ಅಧ್ಯಯನಕ್ಕೆಂದು
ಕುಳಿತಿದ್ದೆ ಪ್ರತ್ಯೇಕ
ಮಹಡಿಯ ಕೊಠಡಿಯಲ್ಲಿ ಅಂದು
ಕಳೆದ ಬಾರಿ ಬಂದಿದ್ದೆ ದ್ವಿತೀಯ
ಈ ಬಾರಿ ಬೇಕೇ ಬೇಕು
ಪ್ರಥಮ ಎಂದು
ಪ್ರತಿಸ್ಪರ್ಧಿಗೊಂದು ಪೈಪೋಟಿ
ಕಿಟಕಿ ಗಾಜಿನ ಪ್ರತಿಬಿಂಬ ಕಂಡು
ಹಾರಿ ಬಂತು ಮರಕುಟಿಕ ಒಂದು
ಸತ್ಯದ ಅರಿವಿಲ್ಲದೆ
ಪ್ರತಿಬಿಂಬದ ಬೆಳಕಲ್ಲೆ
ಹೋರಾಡುತ್ತಿತ್ತು ತನ್ನಲ್ಲೆ
ಪಟ್ಟು ಬಿಡದ ಶಕ್ತಿಯಲ್ಲೆ
ನೆರಳ ಶತ್ರೂ…..
ಬಿಡುವುದಿಲ್ಲ ಪಟ್ಟು i
ಕುಟುಕಿಗೆ ಪ್ರತಿ ಕುಟುಕು
ಇಲ್ಲದ ಪ್ರತಿಸ್ಪರ್ಧಿಯ
ಉಪಸ್ಥಿತಿ
ಗ್ರಹಿಸಿದ ಬೆದರಿಕೆ
ಒಂದು ದುರಂತ ನ್ಯೂನತೆ
ಮರಕುಟಿಕನ ತಪ್ಪಾದ ಕುಟುಕು
ತಾನೇ ಸೃಷ್ಟಿಸಿದ ಶತ್ರುವಿನ ಮೆಲುಕು
ಮಾನವನ ಕಲಹವೂ ಹಾಗೆ
ಕೇವಲ ಭಯದ ಪ್ರತಿಬಿಂಬ
ಯಾರು ಇಲ್ಲ ಪ್ರತಿಸ್ಪರ್ಧಿ !
* ಅಶ್ವಿತಾ ಶೆಟ್ಟಿ ಇನೋಳಿ
9 thoughts on “ಮರಕುಟಿಕ ಮತ್ತು ಪ್ರತಿಸ್ಪರ್ಧಿ”
Ashwitha i know you are talented and have great knowledge in all literature works god bless you congratulations
Thank so much Juna
ತುಂಬಾ ಚೆನ್ನಾಗಿದೆ ಕವಿತೆ. ಕವಿತೆ ಪ್ರತಿಪಾದಿಸಿದ ವಿಚಾರ ಕೂಡ ಇಷ್ಟವಾಯಿತು. ಅಭಿನಂದನೆಗಳು.
ಧನ್ಯವಾದಗಳು ಸರ್
ಅರ್ಥ ಪೂರ್ಣ ಕವನ.
ಥ್ಯಾಂಕ್ ಯು
Thank so much Juna
ತುಂಬಾ ಅರ್ಥಪೂರ್ಣ ಕವಿತೆ. ಅಭಿನಂದನೆಗಳು ಮೇಡಂ.
ಧನ್ಯವಾದಗಳು ಸರ್