ಈ ಬದುಕಿಗೆಷ್ಟು ದಿನಗಳು…!

ಸದ್ದಿಲ್ಲದೆ ಕಳೆದು ಹೋಗುತ್ತಿವೆ
ನಿನ್ನೆ ನಕ್ಕು ನಲಿದ ಮನಸ್ಸುಗಳು
ನಾಳೆ ಅರಳಲಿರುವ ಕನಸುಗಳು
ಜೀವದ ಉಸಿರೇ ಆದ ಜೀವಗಳು

ಈ ಇಹದಲಿ ಯಾರರಿವರು
ಇಂದಿನ ತೀರ್ಪು ಯಾವುದೆಂದು
ಯಾರಿಗೂ ತಿಳಿಯುವುದೇ ಇಲ್ಲ
ಊಹೆಯ ತೆಕ್ಕೆಗೆ ಸಿಗುವುದೇ ಇಲ್ಲ
ಅರಿವಿನ ಪರದೆಗೆ ನಿಲುಕುವುದೇ ಇಲ್ಲ
ಜೀವನದ ನಡೆಹಾದಿಯಲಿ
ಈ ಬದುಕಿಗೆಷ್ಟು ದಿನಗಳು…?

ಸಾವಿಗೆ ಎಷ್ಟೊಂದು ಕವಲುಗಳು…!
ಗೆಲುವಿನ ಕಾಲಡಿಯಲಿ ಆಹುತಿಯಾದವುಗಳು
ಮತ ಭೇದದ ಕಿಡಿಗೆ ಸೀಳಿಕೊಂಡ ಹೃದಯಗಳು
ಬೆಂಕಿಯಲ್ಲಿ ಬೆಂದ  ಹಸಿ ದೇಹಗಳು
ಹಳಿಗಳಲಿ ರಕ್ತಸಿಕ್ತವಾದವುಗಳು

ಯಾರ ಸಾವಿನ ಮನೆಯು ಎಲ್ಲಿಹುದೋ
ಯಾರ ಇರುವು ಎಂದು ಕೊನೆಯೋ
ಯಾರ ಋಣಕೆ ಯಾವ ಮಣ್ಣೋ…!
ಯಾರ ಅಣತಿಯಿದು
 ಯಾರು ಬರೆದಿಟ್ಟವರು? 

ಕಣ್ಣ ಮುಂದೆ ಕಾಣುವಂತೆ
ಬಾಳ ಸತ್ಯ ಅರಿಯುವಂತೆ
ವಿಧಿಯಾಟ ತೋರಿದರೂ
ಅಳಿದಿಲ್ಲವಿನ್ನೂ ಜಗದೊಳಗೆ ತಾಮಸ ಭಾವಗಳು  

ಹುಟ್ಟಿನ ಮನೆಯಿಂದ 
ಹೊರಟ ಪಯಣದ ಕೊನೆ
ಯಾವ ಕ್ಷಣವೋ…!
ಎಲ್ಲ ಸಾವಿನ ಸರದಿಯಲಿ ನಿಂತವರು

  • ಅನಿತಾ ಪಿ.ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಈ ಬದುಕಿಗೆಷ್ಟು ದಿನಗಳು…!”

  1. Chintamani Sabhahit

    ಬೆಳಗಿನ ಉಲ್ಲಾಸದಿಂದ ಹೊರಟ ಯಾವ ಮನಸ್ಸಿಗೂ ಗೊತ್ತಿಲ್ಲ – ಪಯಣದ ಹಾದಿಯಲ್ಲಿರಬಹುದಾದ ಬಾಧಕ ತೊಡಕುಗಳು; ಕನಸುಗಳು ಅರಳುವ ಮುನ್ನವೇ ಉಸಿರು ಬಿಡುವ ಭೀಕರ ಸನ್ನಿವೇಶಗಳ ಹಿನ್ನೆಲೆಯಲ್ಲಿ ಉಂಟಾಗುವ ಅನಿರೀಕ್ಷಿತ ಅನಾಹುತಗಳು, ಯಾವುದೋ ಲೇಖನಿಯ ಸುದ್ದಿಯಾಗಿ ಬಿಡುವ ಬದುಕಿನ ನಶ್ವರತೆಯ ಚಿಂತನೆ, ಚಿತ್ರಣ ಮಾತ್ರ ಜೀವಂತವಾಗಿ, ಸಾವಿನ ಕವಲುಗಳನ್ನು ಗುರುತಿಸುವಾಗ, ಚಕ್ಷುಗಳಲ್ಲಿ ಮೂಡುವ ಆತಂಕದ, ವಿಷಾದದ ಛಾಯೆ, ಮಣ್ಣಾಗಿ ಹೋಗುವತನಕ ಕಾಣುವವರನ್ನು, ಸಾವಿನ ಸರದಿಯಲ್ಲಿ ನಿಂತವರೆಂದು ಗುರುತಿಸುವಾಗ—-
    ವಿಶ್ವ ಸಮಾಜದ ಪ್ರಕೃತ, ಪ್ರಕ್ಷುಬ್ಧ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ ಈ ಕವಿತೆ: ಮುಷ್ಟಿಯಿಂದ ಉದುರುವ ಶ್ರೀಮಂತ ಸಾಕ್ಷಿಗಳಂತೆ!

    ಅಭಿನಂದನೆಗಳು!

    1. Raghavendra Mangalore

      ತುಂಬಾ ಅದ್ಭುತ ಮತ್ತು ಭಾವಪೂರ್ಣ ಕವಿತೆ .

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai