ಎರಡು ಮೋಡಗಳ ಡಿಕ್ಕಿ
ಮೌನವ ಮಾತಾಗಿಸಿದಂತೆ
ಬ್ರಹ್ಮಾಂಡದಲ್ಲೆಲ್ಲೋ ಮಾತು ಮೌನವಾಗಿ
ಮೌನ ಮಾತಾಗಿ ಪರಿವರ್ತನೆಗೊಳ್ಳುತ್ತಿರುತ್ತದೆ
ಅತೀ ಪ್ರೇಮವೂ ಹೀಗೆ
ಕಡಿವಾಣವಾಗಿ, ಜೀವರಸವ ಹಿಂಡಿ
ಘಾಟಾಗಿ ಉಸಿರುಗಟ್ಟಿಸುತ್ತದೆ
ಬಾಳಹಾದಿಯ ಹಲವು ತಿರುವುಗಳ ನಡುವೆ
ಮರೆಯಾಗುವುದು ಕ್ಷಣಿಕವಷ್ಟೆ
ದುತ್ತೆಂದು ಒಂದು ಕಣಿವೆ ಆವರಿಸುತ್ತದೆ
ಎಲ್ಲವೂ ಹೀಗೆ, ಪಡೆಯುವಾಗಿನವಸರ
ಕೊಡುವಾಗಿರುವುದಿಲ್ಲ
ಕೊಟ್ಟು ಪಡೆಯುವುದರ ನಡುವೆ ಎಲ್ಲ ಕಳೆದುಹೋಗಿರುತ್ತದೆ
ಕವಿತೆ ತನ್ನಷ್ಟಕ್ಕೆ ತಾನೇ ಅದ್ಬುತವಾಗುವುದಿಲ್ಲ
ಪ್ರೇಮಸುರಿಸಿ ಬೆಳೆಸಿದ ಹೂವಿನಂತೆ
ಆದರಿಸಿದಾಗ ಅರಳುತ್ತದೆ
ಪ್ರಕೃತಿ ಮೌನವಾಗಿ ಮಾತಾನಾಡುತ್ತದೆ
ಕೇಳುವ ವ್ಯವಧಾನ ಇರಬೇಕು
ಪ್ರೇಮವಾಗಲಿ, ಕಾವ್ಯವಾಗಲಿ
ಉತ್ಸವವಲ್ಲ
ಅದೊಂದು ಧ್ಯಾನಸ್ಥ ಸ್ಥಿತಿ
ಸಮಯ ಸರಿಯುತ್ತಿರುತ್ತದೆ
ಕಾಲ ಮಾಯವಾಗುವ ಮುನ್ನ
ಮೋಡದಿಂದ ಜಾರಿದ ಹನಿಯೊಂದು
ಬೊಗೆಸೆಯಲಿ ಮುತ್ತಾದರೆ ಸಾಕು!
- ಎಂ.ವಿ. ಶಶಿಭೂಷಣ ರಾಜು, ಅಮೇರಿಕ
2 thoughts on “ಪ್ರೇಮದ ಘಾಟು”
ಉತ್ತಮ ಕವಿತೆ ..ಇಷ್ಟವಾಯ್ರು
ಧನ್ಯವಾದಗಳು