ಗಝಲ್
(ತಾಯಿ ಭುವನೇಶ್ವರಿಗೆ ಅಕ್ಷರ ನಮನ )
ಉಕ್ಕುತಿಹ ಭಾವಗಳಿಗೆ ಲಿಖಿತ ಸಾಕ್ಷಿಯಾದವಳು ಅವಳು
ಲೆಕ್ಕಣಿಕೆಯು ಗೈದ ಉಪಾಸನೆಗೆ ಮೈದಳೆದವಳು ಅವಳು
ಮೊದಲಕ್ಷರ ಅಕ್ಷಯವಾಗಿಸಿತು ಸಾಹಿತ್ಯ ಜೋಳಿಗೆಯನು
ಅಜ್ಞತೆಯ ಮುಸುಕ ಸರಿಸಿ ಸುದೀಪ್ತಿ ಬೀರಿದವಳು ಅವಳು
ಬರಹದೊಡನಾಟದ ನಡೆಯು ಬದಲಿಸಿತು ಬಾಳ ಪಥವ
ಕಲ್ಪನೆಯು ಮೀಟುವ ರಾಗಗಳಿಗೆ ತಾಳವಾದವಳು ಅವಳು
ಸಾಲು ಶಬ್ಧಗಳ ಸoಸರ್ಗವು ಸಮ್ಮೋಹಕತೆಯ ಸೆಲೆಯು
ನಂಬುಗೆಯಲಿ ನಮಿಸಲು ಪಂಥ ಗೆಲ್ಲಿಸಿದವಳು ಅವಳು
ಮರೆಯಲೆಂತು ಕನ್ನಡಬ್ಬೆ ಕರುಣಿಸಿದ ಸುಜ್ಞಾನ ಕುಸುಮವ
ಮಸ್ತಕದಿ ಉದಿಸಿ ಮಾನಸದಲಿ ಮಿಳಿತವಾದವಳು ಅವಳು
ಕುಸುಮಾ. ಜಿ. ಭಟ್
1 thought on “ಗಝಲ್”
ಚಂದದ ಕನ್ನಡಬ್ಬೆಯ ಕವನ


