ಕಾಂಕ್ರೀಟ್ ಗೋಡೆ , ಉಕ್ಕಿನ ಗ್ರಿಲ್
ನಡುವೆ ಅರಳುವ ನನ್ನ
ಬಾಲ್ಕನಿ ಹೂವುಗಳು !
ವರ್ಣರಂಜಿತ ಸಿಂಹಾಸನದಿ
ಅದ್ದೂರಿ ಸಿಹಿಯೂಟ
ಉಣ್ಣುವ ಪ್ರವಾಸಿಗರ
ನೋಟ ಬಲು ಉತ್ಕೃಷ್ಟ !
ಕಾರ್ಯನಿರತ ರೆಕ್ಕೆ
ರೋಮಭರಿತ ದೇಹ
ಹಳದಿ , ಕಪ್ಪು ಪಟ್ಟೆಯ
ಧರಿಸಿ ನಲಿಯುವ
ದೃಶ್ಯ ಬಲು ರೋಮಾಂಚಕ!
ಮೂಡನ ರಶ್ಮಿಯ ಜೊತೆ
ನಲಿಯುತ ಕೂಡಿ
ಹಾಕುವುವು ಮಕರಂದ
ಕೌಶಲ್ಯದಿ ಮಾಡುವ
ಪರಾಗಸ್ಪರ್ಶ
ಆಹಾ! ವರ್ಣನಾತೀತ!
ಅತಿಥಿಯ ಆಗಮನಕ್ಕಾಗಿ
ಉತ್ಸುಕದಿಂದ ಕಾಯುವ
ತುಳಸಿಯ ಸಣ್ಣ
ನೇರಳೆ ಹೂವುಗಳು
ಮಧುಗಳ ಕಾಮಿಸುವ
ಮಧು ಕಾಮಿನಿಯರು
ಗೊಂಡೆ , ಜೀನಿಯ
ಮಲ್ಲಿಗೆ , ಗುಲಾಬಿಯರು.
ಹೂವು ದುಂಬಿ ಮಿಲನ
ತಂಗಾಳಿಯ ಕಂಪನ
ಭ್ರಮರಗಳ ಒತ್ತಾಸೆ
ಸಸ್ಯಗಳ ಹೊಸ
ಸಂತಾನೋತ್ಪತ್ತಿ
ಭಲೇ ! ಪ್ರಕೃತಿಯ ಪವಾಡ!
- ಅಶ್ವಿತಾ ಶೆಟ್ಟಿ ಇನೋಳಿ
4 thoughts on “ ಝೇಂಕರಿಸುವ ಅತಿಥಿ ”
ಚೆನ್ನಾಗಿದೆ. ಅಭಿನಂದನೆಗಳು
ಧನ್ಯವಾದಗಳು ಸರ್
ಪ್ರಕೃತಿ ಪವಾಡ ವನ್ನು ಅತೀ ಸುಂದರ ವಾಗಿ
ವರ್ಣಿಸಿ ಕನ್ನಡ ಸಾಹಿತ್ಯ ದ ರಸದೌತಣ
ನೀಡಿದ್ದೀರಿ.
ಧನ್ಯವಾದಗಳು
