ಅಸ್ತಿತ್ವ

ಮಳೆ ಬಂದು ಬಿಟ್ಟು ಹೋದ ಮೇಲೆ
ತೊಟ್ಟಕ್ಕಿ ತೊಟ್ಟಕ್ಕಿ ಬಸವಳಿದ ಎಲೆಯ ತುದಿಯಲ್ಲಿ
ಕೊನೆಯದಾಗಿ ನಿಂತ ಒಂದು ನೀರ ಹನಿಗೆ
ಅಲ್ಲಿ ನಿಲ್ಲಲು ಆಗದು
ಅಥವಾ ಕೆಳಗೆ ಬೀಳಲು ಮನಸ್ಸು ಒಪ್ಪದು
ಎಂಬಂತಿದೆ

ಮರ ಮಳೆಯಲ್ಲಿ ನೆನೆದು ನೆನೆದು
ನೀರಿಗೆ ಬಿದ್ದ ನಾಯಿ ಮೇಲೆದ್ದು ಬಂದು
ಮೈಕೊಡವಿಕೊಳ್ಳುವ ಹಾಗೆ ಕೊಡಹಲು ಬಯಸಿ
ಆಗದೇ ಇದ್ದು
ಎಲೆಗಳಲ್ಲಿರುವ ನೀರಹನಿಗಳು
ಬೀಳಬಾರದೆ ಬೇಗ ಎಂದು
ಧ್ಯಾನಿಸುವಂತೆ ನಿಂತಂತಿದೆ

ಕೊಡೆ ಇರಲಿಲ್ಲ ಮನೆಯಿಂದ ಹೊರಡುವಾಗ ನನಗೆ
ಆಶ್ರಯಿಸಿದ್ದೆ ಮಳೆಗೆ ಆ ಮರವ
ಮಳೆಬಿಟ್ಟ ಮೇಲೆ ಹೊರಡುತ್ತಿದ್ದೇನೆ ಈಗ ಎನ್ನುವಾಗ
ಒಂದು ಎಲೆಯ ಕೊನೆಯ ನೀರಹನಿ
ತಲೆಗೆ ಬಿದ್ದಂತಾಯಿತು ಫಕ್ಕನೆ

ತಲೆ ಒರಸಿಕೊಂಡೆ
ಒದ್ದೆಯಾದ ತಲೆಯಲ್ಲಿ ಆ ಹನಿಯ ಅಸ್ತಿತ್ವ
ಈಗ ಇರಲಿಲ್ಲವಾಗಿ

  • ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಅಸ್ತಿತ್ವ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai