ಸಾಹಿತ್ಯ ಗಂಗಾ ಧಾರವಾಡ ಮತ್ತು ಗೋಲ್ಡನ್ ಗ್ಲೋಬ್ ಟ್ರಸ್ಟ್ ನವ ದೆಹಲಿ ಇವರ ಸಹಯೋಗದಲ್ಲಿ ಮೂಲ ವಿಜ್ಞಾನ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ಮತ್ತು ಸಂಶೋಧನೆ ಮಾಡುತ್ತಿರುವ ಆಯ್ದ 20 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ.3500=00 ಪ್ರೋತ್ಸಾಹ ಧನ ನೀಡಲಾಗುವುದು. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನಿಯಮಗಳು:
○ ಮೂಲ ವಿಜ್ಞಾನ ವಿಷಯದಲ್ಲಿ ಪದವಿ (BSc.), ಸ್ನಾತಕೋತ್ತರ ಪದವಿ (MSc.), ಶೈಕ್ಷಣಿಕ ಪದವಿ (BEd., MEd.) ಓದುತ್ತಿರುವ ಮತ್ತು ಸಂಶೋಧನೆ (Phd.) ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
○ ಸದ್ಯ ಮೇಲ್ಕಂಡ ಪದವಿ ಓದುತ್ತಿರುವ, ಸಂಶೋಧನೆ ಮಾಡುತ್ತಿರುವ ಮತ್ತು ಕಳೆದ ವರ್ಷ ಕೋರ್ಸು ಮುಗಿಸಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರು.
○ ಅರ್ಹ ವಿದ್ಯಾರ್ಥಿಗಳು ಕಳೆದ ಸೆಮೆಸ್ಟರ್ ಪರೀಕ್ಷೆಯ ಅಂಕಪಟ್ಟಿ, ಕಾಲೇಜು ಅಥವಾ ವಿವಿಯ ಗುರುತಿನ ಚೀಟಿ, ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಇತ್ತೀಚೆಗಿನ ಒಂದು ಭಾವಚಿತ್ರ – ಈ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಥವಾ ಫೋಟೋ ತೆಗೆದು ವಾಟ್ಸಪ್ ಮೂಲಕ ಕಳುಹಿಸಬೇಕು.
○ ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡೆ – ಹೀಗೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ಅವುಗಳ ಬಗ್ಗೆ ಇರುವ ದಾಖಲೆ ಕಳುಹಿಸಿದಲ್ಲಿ ಪರಿಗಣಿಸಲಾಗುವುದು.
○ ಪ್ರತಿಭೆಯೊಂದೇ ಆಯ್ಕೆಯ ಏಕೈಕ ಮಾನದಂಡ.
○ ಕಳೆದ ವರ್ಷ ಪ್ರೋತ್ಸಾಹ ಧನ ಪಡೆದವರು ಈ ವರ್ಷ ಅರ್ಜಿ ಸಲ್ಲಿಸುವಂತಿಲ್ಲ.
○ ಆಸಕ್ತ ವಿದ್ಯಾರ್ಥಿಗಳು ಫೆಬ್ರುವರಿ 06, 2025ರೊಳಗಾಗಿ ಅರ್ಜಿ ಸಲ್ಲಿಸಬೇಕು.
○ ಆಯ್ಕೆ ಪಟ್ಟಿಯನ್ನು ಫೆಬ್ರುವರಿ 12, 2025ರಂದು ಪ್ರಕಟಿಸಲಾಗುವುದು.
○ +91 9110687473 ನಂಬರಿಗೆ ವಾಟ್ಸಪ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ವಿಕಾಸ ಹೊಸಮನಿ – 9110687473
ಸುಭಾಷ ಪಟ್ಟಾಜೆ – 9645081966
ಸೋಮನಾಥ ಶೇಷಗಿರಿ – 8197899849