ವಯಸ್ಸಾಯಿತು ನಿಮಗೆ, ಫಾದರ್ ವಿಲಿಯಂ

ಫಾದರ್ ವಿಲಿಯಂ, ನಿಮಗೆ ಮುದಿ ವಯಸು  ಈಗ 
ಕೂದಲೂ  ಹಣ್ಣಾಗಿದೆ
ಯಾವಾಗ ನೋಡಿದರೂ ಶೀರ್ಷಾಸನದ ಭಂಗಿ!
ಬೇಕೆ  ಇದು ಈ ವಯಸಿಗೆ!

ಮಗೂ, ಯೌವನದಲ್ಲಿ ನಾನೂ ಹೆದರಿದ್ದೆ :
“ಮಿದುಳಿಗೆ ಏಟಾದರೆ!”
ಮಿದುಳಿಲ್ಲವೆಂದೀಗ ಗೊತ್ತಾಗಿದೆ!
ಮರುಮರಳಿ ಹೀಗೇ ನಿಲುವೆ!

ವಯಸ್ಸಾಗಿದೆ ನಿಮಗೆ, ಫಾದರ್ ವಿಲಿಯಂ, 
ಬೊಜ್ಜು ಮೈ ಕುಣಿಯುತ್ತಿದೆ
ಹಿಂ ಪಲ್ಟಿ ಹೊಡೆಯುವಿರಿ ಬಾಗಿಲ ಪಕ್ಕ!
ಏಕೆಂದು ತಿಳಿಯಬಹುದೆ?

ನುಡಿವರು ‘ಮುನಿವರ’ ನರೆಮುಡಿ  ಕುಣಿಸುತ:
“ಕೈಕಾಲು  ಗಟ್ಟಿ ಇವೆ”
ಈ ಮುಲಾಮೇ ಅದರ ಗುಟ್ಟು, ನಿನಗೂ ಎರಡು 
ಪೆಟ್ಟಿಗೆ ಮಾರಿಬಿಡುವೆ!

 ವಯಸ್ಸಾಗಿದೆ ನಿಮಗೆ, ದವಡೆಗಳು ದುರ್ಬಲ
 ತಿನ್ನಲಾಗದು ಖಂಡಮಾಂಸ. 
 ಅದು ಹೇಗೆ ತಿಂದಿರೋ! ಮೂಳೆ, ಕೊಕ್ಕುಗಳೊಡನೆ 
 ಹೆಬ್ಬಾತು ಆಯ್ತು ಧ್ವಂಸ!

ತಾರುಣ್ಯದಿಂದಲೂ ಹೆಂಡತಿಯ  ಜೊತೆ  ಜಗಳ!  
ಬಿಡದೆ ಮಾಡಿದೆನು ವಾದ
ಗಟ್ಟಿಯಾದವು ನನ್ನ ಸ್ನಾಯು, ದವಡೆಗಳು!
ಅಳುಕಬೇಕಿಲ್ಲ ಈಗ!

ವಯಸ್ಸಾಗಿದೆ ನಿಮಗೆ, ನಿಮ್ಮ ಕಂಗಳ ಚುರುಕು
ಕುಂದಿದೆ, ನಾನೇ ಕಂಡೆ!
ನಾಸಿಕದ  ತುದಿಯಲ್ಲಿ   ಬೀಳದಂತೆ ಈಲ್ 
ನಿಲಿಸಿದಿರಿ  ಹೇಗೆ ತಂದೆ?

ಮೂರು ಪ್ರಶ್ನೆಗಳನ್ನು ಆಗಲೇ ಉತ್ತರಿಸಿದೆ  
ಅತಿಶಾಣ್ಯಾ ಆಗಬೇಡ 
ಮತ್ತೆ ಮತ್ತದೆ ಪ್ರಶ್ನೆ! ಮರಳಿ  ಮಾತಾಡಿದರೆ
ಒದ್ದುಬಿಟ್ಟೇನು ಮೂಢ!

ಒದ್ದುಬಿಟ್ಟೇನು ಮೂಢ
ಮತ್ತೆ ಮಾತಾಡಬೇಡ

  • ಮೂಲ: ಲೂಯಿಸ್ ಕಾರೊಲ್ (You are old, father William) ಕನ್ನಡಕ್ಕೆ : ಚಿಂತಾಮಣಿ ಕೊಡ್ಲೆಕೆರೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ವಯಸ್ಸಾಯಿತು ನಿಮಗೆ, ಫಾದರ್ ವಿಲಿಯಂ”

  1. Chintamani Sabhahit

    ಎಂದಿಗೂ ಮದುವೆಯಾಗಿಲ್ಲದವನ, ವೈಚಾರಿಕ ಆಯಾಮದ ವಸ್ತು ಈ ಕವಿತೆಯದು. ಹತಾಶೆಯ ಸಾಲುಗಳು ಹುರುಪಿನಿಂದ ಹೊರಬಿದ್ದಿವೆ, ಯುವಮನದಲ್ಲಿ.
    ರಸಗ್ರಹಣ ಚೆನ್ನಾಗಿ ಮೂಡಿಬಂದಿದೆ.

  2. Dr. Dinakar Madiman

    ಬನಿಯನದ ಅಂಗಿ
    ಶೀರ್ಷಾಸನದ ಭಂಗಿ
    ಮಿದುಳಿಲ್ಲದ ಮುದಿ ಮಾಮ
    ಮೈಯೆಲ್ಲಾ ಮುಲಾಮ

    ಚೆನ್ನಾಗಿದೆ, ಚೆನ್ನಾಗಿದೆ!

  3. Shashibhushana Raju

    ಇಂಗ್ಲಿಷಿನಲ್ಲೂ ಓದಿದೆ ಅನುವಾದ ಚನ್ನಾಗಿ ಮೂಡಿ ಬಂದಿದೆ

    ಮಿದುಳಿಲ್ಲವೆಂದೀಗ ಗೊತ್ತಾಗಿದೆ!😇

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai