ಮಹಿಳಾ ದಿನಾಚರಣೆ

ಬಂದಿದೆ ಮತ್ತೊಂದು ಮಹಿಳಾ ದಿನಾಚರಣೆ,
ಸಿದ್ಧವಾಗಿದೆ ವೇದಿಕೆ ಪ್ರದರ್ಶನಕೆ!
ಮತ್ತೆ ಸತ್ಕಾರ, ಸನ್ಮಾನಗಳ ಮೆರವಣಿಗೆ,
ಮಾಧ್ಯಮದಲ್ಲಿ ನರ್ತಿಸುತ್ತಿದೆ ಬರವಣಿಗೆ!
ಸಭೆಗಳಲ್ಲಿ, ಸೀರೆಗಳ ಆಡಂಬರದಲ್ಲಿ
ಮಹಿಳಾಪರ ಭಾಷಣ, ಘೋಷಣೆ!
ಹೀಗಾಗಬೇಕೆ ಬಹಿರಂಗದಲ್ಲಿ ಪ್ರದರ್ಶನದಲ್ಲಿ ಮಹಿಳಾ ದಿನಾಚರಣೆ?

ಸಾಕು, ಸಾಕು ವೇದಿಕೆಯ ನಾಟಕ
ಒಂದೇ ಒಂದು ದಿನ ಹುಟ್ಟಿ
ಮರುದಿನ ಸಾಯುವ ಜಾಗರ!
ಹೋಗಬೇಕು ವೇದನೆಯ ಕಾಡಿಗೆ,
ಕಾಂತಾರದಲ್ಲಡಗಿದ ಹೆಣ್ಣ ಹಾಡಿಗೆ;
ಹೋಗಬೇಕು ದೌರ್ಜನ್ಯದ ತಾಣಕ್ಕೆ,
ಕಟ್ಟಬೇಕಲ್ಲಿ ಧೈರ್ಯ ದುರ್ಗಗಳ;
ಸಿದ್ಧಗೊಳ್ಳಬೇಕು ಮನಸು, ಕಾಯ
ತಡೆಯುವುದಕೆ ಹೆಣ್ಣ ಕಂಬನಿ;
ಮಾಗಬೇಕು ಮನ ಮನದಲ್ಲೂ ಧ್ವನಿ. ತೆರೆಯುವುದಾಗ ಹೊಸ ದಿಕ್ಕು, ದಾರಿ!

  • ಸೀಮಾ ಕುಲಕರ್ಣಿ, ಕೌಲಾಲಂಪುರ
    ಮಲೇಶಿಯ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter