ಖಿಮ್ಮತ್ತು
ದೇಹದ ಬಣ್ಣ, ಆಕಾರ
ಚೆಲ್ಲು, ಚೆಲ್ಲು ಚೆಲುವಿಕೆಗೆ
ವಿದ್ಯೆ, ಜ್ಞಾನ ಎಂದೋ
ಗೋಡೆಯ ಮೂಲೆ
ಪ್ರೀತಿ, ಸಹಕಾರ, ಹೊಂದಾಣಿಕೆ
ಸಹಬಾಳ್ವೆ, ಕಣ್ಮರೆಯಾಗುವ
ಸಂಭವ ಗೊತ್ತಿದ್ದೂ
ಬೇತಾಳನ ಹಿಂಬಾಲಿಕೆ
ಅದರ ಸುತ್ತ ಸುತ್ತ
ಎಲ್ಲಾ ಕ್ಷೇತ್ರ ಆಕ್ರಮಿಸಿದ
ಹೊಲದ ಕಳೆ
ಫಲವತ್ತಾದ ಬೆಳೆಯ
ಜೊತೆ ಜೊತೆಗೆ ನೀರು
ಸಮೃದ್ಧ ಸಿಕ್ಕು, ಬೆಳೆಯುವುದು
ಫಲವತ್ತತೆಯ ನಾಚಿಸುವ
ಹಿಂಬಾಲಿಸುವಿಕೆ, ಹೊಗಳಿಕೆ,
ಬಾಲ ಬಡಿಯುವಿಗೆ, ಸಮರ್ಥಿಸುವಿಕೆ
ಒಲೈಕೆ, ದೈವ ಕೊನೆಗೆ ದೇಹದ
ಹೊಳೆವ ನುಣುಪು ಇಲ್ಲದಿರೆ
ಗಟ್ಟಿ ನಿಲ್ಲುವುದು ಕಷ್ಟ
ಜಗತ್ತಿನ ಮೋಹ ಇದಕ್ಕೆ
ಇದಕ್ಕೆ ಜಗತ್ತಿನ ಮೋಹವಿಲ್ಲ
ಕಿರೀಟ ತೊಟ್ಟ ಅರಸನಂತೆ
ದೇಹ ಬಿಮ್ಮಿನಿಂದ ತಿರುಗುವ
ಪರಿ, ಮತಿಭ್ರಮಣೆಯಲ್ಲ
* ಮಾಲಾ ಮ.ಅಕ್ಕಿಶೆಟ್ಟಿ, ಬೆಳಗಾವಿ