ನೀರ ಹನಿ ಜೊತೆ ನುಗ್ಗಿ
ಸೂರ್ಯನ ಬಿಳಿ ಬೆಳಕು
ಮೂಡುವುದು ಕಾಮನಬಿಲ್ಲು
ಜೀವನದಲ್ಲೂ ಬೇಕು
ಈ ವಕ್ರೀಭವನ
ಏಕತೆಯ ಶಕ್ತಿ
ವರ್ಣ ಪಟಲದ ಮೂಲಕ
ಸಾಗಿ ಕಾಣಲು
ಸುಂದರ ಮಳೆಬಿಲ್ಲು. !!
ಕೆಂಪಲ್ಲಿ ಜೀವನದ ಕಿಡಿ
ರೋಮಾಂಚನ ಯೌವ್ವನದ ಶಕ್ತಿ
ಕಲಿಕೆಯ ಉತ್ಸಾಹ ,ಕನಸುಗಳ
ನೇಕಾರ ,ಅನ್ವೇಷಣೆಯ
ಕಾಯುವ ಕಿತ್ತಾಳೆ
ಹಳದಿಯ ಬೆಳಕು
ಭರವಸೆಯ ಹುರುಪು. !!
ಸಾಮರಸ್ಯದ ಸಮತೋಲನ
ಸಾಂತ್ವಾನ ನೀಡುವುದು ಹಸಿರು
ಜೀವನದ ಉಬ್ಬರದ ಹರಿವಿನಲಿ
ಶಾಂತಿಯ ಸ್ಥಿರತೆ
ಸಿಗುವುದು ನೀಲ ಬಾನಲಿ. !!
ಪ್ರಜ್ಞೆ ಮತ್ತು ಉಪ ಪ್ರಜ್ಞೆ
ನಡುವಿನ ಕೊಂಡಿ
ಉದನೀಲಿ(ಇಂಡಿಗೂ)ಯ ರಹಸ್ಯ
ಜೀವನದ ವಿಪರೀತ
ಬುದ್ಧಿವಂತಿಕೆಯ ಪಾಠ
ನೇರಳೆಯ ರೂಪಾಂತರ !!
ವಿಭಿನ್ನ ಭಾವನೆ
ಸಾಯದ ಕಲ್ಪನೆ
ಹುಟ್ಟು -ಸಾವು, ಸುಖ -ದುಃಖ
ವೈವಿಧ್ಯಮಯ ಅಲೆಗೊಂಚಲು
ಅಬ್ಬರದ ಬಳಿಕ ಸುಂದರ ಅಂತ್ಯ
ಇದೇ ನಮ್ಮ ಬಾಳಿನ ಇಂದ್ರಧನುಸ್ಸು !!!
* ಅಶ್ವಿತಾ ಶೆಟ್ಟಿ, ಇನೋಳಿ
6 thoughts on “ಇಂದ್ರಧನಸ್ಸು”
ಚೆಂದದ ಕವಿತೆ…. ಜೀವನದ ಬಣ್ಣಗಳ…ಅನಾವರಣ..
ಧನ್ಯವಾದಗಳು ಸರ್
ಚೆನ್ನಾಗಿದೆ ಕವಿತೆ. ಅಭಿನಂದನೆಗಳು. ಹೊಸ ರೂಪಕಗಳನ್ನು ಬಳಸಿದ್ದಾರೆ. ಸಂತೋಷ ಆಯಿತು.
ಧನ್ಯವಾದಗಳು ಸರ್
ಕವಿತೆ ನಿಜವಾಗ್ಲೂ ಇಂದ್ರಧನಸ್ಸು ತರಹಾನೆ ಖುಷಿ ಕೊಡ್ತು…
ಧನ್ಯವಾದಗಳು ಸರ್