಚರಿಸಿದ. ” ನಿಮ್ಮ ಅವ್ವಗ ಏನು ದಗದ ಇಲ್ಲ ಏನು ಬಾಳ , ಹೋಗು ಬರತೀನಿ ಅಂತ ಹೇಳು ಹೋಗು” ಅಂತ ಹೇಳುದ. ಅಪ್ಪ ಸಾಧ್ಯ ಅವ್ವ ಕರ್ಕೊಂಡು ಬಾ ಅಂತ ಹೇಳ್ಯಾಳ ಬಾ ಎಂದು ಜೋರಾಗಿ ಅಳುವುದಕ್ಕೆ ಪ್ರಾರಂಭಿಸಿದ . ಬಸಪ್ಪ ಕೈಯಲ್ಲಿದ್ದ ಕಾರ್ಡಗಳನ್ನು ಕೆಳಗ ಹಾಕಿ ಮಗನ ಜೊತೆ ಮನೆಗೆ ಹೊರಟ. ಮನೆಗೆ ಬಂದ ಬಸಪ್ಪ “ಏನು ಯಾಕ ಕರೆದಿ ಯಾರು ಸಾಯ್ತಿದ್ದರೇನು ಬೊಗೊಳ “ಎಂದು ಹೆಂಡತಿ ಮೇಲೆ ಜೋರು ಮಾಡಿದ. ಶಿವಮ್ಮ ಅಷ್ಟೇ ಮೆತ್ತಗ “ಜಾತ್ರಿ ಬಂದಾದ ಹಬ್ಬ ಮಾಡಬೇಕು ದೇವರಿಗೆ ಕಾಯಿ ಕರ್ಪೂರ ಕೊಡಬೇಕು ಮಠದ ಪಾರಂಪತ್ಯದಾರ ಕಡೆಯಿಂದ ಗಳೇ ಹೊಡೆದ ಕೂಲಿ ರೊಕ್ಕ ಇಸ್ಕೊಂಡು ಬಾ” ಎಂದು ಹೇಳಿದಳು. ” ಆ ಮಠದ ಪಾರು ಪತ್ಯದಾರರ ಬಹಳ ಸೊಕ್ಕಿಗೆ ಬಂದಾನ ” ನೀನು ಕುಡಿದು ,ಇಸ್ಪೀಟ್ ಆಡಿ ರೊಕ್ಕ ಹಾಳು ಮಾಡುತ್ತಿ ನಿನ್ನ ಹೆಂಡತಿ ಇಲ್ಲ ಮಗಳ ಕಳಿಸು ಅಂತ ಹೇಳ್ಯಾನ ನೀವು ಯಾರಾದರೂ ಹೋಗಿ ಕೂಲಿ ಇಸ್ಕೊಳ್ಳಿ, ನಾ ದುಡಿದು ಸಾಯವ ನೀವು ಕಾರಬಾರ ಮಾಡಿ ಹಣ ಇಸ್ಕೊಳೋರು, ಎಲ್ಲರೂ ಹಾಳಾಗಿ ಹೋಗ್ರಿ “ಎಂದು ಬಸಪ್ಪ ಇಸ್ಪೀಟ್ ಆಡಲು ಹೋದ.

ಗೌರಿ ವಯಸ್ಸಿಗೆ ಬಂದು ಹುಡುಗಿ ದೊಡ್ಡವಳಾಗಿ ಎರಡು ವರ್ಷಗಳಾಯಿತು ಮದುವೆ ಮಾಡ ಬೇಕಂದ್ರೆ ನಮ್ಮ ತಮ್ಮ ಪರಮೇಶಿ ಮುಂದಿನ ವರ್ಷ ಅಂತ ಹೇಳತಾನ. ಅವ ನನ್ನ ನೌಕರಿ ಕಾಯಂ ಆದ್ಮೇಲೆ ಮದುವೆ ಆಗ್ತೀನಿ ಅಂತನ , ವಯಸ್ಸಿನ ಹುಡುಗಿ ಮನೆಯಾಗ ಇಟ್ಟುಕೊಳ್ಳೋದು ಅಂದ್ರೆ ಬೆಂಕಿ ಉಡಿ ಒಳಗ ಕಟ್ಕೊಂಡಂಗ , ಕಾಲ ಬಹಳ ಕೆಟ್ಟು ಹೋಗ್ಯಾದ ಏನ್ ಮಾಡೋದು .ಈ ಸಾರಿ ಜಾತ್ರೆಗೆ ಬಂದ್ರೆ ತಿಳಿಹೇಳಿ ಮದುವೆ ಮಾಡಿಸಬೇಕು.ಎಂದು ಯೋಚಿಸುತ್ತಾ ಶಿವಮ್ಮ ಹೊರಗ ಹೋದಳು.

ಶಿವಮ್ಮ ಗುಡ್ಡದ ಕೆಳಗಿನ ಸಿದ್ದನ ಮಠಕ್ಕ ಬಂದಳು. ಮಠದ ಸ್ವಾಮಿಗಳು ಪೂಜೆಗೆ ಕುಳಿತಿದ್ದರು. ಪಾರುಪತ್ಯದಾರ ಹೊರಗೆ ಕೆಲಸ ಮಾಡುಸುತ್ತಿದ್ದ , ಶಿವಮ್ಮ ಅವರ ಹತ್ತಿರ ಹೋಗಿ ಸ್ವಾಮೇರ “ನನ್ನ ಹಿರಿಯ ಗಳೇ ಹೊಡದದ್ದು ಕೂಲಿ ಕೊಡಬೇಕಾಗಿತ್ತು, ಕೊಟ್ಟರೆ ಚೆಲುವಾಗ್ತದ , ಜಾತ್ರೆ ಸಮೀಪ ಬಂದದ ಮಕ್ಕಳ ಮರಿಗೆ ಬಟ್ಟೆ ಹಬ್ಬಕ್ಕ ದಿನಸು ತರಬೇಕಾಗಿತ್ತು. ಅವರಿಗೆ ಹೇಳಿದೆ ನೀವು ಹೆಂಡತಿನ ಕಳುಸು ಕೊಡುತ್ತೇವೆ ಎಂದು ಹೇಳಿದರಂತೆ ಅದಕ್ಕೆ ನಾ ಬಂದೇನ್ರೀ ಕೂಲಿ ಕೊಡ್ರಿ “ಎಂದು ವಿನಯದಿಂದ ಕೇಳಿದಳು .”ಪಾರುಪತ್ತ್ಯದಾರ ಸ್ವಾಮಿಗಳು ಪೂಜೆಗೆ ಕುಂತಾರ ಮಧ್ಯಾಹ್ನ ನಿನ್ನ ಮಗಳ ಕಳಿಸು ಸ್ವಾಮಿಗಳಿಗೆ ಹೇಳಿ ಕೊಡುಸುತ್ತೀನಿ” ಎಂದರು. “ಮಧ್ಯಾಹ್ನ ನಾನೇ ಬರ್ತೀನಿ “ಎಂದಳು ಶಿವಮ್ಮ . “ನೀ ಬ್ಯಾಡ ಆಕಿನ ಕಳಿಸು ದೇವರ ಬೆಳ್ಳಿ ಪೂಜಾ ಸಾಮಾನುಗಳು ತಿಕ್ಕ ಬೇಕಾಗ್ಯದ ಎಂದು ಒತ್ತಾಯದಿಂದ ಹೇಳಿದ..” ” ಆಯ್ತ್ರೀ ಯಪ್ಪಾ” ಎಂದು ಶಿವಮ್ಮ ಮನೆಗೆ ಬಂದಳು. ಶಿವಮ್ಮ ತಲಿ ಮ್ಯಾಲೆ ಕೈ ಹೊತ್ತುಕೊಂಡು ಕುಳಿತಳು. ಗೌರಿ “ಅವ್ವ ಹಿಂಗ್ಯಾಕ ಕೂತಿ ಬಿಸಿಲು ಬಹಳ ಅದ ತಡಿ ನೀರು ತರತ್ತೀನಿ ಎಂದು ನೀರು ಕೊಟ್ಟಳು” ಶಿವಮ್ಮ ನೀರು ಕುಡಿದು ಸುಧಾರಿಸಿಕೊಂಡು “ಗೌರಿ ಮಠದ ಪಾರುಪತ್ಯದಾರರು ರೊಕ್ಕ ಕೊಟ್ಟಿಲ್ಲ” ಎಂದು ಹೇಳಿದಳು. “ಯಾಕ ಕೊಡಲಿಲ್ಲ “ಎಂದು ಗೌರಿ ಕೇಳಿದಳು. ಮಧ್ಯಾಹ್ನ ನೀನು ಮಠಕ್ಕ ಹೋಗು ದೇವರು ಪೂಜಾದ ಬೆಳ್ಳಿ ಸಾಮಾನುಗಳು ತಿಕ್ಕಿ ರೊಕ್ಕ ಇಸ್ಕೊಂಡು ಬಾ” ಎಂದು ಶಿವಮ್ಮ ಹೇಳಿದಳು .”ಆಯ್ತು ಬಿಡು ನಾನೇ ಹೋಗಿ ರೊಕ್ಕ ತರ್ತೀನಿ ನೀನು ಮನೆಯಾಗಿನ ಕೆಲಸ ನೋಡ್ಕೋ “ಎಂದು ಗೌರಿ ಹೇಳಿದಳು.

ಮಧ್ಯಾಹ್ನ ಗೌರಿ ಮಠಕ ಹೋದಳು , ಹೊರಗಡೆ ಇದ್ದ ಪಾರುಪತ್ಯದಾರರು ನೀನು ಬಸ್ಸಪ್ಪನ ಮಗಳೇನು ಬೆಳಿಗ್ಗೆ ನಿಮ್ಮವ್ವ ಬಂದಿದ್ಲು ಮಧ್ಯಾಹ್ನ ನಿನ್ನ ಕಳಿಸಲು ಹೇಳಿದ್ದೆ, ಬಾ ಒಳಗ ದೇವರು ಮನೆಯಾಗ ಬೆಳ್ಳಿ ಪೂಜಾ ಸಮಾನ ಅದಾವ ಅವುಗಳನ್ನ ತಿಕ್ಕ ಬೇಕು ಎಂದು ಒಳಗ ಕರೆದುಕೊಂಡು ಹೋಗಿ ದೇವರ ಮನೆಯಲ್ಲಿ ಕೂಡಿಸಿದರು. ದೊಡ್ಡ ಸ್ವಾಮಿಗಳು ಒಳಗೆ ಬಂದು ಏನವ್ವ ನಿನ್ ಹೆಸರು ಎಂದು ಕೇಳಿದರು “ಗೌರಿ ಗುರುಗಳೆ” “ಹೆಸರಿಗೆ ತಕ್ಕಂಗ ಚಂದದಿ ಎಂದು ಹೇಳಿದರು .ಆ ಬೆಳ್ಳಿ ಚರಗಿ, ಗಂಗಾಳ, ಆರತಿ ಸಾಮಾನ್ಯ ತಗೊಂಡು ಒಂದು ಕಡೆ ಕುಂತು ವಿಭೂತಿ ಹುಂಡಿಯಿಂದ ತೆಕ್ಕಬೇಕು ನೋಡು “ಎಂದು ಹೇಳಿದರು. “ಆಯ್ತ್ರಿ ತಿಕ್ಕುತೀನಿ ” ಎಂದು ಗೌರಿ ಎಲ್ಲಾ ಸಾಮಾನುಗಳನ್ನು ಒಂದು ಕಡೆ ಇಟ್ಟುಕೊಂಡು ವಿಭೂತಿ ತಗೊಂಡು ತಿಕ್ಕಲು ಕುಳಿತಳು .”ಪಾರುಪತ್ಯದಾರ ಒಳಗ ಬಂದು ಬುದ್ಧಿ ನಾನು ಹೋಗತೀನಿ ನೀವು ಗುರುಮನಿ ಬಾಗಿಲಿ ಹಾಕೋರಿ , ಹೊರಗ ಕಾಳ ಅದಾನ ಎಂದು ಹೇಳಿ ಹೋದ”

ಸ್ವಾಮಿಗಳು ಹೊರಗೆ ಬಂದು ಸುತ್ತೆಲ್ಲ ನೋಡಿ ಹೊರಗಿದ್ದ ಕಾಳನಿಗೆ ಕರೆದು “ನಾವು ವಿಶ್ರಾಂತಿ ತೆಗೆದುಕೊಳ್ಳುತ್ತೀವಿ,ನೀನು ಇಲ್ಲಿಯೇ ಕಾಯುತ್ತಿರು ಯಾರಾದರೂ ಬಂದರೆ ಸ್ವಾಮಿಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಸಂಜೆ ಬಂದು ಭೇಟಿ ಆಗರಿ ಅಂತ ಹೇಳು ” ಎಂದು ಹೇಳಿ ಒಳಗಿನ ಗುರುಮನೆ ಬಾಗಿಲು ಹಾಕಿಕೊಂಡು ಒಳಗ ಬಂದರು. “ತಲೆ ತಗ್ಗಿಸಿಕೊಂಡು ಗೌರಿ ಬೆಳ್ಳಿ ಪಾತ್ರೆಗೆ ವಿಭೂತಿ ಹಚ್ಚುತ್ತಿದ್ದಳು ” ಒಳಗೆ ಬಂದ ಸ್ವಾಮಿಗಳು ಅವಳ ಹತ್ತಿರ ಬಂದು ನಿಂತು “ಹೀಗಲ್ಲ ಗೌರಿ ನಾ ತೋರಿಸ್ತೀನಿ ನೋಡು ಎಂದು ಅವಳ ಪಕ್ಕಕ್ಕೆ ಕುಳಿತು ವಿಭೂತಿ ತಮ್ಮ ಕೈಗೆ ಹಚ್ಚಿಕೊಂಡು ಒಂದು ಗ್ಲಾಸ್ ತೆಗೆದುಕೊಂಡು ಅದನ್ನು ತಿಕ್ಕತೊಡಗಿದರು, ಹಿಂಗ ತಿಕ್ಕಬೇಕು ಆಮೇಲೆ ಒಣ ಬಟ್ಟೆ ತೆಗೆದುಕೊಂಡು ಜೋರಾಗಿ ಉಜ್ಜಿ ವರಿಸಬೇಕು ಎಂದು ಹೇಳಿದರು.” “ಆಯ್ತು ಗುರುಗಳೇ ಮಾಡುವೆ “ಎಂದು ಗೌರಿ ಹೇಳಿದಳು .

ಸ್ವಾಮಿಗಳು ಅವಳ ಪಕ್ಕದಲ್ಲಿ ಕುಳಿತು ಅವಳನ್ನು ನಿಧಾನವಾಗಿ ನೋಡುತ್ತಾ ನಿಧಾನವಾಗಿ ಅವಳ ಬೆನ್ನ ಸವರುತ್ತಾ ಸೊಂಟದ ಸುತ್ತ ಕೈ ಆಡಿಸ ತೊಡಗಿದರು .ಗೌರಿಗೆ ಒಂದು ತರ ಮಜುಗರವಾಗಿ ಅವರತ್ತ ನೋಡಿದಳು. ಸ್ವಾಮಿಗಳು ನಕ್ಕು “ನಿನ್ನ ಕೆಲಸ ನೀನು ಮಾಡು ನನ್ನ ಕೆಲಸ ನಾನು ಮಾಡುತ್ತೇನೆ “ಎಂದು ಹೇಳುತ್ತಾ ಅವಳ ಹೊ‌ಟ್ಟೆ ಮತ್ತು ಎದೆಯ ಮೇಲೆ ಕೈ ಆಡಿಸ ತೊಡಗಿದರು .ಗೌರಿಗೆ ಗಂಡಸಿನ ಬಿಸಿ ಸ್ಪರ್ಶ ಏನೊ ಒಂದು ರೀತಿಯ ಸುಖ ಕೊಡತೊಡಗಿತು ಅವಳು ಸುಮ್ಮನೆ ಕುಳಿತು ಕೆಲಸ ಮಾಡ ತೊಡಗಿದಳು ಸುಮಾರು ಒಂದು ಗಂಟೆ ಕಾಲ ಗೌರಿ ಬೆಳ್ಳಿ ಪಾತ್ರಗಳನ್ನು ತಿಕ್ಕುತ್ತಿದ್ದಳು ಸ್ವಾಮಿಗಳು ಅವಳ ಮೈ ಸವರುತ್ತಿದ್ದರು ಗೌರಿಗೆ ಏನೋ ಒಂದು ತರಹ ಉದ್ರೇಗವಾಗಿ ಸ್ವಾಮಿಗಳನ್ನು ನೋಡಿದಳು. ಅವಳ ಕಣ್ಣಲ್ಲಿ ಬೇಡಿಕೆ ಇದ್ದಿದ್ದು ಅರಿತು ಸ್ವಾಮಿ ಮೆಲ್ಲನೆ ಅವಳನ್ನು ಹಾಸಿಗೆ ಕರೆದುಕೊಂಡು ಹೋಗಿ ಮುತ್ತಿನ ಸುರಿಮಳೆ ಸುರಿಸಿದರು. ಕನ್ಯಾತ್ವವನ್ನು ಸೂರೆಗೊಂಡರು, ಗೌರಿಗೆ ಏನೋ ಒಂದು ತರ ಸುಖವಾಗಿ ಬೇರೆ ಲೋಕದಲ್ಲಿ ತೇಲುವಂತೆ ಭಾಸವಾಗತೊಡಗಿತು. ಸ್ವಾಮಿಯ ಮದ ಇಳಿದ ಮೇಲೆ ಮಂಚದಿಂದ ಕೆಳಗೆ ಇಳಿದು ಮತ್ತೆ ಗೌರಿಯನ್ನು ಅಪ್ಪಿದರು ಪಕ್ಕದಲ್ಲಿ ಕೂಡಿಸಿಕೊಂಡು ಅವಳ ಕೈ ನೋಡುತ್ತಾ ನಿನಗೆ ಏನೋ ಗಂಡಾಂತರ ಕಾದಿದೆ ಶನಿ ಕಾಟ ಇದೆ ಗೌರಿ ನೀನು ನಾಳೆ ಬಾ ನಾನು ನಿನಗೆ ಒಂದು ತಾಯಿತ ಮಾಡಿಕೊಡುತ್ತೇನೆ ಅದನ್ನು ನಿನ್ನ ರಟ್ಟಿಗೆ ಕಟ್ಟಿಕೊಳ್ಳ ಬೇಕು ಎಂದು ಹೇಳಿದರು .ಅವರ ಮಾತನ್ನು ನಂಬಿ ಆಗಲಿ ನಾಳೆ ಬರುತ್ತೇನೆ ಹೇಳಿದಳು. ಸ್ವಾಮಿಗಳು ಅವಳ ಕೈಯಲ್ಲಿ ಹಣ ಇಟ್ಟು ಇದು ನಿಮ್ಮಪ್ಪ ಕೆಲಸ ಮಾಡಿದ ಕೂಲಿ ನಿಮ್ಮವ್ವನಿಗೆ ಕೊಡು ಎಂದು ಹೇಳಿದರು , ಭಕ್ತರು ತಂದುಕೊಟ್ಟ ಹಣ್ಣುಗಳನ್ನು ಅವಳಿಗೆ ಕೊಡುತ್ತ ನಿಮ್ಮ ತಮ್ಮಂದಿರಿಗೆ ಕೊಡು ಎಂದು ಹೇಳಿದರು. ಆಯ್ತು ಗುರುಗಳೇ, ನಾನು ಹೋಗುತ್ತೇನೆ ಎಂದು ಹೇಳಿದಳು. ನಾಳೆ ಇವತ್ತು ಬಂದಂತೆ ಮಧ್ಯಾಹ್ನ ಬಾ ಮುಂಜಾನೆ ಪೂಜೆ ಸಮಯದಲ್ಲಿ ತಾಯಿತ ಮಾಡಿರುತ್ತೇನೆ ಎಂದು ಹೇಳಿದರು. ಗೌರಿ “ಆಗಲಿ ಬರುತ್ತೇನೆ “ಎಂದು ಹೇಳಿ ಮನೆಗೆ ಹೊರಟಳು.

ದೂರದಲ್ಲಿ ಅಕ್ಕ ಬರುವುದನ್ನು ನೋಡಿ ತಮ್ಮಂದಿರು ಚಪ್ಪಾಳೆ ತಟ್ಟುತ್ತಾ ಅಕ್ಕ ಬಂದಳು ಎಂದು ಕುಣಿಯತೊಡಗಿದರು . ಗೌರಿ ಹಣ್ಣಿನ ಚೀಲವನ್ನು ತಮ್ಮಂದಿರ ಕೈಗೆ ಕೊಟ್ಟಳು , ರೊಕ್ಕವನ್ನು ಅವ್ವನ ಕೈಗೆ ಕೊಟ್ಟಳು ,ರೊಕ್ಕ ತೆಗೆದುಕೊಂಡ ಶಿವಮ್ಮ” ಕೆಲಸ ಬಹಳ ಆಯ್ತೇನು ದಣಿವಾಯುತೇನು “ಎಂದು ಕೇಳಿದಳು .”ಕೆಲಸ ಏನು ಬಹಳ ಇರಲಿಲ್ಲ ತಿಕ್ಕಿ ತಿಕ್ಕಿ ಕೈ ನೋಯಿತಾವ ” ಎಂದಳು ಗೌರಿ . “ಬಿಸಿ ಬಿಸಿ ನೀರು ತಗೊಂಡು ಕೈ ಕಾಲು ಮುಖ ತೊಳೆದುಕೋ “ಎಂದು ಶಿವಮ್ಮ ಹೇಳದಳು. “ಬಹಳ ಹೊತ್ತು ಕುಂತು ಸೊಂಟ ನೋಯಿಲಿಕ್ಕಹತ್ಯಾದ ಜಳಕ ಮಾಡ್ತೀನಿ ” ಎಂದು ಗೌರಿ ಬಚ್ಚಲಕ್ಕೆ ಹೋದಳು. ಜಳಕ ಮಾಡಿ ವಿಭೂತಿ ಹಚ್ಚಿಕೊಂಡು ದೇವರಿಗೆ ದೀಪ ಹಚ್ಚಿ ಕೈ ಮುಗಿದು ಹೊರಗೆ ಬಂದು ಕುಳಿತಳು. ಆಟ ಆಡಲು ಹೋಗಿದ್ದ ಮಕ್ಕಳು ವಾಪಾಸ ಬಂದರು.”ಅವ್ವ ಇವತ್ತು ಸ್ವಾಮಿಗಳು ನನ್ನ ಕೈ ನೋಡಿ ನಿನಗೆ ಅನಿಷ್ಟ ಶನಿಯ ಕಾಟ ಅದ ನಾಳೆ ಬಾ ಮಂತ್ರಿಸಿ ತಾಯಿತ ಕೊಡುತ್ತೇನೆ ಎಡಗೈ ರೆಟ್ಟಿಗೆ ಕಟ್ಟಿಕೊ ಅಂತ ಹೇಳಿದರು “ಎಂದು ಗೌರಿ ಹೇಳಿದಳು. .”ಹೌದೇನು ಅದಕ್ಕ ನಿಮ್ಮ ಮಾವ ಮದುವೆಯಾಗು ಅಂದ್ರೆ ಈಗ ಬ್ಯಾಡ ಇನ್ನೂ ಸ್ವಲ್ಪ ದಿನ ಹೋಗ್ಲಿ ಅಂತ ಹೇಳ್ತಾನ ನೋಡು ನಾಳೆ ಹೋಗಿ ತಾಯಿತ ಮಾಡಿಸಿಕೊಂಡು ಬಾ ಶನಿ ಕಾಟ ಲಗು ಹೋಗಲಿ “ಎಂದು ಶಿವಮ್ಮ ಹೇಳಿದಳು.

ಮರುದಿನ ನಾನು ಮಠಕ್ಕೆ ಬಂದಾಗ ಹೊರಗಡೆ ಕಾಳ ಒಬ್ಬನೇ ಇದ್ದ , ನನ್ನ ನೋಡಿ ನಕ್ಕು ತಾಯಿತ ಕಟ್ಟಿಸಿಕೊಳ್ಳಲು ಬಂದಿ ಏನವ್ವ ಒಳಗ ಹೋಗು ಎಂದು ನಕ್ಕು ಬಾಗಿಲು ತೆಗೆದ. ನಾನು ಒಳಗೆ ಹೋದಾಗ ಮಂಚದದ ಮೇಲೆ ಸ್ವಾಮಿಗಳು ಕುಳಿತಿದ್ದರು. ನಾನು ಒಳಗೆ ಹೋಗಿ ಕಾಲು ಮುಗಿದೆ. ನನ್ನ ರೆಟ್ಟಿ ಹಿಡಿದು ಮೇಲೆ ಎತ್ತಿ ಮಂಚದ ಮೇಲೆ ಕೂಡಿಸಿಕೊಂಡು “ನಿಮ್ಮವ್ವಗ ಹೇಳಿ ಬಂದಿಯಾ” ಎಂದು ಕೇಳಿದರು.”ಏನು ಅಂದಳು ನಿಮ್ಮವ್ವ” ಎಂದು ಕೇಳಿದರು.” ಆಕಿ ಸ್ವಾಮಿಗಳು ಹೇಳಿದಾಂಗ ಕೇಳು, ತಾಯಿತ ಕಟ್ಟಿಸಿಕೋ, ನಿನಗ ಹತ್ತಿದ ಅನಿಷ್ಟ ಶನಿ ದೂರಾಗಲಿ ಎಂದು ಹೇಳಿದಳು” ಅದಕ್ಕೆ ಸ್ವಾಮಿಗಳು ನಕ್ಕು ನನಗೆ ಒಂದು ಗುಳಿಗಿ ನುಂಗಿಸಿದರು, ಹತ್ತಿರಕ್ಕೆ ಜಕ್ಕೊಂಡು ಬೆನ್ನು ಸೊಂಟದ ಸುತ್ತ ಕೈ ಆಡಿಸುತ್ತಾ ಬ್ಲಾಜದ ಗುಂಡಿ ಬಿಚ್ಚಿ ಕೈಆಡಿಸ ತೊಡಗಿದರು. ಗಲ್ಲಕ್ಕೆ ಮುತ್ತು ಕೊಡುತ್ತಾ ನನ್ನನ್ನು ಉದ್ರೇಕ ಗೊಳಸಿದರು. ನಂತರ ಮಂಚದ ಮೇಲೆ ಮಲಗಿಸಿ ಸುಖ ಪಡಿಸಲು ಪ್ರಾರಿಭಿಸಿದರು. ನನಗೂ ಬೇಕು ಅನಿಸುತ್ತಿತ್ತು ಸುಮ್ಮನೆ ಅವರು ಹೇಳಿದಂತೆ ಕೇಳ ತೊಡಗಿದೆ. ಸ್ವಾಮಿಗಳಿಗೆ ಸಾಕಾದ ಮೇಲೆ ಮಂಚದಿಂದ ಇಳಿದು ದೇವರ ಖೋಲಿಗೆ ಹೋಗಿ ತಾಯಿತ ತಂದು ನನ್ನ ಎಡರೆಟ್ಟಿಗೆ ಕಟ್ಟಿದರು. ಕೈಯಲ್ಲಿ ರೊಕ್ಕ ಕೊಟ್ಟು ನಿಮ್ಮವ್ವಗ ಜಾತ್ರೆಸಲುವಾಗಿ ಕೊಟ್ಟೀನಿ ಅಂತ ಹೇಳು , ನಿಮ್ಮ ಅಪ್ಪ ಕೆಲಸ ಮಾಡಿದ್ದು ಬಾಕಿ ಕೊಡುವುದು ಇತ್ತು ಎಂದು ಹೇಳಿದರು, ಒಂದು ಡಬ್ಬಿ ಉಂಡಿ ಕೊಟ್ಟರು.ಇಲ್ಲಿ ನಡೆದ ವಿಚಾರ ಯಾರ ಮುಂದೆ ಹೇಳ ಬೇಡ ಹೇಳಿದರೆ ತಾಯಿತ ಕೆಲಸ ಮಾಡೋದಿಲ್ಲ , ಒಂಬತ್ತು ದಿನಕ್ಕೆ ಬಂದು ಹೊಸ ತಾಯಿತ ಕಟ್ಟಿಸಿಕೊಳ್ಳ ಬೇಕು ಮರಿಬ್ಯಾಡ ಎಂದು ಎಚ್ಚರಿಕೆ ಕೊಟ್ಟರು. ನಿನ್ನ ಮದುವೆ ಆಗುವವರೆಗೆ ಹೀಗಾ ತಾಯಿತ ಕಟ್ಟಿಸಿ ಕೊಳ್ಳಬೇಕು ನಿನ್ನ ಅನಿಷ್ಟ ಶನಿ ಹೋಗುತ್ತದೆ ನಿನ್ನ ಮಾವ ಜಲ್ಲದಿ ಬಂದು ನಿನ್ನ ಮದುವೆ ಆಗುತ್ತಾನೆಂದು ಹೇಳಿದರು. ಆಯಿತೆಂದು ಹೇಳಿ ಮನೆಗೆ ಬಂದೆ.

ಮನೆಗೆ ಬಂದು ಅವ್ವನಿಗೆ ರೊಕ್ಕ , ಉಂಡಿ ಕೊಟ್ಟೆ, ಸ್ವಾಮಿಗಳು ಒಂಬತ್ತು ದಿನಕ್ಕೊಂದು ತಾಯಿತ ಕಟ್ಟಿಸಿಕೋ, ನಿಮ್ಮ ಮಾವ ಲಗೂ ಬಂದು ಮದುವೆ ಆಗುತ್ತನೆಂದು ಹೇಳಿದರೆಂದು ಅವ್ವನಿಗೆ ಹೇಳಿದೆ. ಆಯಿತು ಹೋಗು ತಾಯಿತ ಕಟ್ಟಿಸಿಕೋ ನಿನಗ ಹತ್ತಿದ ಅನಿಷ್ಟ ಶನಿ ದೂರಾಗಲಿ ಎಂದಳು.ರೊಕ್ಕ ಎಲ್ಲಿದು ಎಂದು ಅವ್ವ ಕೇಳಿದಳು, ಸ್ವಾಮಿಗಳು ಅಪ್ಪನಿಗೆ ಕೊಡಬೇಕಾದ ಬಾಕಿ ಹಣ ಕೊಟ್ಟಾರ ಜಾತ್ರೆ ಮಾಡಲು ಎಂದು ಹೇಳಿದೆ .

ಜಾತ್ರೆ ದಿನ ಹತ್ತಿರ ವಾಗುತ್ತಿದ್ದಂತೆ ಮಾಮ ಬರುತ್ತಾನೆಂದು ದಾರಿ ಕಾಯುತ್ತಿದ್ದೆ. ಹೊರಗಿನಿಂದ ಮನೆಗೆ ಬಂದ ಅವ್ವ”ನಿಮ್ಮ ಮಾಮ ಈ ಸಾರಿ ಜಾತ್ರೆಗೆ ಬರೋದಿಲ್ಲವಂತೆ ಅವನಿಗೆ ಕೆಲಸ ಬಹಳ ಇದೆ ಎಂದು ಇನ್ನು ಮೂರು ನಾಲ್ಕು ತಿಂಗಳಿಗೆ ಬಿಟ್ಟು ಬರುತ್ತೇನೆ ಎಂದು ಕಡೆಮನೆ ಭೀಮ್ಶಾನ್ ಕೂಡ ಹೇಳಿ ಕಳಿಶ್ಯಾನ ನೋಡು ಎಂದಳು ಅವ್ವ , ನಾನು ಏನು ಉತ್ತರ ಕೊಡಲಿಲ್ಲ ಮರುದಿನ ಎಲ್ಲರೂ ಸೇರಿ ಸಿದ್ದನ ಗುಡ್ಡದ ಸಮಾಧಿಗೆ ಹೋಗಿ ಕಾಯಿ ಕರ್ಪೂರ ಮಾಡಿಸಿಕೊಂಡು ಕೆಳಗೆ ಬಂದು ಜಾತ್ರೆಗೆ ಬಂದ ಅಂಗಡಿಗಳಲ್ಲಿ ತಮ್ಮಂದಿರಿಗೆ ಹಾಗೂ ನನಗೆ ಬೇಕಾದ ಎಲ್ಲಾ ಸಾಮಾನುಗಳನ್ನು ಕೊಡಿಸಿದಳು ಅವ್ವ . ಎಲ್ಲರೂ ಸಂತೋಷವಾಗಿ ಅಂಗಡಿಯ ಸಾಲಿನಲ್ಲಿ ಅಡ್ಡಾಡಿದಿವಿ, ಅಪ್ಪ ಅವ್ವನ ಕಡೆಯಿಂದ ರೊಕ್ಕ ಇಸ್ಕೊಂಡು ಹೆಂಡ ಕುಡಿದು ತನ್ನ ಗೆಳೆಯರ ಜೊತೆ ಜೋಲಿ ಹೊಡೆಯುತ್ತಾ ಜಾತ್ರೆಯಲ್ಲಿ ತಿರುಗಾಡುತ್ತಿದ್ದ ಹೆಂಡತಿ ಮಕ್ಕಳ ಚಿಂತೆ ಇಲ್ಲದೆ ಒಬ್ಬನೇ ಓಡಾಡುತ್ತಿದ್ದ .

ಒಂಬತ್ತನೆ ದಿನಕ್ಕೆ ಅವ್ವ ತಾಯಿತ ಕಟ್ಟಿಸಿಕೊಳ್ಳಲು ಮಠಕ್ಕೆ ಹೋಗೆಂದು ನೆನಪು ಮಾಡಿದಳು. ನಾನು ಮಧ್ಯಾಹ್ಹ ಮಠಕ್ಕೆ ಹೋದಾಗ ಯಾರು ಇರಲಿಲ್ಲ.ಸ್ವಾಮಿಗಳು ಹೊರಗಡೆ ಇದ್ದರು ನನ್ನ ನೋಡಿ ನಕ್ಕು ಒಳಗೆ ಕರೆದುಕೊಂಡು ಹೋದರು. ಕಳೆದ ವಾರದಂತೆ ಒಂದು ಗುಳಿಗಿ ನುಂಗಿಸಿ ಮಂಚದ ಮೇಲೆ ಮಲಗಿಸಿ ಸುಖ ಪಟ್ಟರು.ಒಂದು ಗಂಟೆ ಕಳೆಧ ಮೇಲೆ ಹೊಸ ತಾಯಿತ ಕಟ್ಟಿ ಹಣ್ಣುಗಳನ್ನು ಕೊಟ್ಟು ಕಳಿಸಿದರು. ಇದು ಹೀಗೇ ಆರು ತಿಂಗಳು ನಡೆಯಿತು.

ನವರಾತ್ರಿ ಹಬ್ಬಕ್ಕೆ ಮಾಮ ರಜೆ ತೆಗೆದುಕೊಂಡು ಊರಿಗೆ ಬಂದ ನಮ್ಮೆಲ್ಲರಿಗೆ ಬಹಳ ಸಂತೋಷವಾಯಿತು , ಅವ್ವ ಬಹಳ ಸಡಗರದಿಂದ ಹಬ್ಬಕ್ಕೆ ಹೋಳಿಗೆ ಹುಗ್ಗಿ ಮಾಡಿ ಹಾಲು ತುಪ್ಪ ಹಾಕಿ ತಮ್ಮನಿಗೆ ಬಹಳ ಕಾಳಜಿ ಮಾಡಿ ಊಟ ಮಾಡಿಸಿದಳು. ಎರಡು ದಿನ ಎಲ್ಲರೂ ಸಂತೋಷದಿಂದ ಬನ್ನಿ ಬಂಗಾರ ಕೊಟ್ಟು ತೆಗೆದುಕೊಂಡು ಸಡಗರದಲ್ಲಿ ಹಬ್ಬ ಆಚರಿಸಿದೆವು. ಮೂರನೇ ದಿನ ಮಾಮನಿಗೆ ಅಮ್ಮ ಮದುವೆಯ ಸುದ್ದಿ ಕೇಳಿದಳು. ಮಾಮ ಈ ಸಾರಿ ಯುಗಾದಿಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ .ಅವ್ವ ಹಿಗ್ಗಿನಿಂದ ನಾನು ಪ್ರತಿವಾರ ಮಠಕ್ಕೆ ಹೋಗಿ ಸ್ವಾಮಿ ಗಳಿಂದ ತಾಯಿತ ಕಟ್ಟಿಸಿಕೊಳ್ಳುವುದನ್ನು ಹೇಳಿದರು ಅದರಿಂದ ಅವಳಿಗೆ ಕಾಡುತ್ತಿದ್ದ ಶನಿ ದೂರಾಗಿ ನೀನು ಮದುವೆಯಾಗಲು ಒಪ್ಪಿದೆ ಎಂದು ಹೇಳಿದಳು. ಮಾಮ ಅದೆಲ್ಲ ಮೂಢನಂಬಿಕೆ ನನಗೆ ರಜೆ ಇರಲಿಲ್ಲ ಬರಲಿಲ್ಲ ಅಷ್ಟೇ ನಾನು ನೌಕರಿ ಕಾಯಂ ಆಗಲಿ ಎಂದು ಕಾಯುತ್ತಿದ್ದೆ ಈಗ ಮದುವೆಯಾಗುತ್ತೇನೆ ಎಂದು ಹೇಳಿ ಮಾಮ ಗೆಳೆಯನನ್ನು ಭೇಟಿಯಾಗಲು ಹೊರಗಡೆ ಹೋದ .

ಸಂಜೆ ಗುಡ್ಡದ ಸಮಾಧಿಗೆ ಹೋಗೋಣ ಬಾ ಎಂದು ನನ್ನ ಕರೆದ ಮಾಮ, ಇಬ್ಬರು ಜೊತೆಯಾಗಿ ಗುಡ್ಡವನ್ನು ಹತ್ತಲು ಪ್ರಾರಂಭಿಸಿದೆವು. ಗುಡ್ಡದ ಸಿದ್ಧನ ಸಮಾಧಿ ಸುಮಾರು ಎರಡು ನೂರು ವರ್ಷಗಳ ಹಳೆಯದೊಂದು ಜನ ಹೇಳುತ್ತಾರೆ ಒಬ್ಬ ತಪಸ್ವಿಯ ಜೀವಂತ ಸಮಾಧಿ ಎಂದು ಹಾಡುತ್ತಾರೆ . ಸಮಾಧಿಗೆ ಬಹಳ ಶಕ್ತಿ ಇದೆ ಎಂದು ಸಮಾಧಿ ಮುಟ್ಟಿ ಪ್ರಮಾಣ ಮಾಡಿರೆ ನಿಜ ಸಂಗತಿ ಹೇಳಬೇಕು ಸುಳ್ಳು ಹೇಳಿದರೆ ಸಾವು ನಿಶ್ಚಿತವೆಂದು ಹೇಳುತ್ತಾರೆ ಮತ್ತು ಭಕ್ತಿಯಿಂದ ಬೇಡಿಕೊಂಡು ಹರಿಕೆ ಹೊತ್ತರೆ ಬೇಡಿಕೆಗಳು ಈಡೇರುತ್ತವೆ ಎಂದು ನಂಬಿಕೆ ಇದೆ.

ನಾನು ಖುಷಿಯಾಗಿ ಮಾಮನ ಸಂಗಡ ಗುಡ್ಡ ಹತ್ತಿದೆ. ಆದರೆ ಮಾಮನ ಮುಖ ಯಾಕೋ ಬಾಡಿತ್ತು ಮಧ್ಯಾಹ್ನ ಗೆಳೆಯನ ಮನೆಗೆ ಹೋಗಿ ಬಂದಾಗಿನಿಂದ ಒಂದು ತರಹ ಇದ್ದ ಸರಿಯಾಗಿ ಊಟ ಮಾಡಿಲ್ಲ . ಗುಡ್ಡ ಹತ್ತಿ ಮೇಲೆ ಬಂದ ಇಬ್ಬರಿಗೂ ದಣಿವಾಗಿತ್ತು, ಸಮಾಧಿ ಹತ್ತಿರ ಕುಳಿತು ಸ್ವಲ್ಪ ಸಮಯ ಕಳೆದವು ನಂತರ ಮಾಮ ಗೌರಿ ನಾನು ಒಂದು ಪ್ರಶ್ನೆ ಕೇಳುತ್ತೇನೆ ನೀನು ಸಿದ್ದನ ಸಮಾಧಿ ಮುಟ್ಟಿ ಖರೆ ಹೇಳಬೇಕು ಅಂದನು. ಆಯ್ತು ಮಾಮ ಕೇಳು ನಾನು ಸಮಾಧಿ ಮುಟ್ಟಿ ಖರೆ ಹೇಳುತ್ತೇನೆ ಎಂದು ಹೇಳಿದೆ .ಮಾಮ “ನೀನು ಮಠಕ್ಕೆ ಯಾಕೆ ಹೋದೆ ,ಯಾವಾಗ ಹೋದೆ ಅಲ್ಲಿ ಏನಾಯ್ತು ಎಲ್ಲಾ ಖರೆ ಹೇಳು “ಎಂದು ಕೇಳಿದ. ನಾನು ಸಮಾಧಿ ಮೇಲೆ ಕೈ ಇಟ್ಟು ಮಠಕ್ಕೆ ಹೋದ ಮೊದಲನೆಯ ದಿನದಿಂದ ಹಿಡಿದು ಇಂದಿನವರೆಗೆ ನಡೆದ ಎಲ್ಲ ವಿಷಯವನ್ನು ಮಾಮನಿಗೆ ಹೇಳಿದೆ ಇದನ್ನು ಅಕ್ಕನಿಗೆ ನೀನು ಹೇಳಿಯಾ ಎಂದು ಕೇಳಿದ. “ನಾನು ಯಾರಿಗೂ ಹೇಳಿಲ್ಲ “ಎಂದೆ. “ಯಾಕೆ ಹೇಳಲಿಲ್ಲ “ಎಂದು ಕೇಳದ. “ಸ್ವಾಮಿಗಳು ಯಾರಿಗೂ ಹೇಳಬೇಡ ತಾಯಿತ ಶಕ್ತಿ ಕಡಿಮೆ ಆಗುತ್ತದೆ “ಎಂದು ಹೇಳಿದ್ದರು .ಮಾಮಾ ಮಾತಾಡೋದೆ ಮನೆಗೆ ಹೋಗೋಣ ಎಂದು ಹೇಳಿದ. ಕೆಳಗೆ ಇಳಿದು ಮನೆಗೆ ಬಂದೆವು, ಮರು ದಿನ ಮನೆಯಲ್ಲಿ ಅಪ್ಪ ಮತ್ತು ಹುಡುಗರು ಇಲ್ಲದ ಸಮಯದಲ್ಲಿ ಮಾಮ ಅವ್ವನಿಗೆ ಮಠದಲ್ಲಿ ನಡೆದ ಎಲ್ಲಾ ವಿಷಯ ಹೇಳಿದ . ಇದನ್ನು ಕೇಳಿ ಅವ್ವ ಹಣೆ ಹಣೆ ಬಡದುಕೊಂಡು ಅಳಲು ಪ್ರಾರಂಭಿಸಿದಳು.”ಮಾಮ ಅಳಬೇಡ ಆಜು ಬಾಜು ಜನ ಬರುತ್ತಾರೆ ಸುಮ್ಮನೆ ಇರು” ಎಂದು ಹೇಳಿದ .

“ಈಗ ಏನು ಮಾಡುತ್ತೀ ತಮ್ಮ ಇವಳ ಜೀವ ನಾಯಿ ಮುಟ್ಟಿದ ಮಡಿಕೆ ಆಯಿತಲ್ಲ ಮುಂದೇನು ಮಾಡುವುದು” ಎಂದು ಕೇಳಿದಳು . ಮಾಮ ಸ್ವಾಮಿಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ ಎಂದು ಹೇಳಿದ . ಅದಕ್ಕೆ ಅವ್ವ ಬೇಡ ಎಂದು ಹೇಳಿದರು ಇದರಿಂದ ನಮ್ಮ ಮರ್ಯಾದೆ ಹೋಗುತ್ತದೆ ನಾವು ಬಡವರು ನಮ್ಮ ಮಾತು ಯಾರು ನಂಬುವುದಿಲ್ಲ ಸುಮ್ಮನೆ ಇರುವುದೇ ಲೇಸು ಎಂದು ಮಾಮನಿಗೆ ತಿಳಿ ಹೇಳಿದಳು. ಏನು ಮಾತಾಡದೆ ಮಾಮ ಮೌನವಾಗಿ ಕುಳಿತ. “ಅವಳನ್ನು ಮದುವೆಯಾಗ ಬೇಡ ಅವಳು ಹೀಗೆ ಬಸವಿಯಾಗಿ ಬಾಳಲಿ , ಇಲ್ಲ ಕೆರಿ ಭಾವಿ ನೋಡಿಕೊಳ್ಳಲಿ ” ಎಂದಳು . ಅದಕ್ಕೆ ಮಾಮ ” ಅವಳದೇನು ತಪ್ಪಿಲ್ಲ ಎಲ್ಲಾ ನಿಮ್ಮ ಮೂಢನಂಬಿಕೆ ಫಲ ನಾನು ಊರಿಗೆ ಹೋಗಿ ಒಂದು ಮನೆ ಬಾಡಿಗೆ ಹಿಡಿಯುತ್ತೇನೆ ನೀವೆಲ್ಲ ಅಲ್ಲಿಗೆ ಬಂದುಬಿಡಿ ನಾನು ಗೌರಿಯನ್ನು ಬೆಂಗಳೂರಿನಲ್ಲಿ ರಜಿಸ್ಟರ್ ಮದುವೆ ಆಗುತ್ತೇನೆ” ಎಂದು ಹೇಳಿದ. “ನೀವಿಬ್ಬರೂ ಆಶೀರ್ವಾದ ಮಾಡಿದರೆ ಸಾಕು” ಎಂದ .ನಾನು ಅಳುತ್ತ ಬೇಡ ಮಾಮ ನೀನು ಬೇರೆಯವಳನ್ನು ಮದುವೆಯಾಗು ನಾನು ಕೆರೆ ಭಾವಿ ನೋಡಿಕೊಳ್ಳುತ್ತೇನೆ ಎಂದೆ ಅದಕ್ಕೆ ಮಾಮ “ತಿಳಿಯದೆ ಮಾಡಿದ ನಿನ್ನ ತಪ್ಪನ್ನು ನಾನು ಕ್ಷಮಿಸಿದ್ದೇನೆ ಹಿಂದಿನದೆಲ್ಲ ಮರೆತು ಮುಂದೆ ಸುಖವಾಗಿ ಇರೋಣ ಎಲ್ಲರೂ ಒಂದುಕಡೆ ಇರೋಣ “ಎಂದು ಮಾಮ ಹೇಳಿದ.

ಅವ್ವ ” ತಮ್ಮ ನೀನು ಊರಿಗೆ ಹೋಗಿ ಆಕಿಗೆ ಒಂದು ಸೀರಿ ನಿನಗ ಬಟ್ಟೆ ತೆಗೆದುಕೊಂಡು ಬಾ, ನಾನು ಇಲ್ಲಿಯೇ ಶಂಕರಲಿಂಗ ಗುಡಿಯಾಗ ನಾಲ್ಕ ಮಂದಿ ಮುಂದ ಆಕಿದು ಮದುವೆ ಮಾಡಿ ನಿನ್ನ ಜೊತೆ ಕಳಸತ್ತೀನಿ, ನಾವು ಇಲ್ಲಿಯೇ ಇರುತ್ತೀವಿ,ಬೆಂಗಳೂರು ತುಟ್ಟಿ ಊರಾಗ ನಿನಗ ನಾವು ಒಜ್ಜ ಆಗೋದು ಬ್ಯಾಡ “ಎಂದು ಹೇಳಿದಳು.

ಮಾಮ ” ಹಂಗಂತೀಯಾ ಅಕ್ಕ ನಿನ್ನ ಇಷ್ಟ ,ನಾಳೆ ಹೋಗಿ ಮುಂದಿನ ವಾರ ಬರತ್ತೀನಿ ನೀ ಎಲ್ಲಾ ವ್ಯವಸ್ಥೆ ಮಾಡಿಕೋ ಅಂದು ಅವ್ವನ ಕೈಯಾಗ ರೊಕ್ಕ ಕೊಟ್ಟ. ಮತ್ತೆ ಗೌರಿಯನ್ನು ತಾಯಿತ ಕಟ್ಟಿ ಕೊಂಡು ಬರಲಿಕ್ಕ ಮಠಕ್ಕ ಕಳಿಸಬ್ಯಾಡ “ಎಂದು ಹೇಳಿ ಊರಿಗೆ ಹೋದ.

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ತಾಯಿತ”

  1. ರಾಜೇಂದ್ರ ಬಿ. ಶೆಟ್ಟಿ

    ಕಥೆ ಚೆನ್ನಾಗಿ ಮೂಡಿ ಬಂದಿದೆ. ಉತ್ತರ ಕನ್ನಡ ಭಾಷೆ ಕುಷಿ ಕೊಟ್ಟಿತು.
    ಮುಗ್ದರನ್ನು ಯಾವ ರೀತಿ ಮೋಸ ಮಾಡುತ್ತಾರೆಂದು ಸರಿಯಾಗಿ ತಿಳಿಸಿದ್ದೀರಿ. ಕಥೆ ಸುಖ ಅಂತ್ಯ ಗೊಂಡದ್ದು ಸಹ ಖುಷಿ ನೀಡಿತು.
    ಆದರೆ, ಮಧ್ಯದಲ್ಲಿ ಒಮ್ಮೆಲೇ ಕಥೆಯನ್ನು ಯಾಕೆ ಉತ್ತಮ ಪುರುಷದಲ್ಲಿ ಬರೆದದ್ದು ಎಂದು ಗೊತ್ತಾಗಲಿಲ್ಲ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter