ಹೂವಿಗೇಕೆ ಗಂಧವೆಂದು
ಕೇಳಬೇಡಿರಿ
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ
ಮಳೆ ಏತಕೆ ನಿಲ್ಲದೆಂದು
ಕೇಳಬೇಡಿರಿ
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ
ಮಗು ನಕ್ಕಿತು ಏಕೆ ಎಂದು
ಕೇಳಬೇಡಿರಿ
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ
ಒಲಿದು ಹಕ್ಕಿ ಹಾಡಿತೇಕೆ
ಕೇಳಬೇಡಿರಿ
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ
ಮುನಿದು ಬಿರುಸು ಮಾತುಗಳನು
ಆಡಬೇಡಿರಿ
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ
ಎಲ್ಲ ನನ್ನದೆಂದು ಛಲ
ಮಾಡಬೇಡಿರಿ
ರಾತ್ರಿ ನಿದ್ದೆ ಬಾರದೆಂದು
ಹೇಳಬೇಡಿರಿ
- ಚಿಂತಾಮಣಿ ಕೊಡ್ಲೆಕೆರೆ








15 thoughts on “ರಾತ್ರಿ ನಿದ್ದೆ ಬಾರದೆಂದು ”
ಸ್ಪಂದನೆಗೆ ಒಸರುವ ಕವಿ ಹೃದಯದ ಮಾರ್ದವತೆಯಸ್ವಾದವಿದು!
ಸೃಷ್ಟಿ ಸಹಜ ಕ್ರಿಯೆಗಳು ಪ್ರಶ್ನಾತೀತ .
ನಕಾರಾತ್ಮಕ ಯೋಚನೆಯಿಂದ ಮುಕ್ತ
ಸ್ವಾರ್ಥದಿಂದ ದೂರ ಎಂಬ ಸಂದೇಶ ಇದೆಯೆಂದು ನನಗ ಅನ್ನಿಸ್ತು ಗುರುವೇ….
ಧನ್ಯವಾದಗಳು ಪ್ರಿಯ ಕಾವ್ಯ ಬಂಧು
Good
ಧನ್ಯವಾದಗಳು ಪ್ರಿಯ ಕಾವ್ಯ ಬಂಧು
ಚೆನ್ನಾಗಿದೆ.
ಇಂಥ ಕವಿತೆ ಬಂದು ನಿಂತು ಮಾತನಾಡಲು
ರಾತ್ರಿ ನಿದ್ದೆ ಬಾರದೆಂದು ಹೇಗೆ ಹೇಳಲಿ?
ಧನ್ಯವಾದಗಳು ಪ್ರಿಯ ಕಾವ್ಯ ಬಂಧು
ಧನ್ಯವಾದಗಳು, ಪ್ರಿಯ ಕಾವ್ಯ ಬಂಧು
ಒಳ್ಳೆಯ ಸಾಲುಗಳು 👌👌
ಧನ್ಯವಾದಗಳು ಪ್ರಿಯ ಕಾವ್ಯ ಬಂಧು
ಸೊಗಸಾಗಿದೆ
ಧನ್ಯವಾದಗಳು ಪ್ರಿಯ ಹಿರಿಯ ಕಾವ್ಯ ಬಂಧು
ವ್ಯಕ್ತಿ ತಾ ಮಣಿಯಾಗಿರಲ್ ಮಣಿದು ಒದಗುವವು ಪದಗಳು ಕವಿತೆಯಂದದಿ. ನಿಮ್ಮದು ಸೊಗಸಾಲೆ.
ಧನ್ಯವಾದಗಳು ಪ್ರಿಯ ಕಾವ್ಯ ಬಂಧು